ಭಾರತ ಜೋಡೋ ಯಾತ್ರೆ ಸಮಾಪ್ತಿ ನಂತರ ಶ್ರೀನಗರದ ಹಿಮಾವೃತ ಪ್ರದೇಶಗಳಲ್ಲಿ ಮಕ್ಕಳಂತೆ ಆಟವಾಡಿದ ಡಿಕೆ ಸಹೋದರರು
ಕನ್ನಡದಲ್ಲಿ ಹುಟ್ಟುತ್ತಾ ಅಣ್ಣ-ತಮ್ಮಂದಿರು ಬೆಳೀತಾ ದಾಯಾದಿಗಳು ಅನ್ನೋ ಮಾತಿದೆ. ಆದರೆ ಡಿಕೆ ಸಹೋದರರಿಗೆ ಈ ಮಾತು ಅನ್ವಯಿಸುವುದಿಲ್ಲ ಅನಿಸುತ್ತದೆ.
ಶ್ರೀನಗರ: ಸುಮಾರು ನಾಲ್ಕು ತಿಂಗಳ ಹಿಂದೆ ಕನ್ಯಾಕುಮಾರಿಯಿಂದ ಶುರುವಾಗಿದ್ದ ರಾಹುಲ್ ಗಾಂಧಿಯವರ (Rahul Gandhi) ಭಾರತ್ ಜೋಡೋ ಯಾತ್ರೆ ಇಂದು ಕಾಶ್ಮೀರದಲ್ಲಿ ಕೊನೆಗೊಂಡಿದೆ. ಯಾತ್ರೆಯ ಸಮಾರೋಪ ಕಾರ್ಯಕ್ರಮದಲ್ಲಿ ಭಾಗಿಯಾಗಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಸೇರಿದಂತೆ ರಾಜ್ಯದ ಕೆಲ ನಾಯಕರು ಹೋಗಿದ್ದರು. ಸಮಾರಂಭದ ನಂತರ ಶಿವಕುಮಾರ ಮತ್ತು ಅವರ ಸಹೋದರ ಮತ್ತು ಸಂಸದ ಡಿಕೆ ಸುರೇಶ (DK Suresh) ಅವರು ಶ್ರೀನಗರದಲ್ಲಿ ಬೆಳಗ್ಗೆಯಿಂದ ಒಂದೇ ಸಮನೆ ಸುರಿಯುತ್ತಿದ್ದ ಹಿಮದಲ್ಲಿ ಆಟವಾಡುತ್ತಾ ಮಜವಾಗಿ ಕಾಲ ಕಳೆದರು. ಕನ್ನಡದಲ್ಲಿ ಹುಟ್ಟುತ್ತಾ ಅಣ್ಣ-ತಮ್ಮಂದಿರು ಬೆಳೀತಾ ದಾಯಾದಿಗಳು ಅನ್ನೋ ಮಾತಿದೆ. ಆದರೆ ಡಿಕೆ ಸಹೋದರರಿಗೆ ಈ ಮಾತು ಅನ್ವಯಿಸುವುದಿಲ್ಲ ಅನಿಸುತ್ತದೆ, ಅವರ ನಡುವಿನ ಭ್ರಾತೃಪ್ರೇಮ ಈಗಲೂ ಕಡಿಮೆಯಾಗಿಲ್ಲ. ಶಿವಕುಮಾರ ಹಿಮದ ಕಣಗಳನ್ನು ಒಗ್ಗೂಡಿಸಿ ಸುರೇಶ ತಲೆ ಮೇಲೆ ತಲೆಮೇಲೆ ಸುರಿದಾಗ ಇಬ್ಬರ ನಡುವೆ ನಗುವಿನ ವಿನಿಮಯ ಅಪ್ಯಾಯತೆಯನ್ನು ಪ್ರದರ್ಶಿಸುತ್ತದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ