ನನ್ನ ರಾಜಕೀಯ ಗುರು ಡಿಕೆ ಶಿವಕುಮಾರ್, ಸಹಕಾರ ಕ್ಷೇತ್ರದಲ್ಲಿ ನಾನು ಬೆಳೆಯಲು ಅವರೇ ಕಾರಣ: ಎಸ್ ಟಿ ಸೋಮಶೇಖರ್
ಎಸ್ ಟಿ ಎಸ್ ಮೂಲತಃ ಕಾಂಗ್ರೆಸ್ ನವರು ಅಂತ ಎಲ್ಲರಿಗೂ ಗೊತ್ತು, ಗೂಡಿಗೆ ಮರಳುವ ಯೋಚನೆಯೇನಾದರೂ ಅವರಲ್ಲಿ ಹುಟ್ಟಿಕೊಂಡಿದ್ದರೆ ಆಶ್ಚರ್ಯವಿಲ್ಲ ಮಾರಾಯ್ರೇ. ಯಾಕೆಂದರೆ, ಬಿಜೆಪಿ ಮತ್ತು ಜೆಡಿಎಸ್ ನ ಕೆಲ ಶಾಸಕರು ತಮ್ಮ ಪಕ್ಷ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ ಅಂತ ಕಾಂಗ್ರೆಸ್ ನಾಯಕರು ಆಗಾಗ ಹೇಳುತ್ತಿರುತ್ತಾರೆ.
ಬೆಂಗಳೂರು: ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ ಯಾರೂ ಮಿತ್ರರಲ್ಲ ಎಂಬ ಮಾತಿದೆ. ಇದು ಹಲವಾರು ಬಾರಿ ಸತ್ಯವಾಗಿ ಸಾಬೀತಾಗೋದನ್ನು ನಾವು ನೋಡುತ್ತಿರುತ್ತೇವೆ. ಪರಿಸ್ಪರ ವೈರಿಗಳಂತೆ ಕಚ್ಚಾಡುವವರು ಒಬ್ಬರ ಹೆಗಲ ಮೇಲೆ ಮತ್ತೊಬ್ಬರು ಕೈಹಾಕ್ಕೊಂಡು ಹೋಗೋದನ್ನು ನಾವು ನೋಡಿಲ್ಲವೇ? ವಿಧಾನ ಸಭಾ ಚುನಾವಣೆಗೆ ಮೊದಲು ಮತ್ತು ಪ್ರಚಾರ ಕಾರ್ಯದಲ್ಲಿ ಆಗ ಸಹಕಾರ ಸಚಿವರಾಗಿದ್ದ ಎಸ್ ಟಿ ಸೋಮಶೇಖರ್ (ST Somashekar) ಕಾಂಗ್ರೆಸ್ ನಾಯಕರು- ಡಿಕೆ ಶಿವಕುಮಾರ್ (DK Shivakumar), ಮತ್ತು ಸಿದ್ದರಾಮಯ್ಯರನ್ನು (Siddaramaiah) ಉಗ್ರವಾಗಿ ಟೀಕಿಸುತ್ತಿದ್ದರು. ಆದರೆ ಇಂದು ಬೆಂಗಳೂರಲ್ಲಿ ಇಂದು ನಡೆದ ಕಾರ್ಯಕ್ರಮವೊಂದರಲ್ಲಿ ಶಿವಕುಮಾರ್ ಅವರೊಂದಿಗೆ ವೇದಿಕೆಯನ್ನು ಹಂಚಿಕೊಂಡ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಉಪ ಮುಖ್ಯಮಂತ್ರಿಯನ್ನು ಮನಸಾರೆ ಕೊಂಡಾಡಿದರು. ತಾನು ಸಹಕಾರ ಕ್ಷೇತ್ರದಲ್ಲಿ ಬೆಳೆಯುವುದಕ್ಕೆ ಶಿವಕುಮಾರ್ ಅವರೇ ಕಾರಣೀಕರ್ತರು, ಅವರೇ ತನ್ನ ರಾಜಕೀಯ ಗುರು ಎಂದು ಸೋಮಶೇಖರ್ ಹೇಳಿದರು. ಎಸ್ ಟಿ ಎಸ್ ಮೂಲತಃ ಕಾಂಗ್ರೆಸ್ ನವರು ಅಂತ ಎಲ್ಲರಿಗೂ ಗೊತ್ತು, ಗೂಡಿಗೆ ಮರಳುವ ಯೋಚನೆಯೇನಾದರೂ ಅವರಲ್ಲಿ ಹುಟ್ಟಿಕೊಂಡಿದ್ದರೆ ಆಶ್ಚರ್ಯವಿಲ್ಲ ಮಾರಾಯ್ರೇ. ಯಾಕೆಂದರೆ, ಬಿಜೆಪಿ ಮತ್ತು ಜೆಡಿಎಸ್ ನ ಕೆಲ ಶಾಸಕರು ತಮ್ಮ ಪಕ್ಷ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ ಅಂತ ಕಾಂಗ್ರೆಸ್ ನಾಯಕರು ಆಗಾಗ ಹೇಳುತ್ತಿರುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ