ಬಳ್ಳಾರಿ: ಮಲ್ಲಿಕಾರ್ಜುನ ಖರ್ಗೆ ವೇದಿಕೆಗೆ ಆಗಮಿಸಿದಾಗ ಕುಳಿತಿದ್ದ ಡಿಕೆ ಶಿವಕುಮಾರ ಮೇಲೇಳಲಿಲ್ಲ!
ಅವರು ವೇದಿಕೆ ಮೇಲೆ ಬರುತ್ತಿದ್ದಂತೆ ಅಲ್ಲಿರುವ ನಾಯಕರೆಲ್ಲ ಎದ್ದು ನಿಂತು ನಮಸ್ಕರಿಸುತ್ತಿದ್ದಾರೆ ಮತ್ತು ಕೆಲವರು ಕಾಲು ಮುಟ್ಟಿ ಗೌರವ ಸೂಚಿಸುತ್ತಿದ್ದಾರೆ. ಆದರೆ, ಶಿವಕುಮಾರ ಮಾತ್ರ ಖರ್ಗೆ ಬಂದಾಗ ಎದ್ದು ನಿಲ್ಲುವುದು ಹಾಗಿರಲಿ, ಅವರತ್ತ ನೋಡಲೂ ಇಲ್ಲ.
ಬಳ್ಳಾರಿ: ಪ್ರಾಯಶಃ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಅವರ ಈ ಧೋರಣೆಯೇ ಪಕ್ಷದ ಹಿರಿಯ ನಾಯಕರಿಗೆ ಪಥ್ಯವಾಗುತ್ತಿಲ್ಲ. ಭಾರತ ಜೋಡೊ ಯಾತ್ರೆಯ ಭಾಗವಾಗಿ ಬಳ್ಳಾರಿಯಲ್ಲಿ (Ballari) ನಡೆಯುತ್ತಿರುವ ಬೃಹತ್ ಸಮಾವೇಶದಿಂದ ಲಭ್ಯವಾಗಿರುವ ಈ ವಿಡಿಯೋ ನಾವು ಹೇಳಲಿಚ್ಛಿಸುತ್ತಿರುವ ಸಂಗತಿಯನ್ನು ನೀವು ಅರ್ಥಮಾಡಿಕೊಳ್ಳಬಹುದು. ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಪಕ್ಷಕ್ಕೆ ತಮ್ಮ ಜೀವ ತೇದಿದ್ದಾರೆ ಮತ್ತು ಅವರ ನಿಷ್ಠೆ ಪ್ರಶ್ನಾತೀತ. ನಾಳೆ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಆಗಬಹುದು. ಅವರು ವೇದಿಕೆ ಮೇಲೆ ಬರುತ್ತಿದ್ದಂತೆ ಅಲ್ಲಿರುವ ನಾಯಕರೆಲ್ಲ ಎದ್ದು ನಿಂತು ನಮಸ್ಕರಿಸುತ್ತಿದ್ದಾರೆ ಮತ್ತು ಕೆಲವರು ಕಾಲು ಮುಟ್ಟಿ ಗೌರವ ಸೂಚಿಸುತ್ತಿದ್ದಾರೆ. ಆದರೆ, ಶಿವಕುಮಾರ ಮಾತ್ರ ಖರ್ಗೆ ಬಂದಾಗ ಎದ್ದು ನಿಲ್ಲುವುದು ಹಾಗಿರಲಿ, ಅವರತ್ತ ನೋಡಲೂ ಇಲ್ಲ.
Latest Videos