‘ನನ್ನ ಕೊಲೆಗೆ ಡಿಕೆಶಿ ಸಹೋದರರು ಸೇರಿ 4 ಜನರಿಂದ ಸ್ಕೆಚ್’: ಮುನಿರತ್ನ ಆರೋಪ
ತಮ್ಮನ್ನು ಕೊಲೆ ಮಾಡಲು ಸಂಚು ಹೂಡಲಾಗಿದೆ ಎಂದು ಬಿಜೆಪಿ ಶಾಸಕ ಮುನಿರತ್ನ ಗಂಭೀರ ಆರೋಪ ಮಾಡಿದ್ದಾರೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮಾಜಿ ಸಂಸದ ಡಿಕೆ ಸುರೇಶ್ ಹಾಗೂ ಇನ್ನಿಬ್ಬರ ವಿರುದ್ಧ ಅವರು ಆರೋಪ ಮಾಡಿದ್ದಾರೆ. ತಾವು ಮಾಡಿರುವ ಆರೋಪದ ಬಗ್ಗೆ ಅವರು ಟಿವಿ9 ಜೊತೆ ಮಾತುಕತೆ ನಡೆಸಿದ್ದಾರೆ. ವಿಡಿಯೋ ಇಲ್ಲಿದೆ.
ಬೆಂಗಳೂರು, ಮಾರ್ಚ್ 19: ಡಿಸಿಎಂ ಡಿಕೆ ಶಿವಕುಮಾರ್, ಕಾಂಗ್ರೆಸ್ ನಾಯಕ ಡಿಕೆ ಸುರೇಶ್ ಹಾಗೂ ಇನ್ನಿಬ್ಬರು ತಮ್ಮ ಕೊಲೆ ಮಾಡಲು ಸಂಚು ಹೂಡಿದ್ದಾರೆ ಎಂದು ಬಿಜೆಪಿ ಶಾಸಕ ಮುನಿರತ್ನ ಗಂಭೀರ ಆರೋಪ ಮಾಡಿದ್ದಾರೆ. ಕುಸುಮಾರನ್ನು ಶಾಸಕರನ್ನಾಗಿ ಮಾಡಲು ತಮ್ಮ ಕೊಲೆಗೆ ಸಂಚುರೂಪಿಸಲಾಗಿದೆ ಎಂದು ಅವರು ಆ ರೂಪಿಸಿದ್ದಾರೆ. ಇದೀಗ ಕುರಿತು ‘ಟಿವಿ9’ ಜೊತೆ ಮುನಿರತ್ನ ನಡೆಸಿರುವ ಮಾತುಕತೆಯ ವಿಡಿಯೋ ಇಲ್ಲಿದೆ.