ಸಿದ್ದರಾಮಯ್ಯ ವಿಕೆಟ್​ಗಳು ಒಂದೊಂದಾಗಿ ಉರುಳುತ್ತಿವೆ, ಶಿವಕುಮಾರ್ ಬಲಾಢ್ಯರಾಗುತ್ತಿದ್ದಾರೆ: ಅಶೋಕ

Updated on: Aug 11, 2025 | 4:42 PM

ನೇರವಾಗಿ ಮಾತಾಡಿದ್ದಕ್ಕೆ ರಾಜಣ್ಣ ಬೆಲೆ ತೆತ್ತಿದ್ದಾರೆ, ಬೆಳಗಾದರೆ ಡಾ ಬಿಆರ್ ಅಂಬೇಡ್ಕರ್ ರಚಿಸಿರುವ ಸಂವಿಧಾನದ ಪ್ರತಿಯನ್ನು ಕೈಯಲ್ಲಿ ಹಿಡಿದು ಪ್ರಜಾಪ್ರಭುತ್ವದ ರಕ್ಷಕ ಎಂದು ಹೇಳಿಕೊಂಡು ತಿರುಗುವ ರಾಹುಲ್ ಗಾಂಧಿಯವರು ಪ್ರಜಾಪ್ರಭುತ್ವವನ್ನು ರಕ್ಷಿಸುವ ರೀತಿ ಇದು, ತಮ್ಮದೇ ಪಕ್ಷದ ನಾಯಕನೊಬ್ಬನ ನೇರ ಮಾತುಗಾರಿಕೆಯನ್ನು ಸಹಿಸದ ಇವರು ರಕ್ಷಕ ಹೇಗಾಗುತ್ತಾರೆ ಎಂದು ಅಶೋಕ ಪ್ರಶ್ನಿಸಿದರು.

ಬೆಂಗಳೂರು, ಆಗಸ್ಟ್ 11: ವಿರೋಧ ಪಕ್ಷದ ನಾಯಕ ಆರ್ ಅಶೋಕ ಸಹಕಾರ ಸಚಿವ ಕೆಎನ್ ರಾಜಣ್ಣ (KN Rajanna) ರಾಜೀನಾಮೆ ವಿಷಯದಲ್ಲಿ ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದರು. ಮಾಧ್ಯಮಗಳೊಂದಿಗೆ ಮಾತಾಡಿದ ಅವರು, ಅಕ್ಟೋಬರ್​ನಲ್ಲಿ ಕ್ರಾಂತಿ ಅಗುತ್ತೆ ಅಂತ ಹೇಳಿದ್ದೆ, ಅದರ ಆರಂಭಿಕ ಲಕ್ಷಣಗಳಿವು, ಪ್ರತಿ ವಿಷಯಕ್ಕೂ ಸಿದ್ದರಾಮಯ್ಯ ಪರ ಬ್ಯಾಟು ಬೀಸುತ್ತಿದ್ದ ರಾಜಣ್ಣ ಹೈಕಮಾಂಡ್ ಸೂಚನೆ ಮೇರೆಗೆ ರಾಜೀನಾಮೆ ಸಲ್ಲಿಸಿದ್ದಾರೆ, ಸಿದ್ದರಾಮಯ್ಯನವರ ವಿಕೆಟ್ ಗಳು ಕ್ರಮೇಣ ಒಂದೊಂದಾಗಿ ಬೀಳುತ್ತಿವೆ ಮತ್ತು ಡಿಕೆ ಶಿವಕುಮಾರ್ ದಿನೇದಿನೆ ಬಲಢ್ಯರಾಗುತ್ತಿದ್ದಾರೆ ಎಂದು ಅಶೋಕ್ ಹೇಳಿದರು. ಹಿಂದುಳಿದ ವರ್ಗಗಳ ಆಯೋಗ ನೀಡಿದ ವರದಿಯನ್ನು ಶಿವಕುಮಾರ್ ರದ್ದು ಮಾಡಿಸಿದ್ದರು ಎಂದು ಅವರು ಹೇಳಿದರು.

ಇದನ್ನೂ ಓದಿ:   ಸಿದ್ದರಾಮಯ್ಯ ಸ್ಥಾನ ಬಿಟ್ಟುಕೊಡೋದು ಶತಸಿದ್ಧ, ಅಲ್ಪಾವಧಿಯ ವಿಸ್ತರಣೆಯೂ ಸಿಗಲಾರದು: ಆರ್ ಅಶೋಕ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ