ಕುಣಿಲಾರದ ಸೂ… ನೆಲ ಡೊಂಕು ಅಂದಳಂತೆ: ಕುಮಾರಸ್ವಾಮಿ ವಿರುದ್ಧ ಎಸ್​​.ಟಿ ಸೋಮಶೇಖರ್ ಆಕ್ಷೇಪಾರ್ಹ ಪದ ಬಳಕೆ

ಫೈವ್‌ ಸ್ಟಾರ್‌ ಹೋಟೆಲ್‌ನಲ್ಲಿ ಕುಳಿತು ಹೆಚ್‌ಡಿ ಕುಮಾರಸ್ವಾಮಿ ಅಧಿಕಾರ ನಡೆಸಿದ್ದರಿಂದ ನಾವು ಪಕ್ಷ ಬಿಡಬೇಕಾಯಿತು ಎಂದು ಎಸ್​​.ಟಿ ಸೋಮಶೇಖರ್ ಹೆಚ್​ ಡಿ ಕುಮಾರಸ್ವಾಮಿ ವಿರುದ್ಧ ಆರೋಪ ಮಾಡಿದ್ದಾರೆ.

ಕುಣಿಲಾರದ ಸೂ... ನೆಲ ಡೊಂಕು ಅಂದಳಂತೆ: ಕುಮಾರಸ್ವಾಮಿ ವಿರುದ್ಧ ಎಸ್​​.ಟಿ ಸೋಮಶೇಖರ್ ಆಕ್ಷೇಪಾರ್ಹ ಪದ ಬಳಕೆ
ಸಚಿವ ಎಸ್​​.ಟಿ ಸೋಮಶೇಖರ್, ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ
Follow us
TV9 Web
| Updated By: ವಿವೇಕ ಬಿರಾದಾರ

Updated on: Jan 06, 2023 | 7:19 PM

ಮೈಸೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದು, ಮೂರು ರಾಜಕೀಯ ಪಕ್ಷಗಳು ರಾಜಕೀಯ ಕೆಸರೆಚಾಟವನ್ನು ಶುರುಮಾಡಿಕೊಂಡಿವೆ. ಹೀಗೆ ಮಾಜಿ ಮುಖ್ಯಮಂತ್ರಿ ಹೆಚ್​. ಡಿ ಕುಮಾರಸ್ವಾಮಿ (HD Kumaraswamy) ವಿರುದ್ಧ ಕುಣಿಲಾರದ ಸೂ… ನೆಲ ಡೊಂಕು ಅಂದಳಂತೆ ಎಂಬ ಆಕ್ಷೇಪಾರ್ಹ ಹೇಳಿಕೆ ನೀಡುವ ಮುಖಾಂತರ ಸಹಕಾರ ಸಚಿವ ಎಸ್​​.ಟಿ ಸೋಮಶೇಖರ್ (S T Somashekar) ವಿವಾದವನ್ನು ತಮ್ಮ ಮೇಲೆ ಎಳೆದುಕೊಂಡಿದ್ದಾರೆ. ಮುಂಬೈಗೆ ತೆರಳಿದ್ದ 17 ಶಾಸಕರ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್​. ಡಿ ಕುಮಾರಸ್ವಾಮಿ ಹೇಳಿಕೆಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಅವರು ಹೆಚ್‌.ಡಿ.ಕುಮಾರಸ್ವಾಮಿಗೆ ಮೂರು ವರ್ಷ ಏನೂ ಮಾಡಲು ಆಗಲಿಲ್ಲ. ಚುನಾವಣೆ ಹತ್ತಿರಬಂದಾಗ ಗೆಲ್ಲಲು ಆಗಲ್ಲವೆಂದು ಈ ವಿಚಾರ ಪ್ರಸ್ತಾಪ ಮಾಡಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಎಸ್‌.ಟಿ.ಸೋಮಶೇಖರ್‌ ಫೈವ್‌ ಸ್ಟಾರ್‌ ಹೋಟೆಲ್‌ನಲ್ಲಿ ಕುಳಿತು ಹೆಚ್‌ಡಿ ಕುಮಾರಸ್ವಾಮಿ ಅಧಿಕಾರ ನಡೆಸಿದರು. ಈ ಒಂದೇ ಕಾರಣಕ್ಕೆ ನಾವು ಪಕ್ಷ ಬಿಡಬೇಕಾಯಿತು. ಅಂದು ನೀವು ಸರಿಯಾಗಿದ್ದರೆ ಮುಖ್ಯಮಂತ್ರಿಯಾಗಿ 5 ವರ್ಷ ಪೂರೈಸಬಹುದಿತ್ತು. ಸಿಎಂ ನಮ್ಮವರೇ ಎಂದು ಹೇಳುವ ಪರಿಸ್ಥಿತಿ ಜೆಡಿಎಸ್‌ನ ಶಾಸಕರಿಗೆ ಇರಲಿಲ್ಲ ಎಂದು ಹೇಳಿದರು. ತಪ್ಪುಗಳನ್ನು ಮುಚ್ಚಿಕೊಳ್ಳಲು ಚುನಾವಣೆ ಸಮಯದಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡುತ್ತಿದ್ದಾರೆ. ಆರೋಪ ಮಾಡುವವರು ಬರವಣಿಗೆಯಲ್ಲಿ ದೂರನ್ನು ಸಿಎಂಗೆ ನೀಡಲಿ. ಮುಖ್ಯಮಂತ್ರಿಗಳ ಪರಮಾಧಿಕಾರದಲ್ಲಿ ಯಾವ ತನಿಖೆ ಬೇಕಾದರೂ ಆಗಲಿ ಎಂದರು.

ವಿಧಾನಸೌಧದಲ್ಲಿ 10 ಲಕ್ಷ ಹಣ ಪತ್ತೆ

ವಿಧಾನಸೌಧದಲ್ಲಿ 10 ಲಕ್ಷ ಹಣ ಪತ್ತೆಯಾಗಿತ್ತು. ಹಣ ಪತ್ತೆಯಾದ ಬೆನ್ನಲ್ಲೇ ವಿಧಾನಸೌಧವನ್ನು ಮಾಲ್ ಹಾಗು ಮಾರ್ಕೆಟ್​ಗೆ ಹೋಲಿಕೆ ಮಾಡಿ ಮಾತನಾಡಿರುವ ವಿಚಾರವಾಗಿ ಮಾತನಾಡಿದ ಅವರು ವಿಧಾನಸೌಧ ಕೆಂಗಲ್ ಹನುಮಂತಯ್ಯನವರು ಕಟ್ಟಿರುವ ಸೌಧ. ವಿಧಾನಸೌಧ ಎಂದರೇ ಅದು ವಿಧಾನಸೌಧವೇ. ವಿಧಾನಸೌಧ ಇಡೀ ರಾಜ್ಯದ ಜನರನ್ನು ರಕ್ಷಣೆ ಮಾಡುತ್ತಿರುವ ಶಕ್ತಿ ಸೌಧವಾಗಿದೆ. ಶಕ್ತಿ ಸೌಧವನ್ನು ಮಾಲ್ ಹಾಗೂ ಮಾರ್ಕೆಟ್​ಗೆ ಹೋಲಿಕೆ ಮಾಡಿದ್ದು ಸರಿಯಲ್ಲ ಎಂದು ವಾಗ್ದಾಳಿ ಮಾಡಿದರು.

ನಾನು ಎಲ್ಲ ಪಕ್ಷಗಳ ಸರ್ಕಾರವನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಚಾಮರಾಜನಗರ ಶಾಸಕ‌ ಪುಟ್ಟರಂಗಶೆಟ್ಟಿ ಕಚೇರಿಯಲ್ಲಿ 25 ಲಕ್ಷ ಹಣ ಸಿಕ್ಕಿರಲಿಲ್ಲವೇ? ಆ ಬಳಿಕ ಏನು ಮಾಡಿದ್ರೀ ? ತನಿಖೆಗೆ ಆದೇಶಿಸಿದಂತೆ ಮಾಡಿ ಇಡೀ ಪ್ರಕರಣವನ್ನು ಮುಚ್ಚಿ ಹಾಕಿದ್ರಿ. ವಿಧಾನಸೌಧವನ್ನು ಶಾಪಿಂಗ್ ಮಾಲ್​ಗೆ ಹೋಲಿಸಿರುವವರನ್ನು ರಾಜ್ಯದ ಜನತೆ ಶಾಸಕರೆಂದು ಒಪ್ಪಿಕೊಳ್ಳಲು ಸಾಧ್ಯವೇ? ವಿಧಾನಸೌಧವನ್ನು ಮಾಲ್​ಗೆ ಹೋಲಿಸಿರುವವರಿಗೆ ಬುದ್ದಿ ಕಮ್ಮಿ ಎಂದು ವ್ಯಂಗ್ಯವಾಡಿದರು.

ಸೆಲ್ಫಿಗೆ ಫೋಸ್ ಕೊಡದಿದ್ದರೇ ಇವನ್ಯಾವ ಮಂತ್ರಿ ಇವನಿಗೆ ದುರಾಹಂಕಾರ

ಸ್ಯಾಂಟ್ರೋ ರವಿಗೆ ಆಡಳಿತ ಪಕ್ಷದ ಸಚಿವರು ಹಾಗು ಶಾಸಕರೊಂದಿಗೆ ಒಡನಾಟ ಇದೆ ಎಂಬ ಆರೋಪ ವಿಚಾರವಗಿ ಮಾತನಾಡಿದ ಅವರು ನಮ್ಮನ್ನು ಪ್ರತಿನಿತ್ಯ ಹಲವಾರು ಮಂದಿ ಭೇಟಿ ಮಾಡುತ್ತಾರೆ. ದಾರಿಯಲ್ಲಿ ಎಲ್ಲೇ ಸಿಕ್ಕರೂ ಹಲವಾರು ಮಂದಿ ನಮ್ಮ ಜೊತೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಾರೆ. ಸೆಲ್ಫಿಗೆ ಫೋಸ್ ಕೊಡದಿದ್ದರೇ ಇವನ್ಯಾವ ಮಂತ್ರಿ ಇವನಿಗೆ ದುರಾಹಂಕಾರ ಅಂತಾರೆ. ಸೆಲ್ಫ ತೆಗೆದುಕೊಂಡವರು ಸ್ಟೇಟಸ್​ಗೆ ಹಾಕಿ ಕೊಳ್ಳುತ್ತಾರೆ. ನಮ್ಮ ಜೊತೆ ನಿಂತು ಸೆಲ್ಫಿ ತೆಗೆದುಕೊಳ್ಳುವ ಪ್ರತಿಯೊಬ್ಬರ ಹಿನ್ನೆಲೆ ವಿಚಾರಿಸಲು ಸಾಧ್ಯವೇ ಹೇಳಿ? ಎಂದು ಪ್ರಶ್ನೆ ಮಾಡಿದರು.

ಬೀದರ್: ಚಾಂಗಲೇರಾದಲ್ಲಿ ವಿಡಿಯೋ ಬಿಡುಗಡೆ ಮಾಡಿದ ಕುಮಾರಸ್ವಾಮಿ

ಬೀದರ್: ಸಚಿವ ಸೋಮಶೇಖರ್​ ವಿವಾದಾತ್ಮಕ ಹೇಳಿಕೆ ಹಿನ್ನೆಲೆ ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಚಾಂಗಲೇರಾದಲ್ಲಿ ಗ್ರಾಮದಲ್ಲಿ ಸ್ಯಾಂಟ್ರೋ ರವಿ ಜತೆ ಸಚಿವ ಸೋಮಶೇಖರ್​ ಇರುವ ವಿಡಿಯೋ ಬಿಡುಗಡೆ ಮಾಡಿದ್ದಾರೆ.

ಹೆಚ್.ಡಿ.ಕುಮಾರಸ್ವಾಮಿ ಮೊಬೈಲ್​ನಲ್ಲಿ ವಿಡಿಯೋ ತೋರಿಸಿ, ವಿಡಿಯೋದಲ್ಲಿ ವರ್ಗಾವಣೆ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗುತ್ತಿದೆ. ವಿಡಿಯೋ ತೋರಿಸಿದ ಬಳಿಕ ಮಾತನಾಡಿದ ಅವರು ಕಳ್ಳನ ಮನಸು ಹುಳ್ಳುಳ್ಳಗೆ ಅಂದರೆ ಇವರಿಗ್ಯಾಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾನು ದುಡ್ಡಿನ ದಂಧೆ ಬಗ್ಗೆ ಮಾತಾಡಿದ್ದೇನೆ. ಬಾಂಬೆಗೆ ಯಾರು ಯಾರನ್ನು ಕರೆದುಕೊಂಡು ಹೋಗಿದ್ದರೆಂದು ಹೇಳಿದ್ದೆ. ವಿಡಿಯೋ ತೋರಿಸುವ ಮೂಲಕ ಇವನು ಯಾರು? ನನ್ನ ಕೆಣಕಿದ್ದಕ್ಕೆ ಈ ವಿಡಿಯೋ ಬಿಟ್ಟಿದ್ದೇನೆ, ಎಲ್ಲೆಡೆ ವೈರಲ್​ ಆಗಿದೆ. ಬಿಜೆಪಿಯವರು ಹೆಣ್ಣುಮಕ್ಕಳಿಗೆ ಕೊಡುವ ಗೌರವ ಇದೇ ಅನ್ಸುತ್ತೆ. ಈ ಬಗ್ಗೆ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಈಗಾಗಲೇ ಹೇಳಿದ್ದಾರೆ ಎಂದು ಹೇಳಿದರು.

ಮೈಸೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟುವ್ಹಿಲರ್ ತ್ರಿವಿಲ್ಹಲ್ ಅವಕಾಶ ಇಲ್ಲಾ ಅನ್ನೋ ಪ್ರತಾಪ್ ಸಿಂಹ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಮೈಸೂರು ಬೆಂಗಳೂರು ‌ರಸ್ತೆ ಆಮೆಗತಿಯಲ್ಲಿ ಸಾಗಿದೆ ಈ ರಸ್ತೆಯಲ್ಲಿ ಬೈಕ್ ತ್ರಿಲ್ಹರ್ ಓಡಾಡೊಕೆ ಅವಕಾಶ ಕೊಡದಿದ್ದರೆ ಹೆಲಿಕಾಪ್ಟರ್ ಓಡಿಸಲಿ ಎಂದು ಕಾಲೆಳೆದರು.

2018ರ ಕರ್ನಾಟಕ ವಿಧಾನಸಭೆ ಚುನಾವಣೆ ಅತಂತ್ರ ಫಲಿತಾಂಶ; ಬಂಡಾಯ ಎದ್ದ ಶಾಸಕರು

2018ರಲ್ಲಿ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಂತರ ಯಾವ ಪಕ್ಷಕ್ಕೂ ಬಹುಮತ ಬರಲಿಲ್ಲ. ಬಿಜೆಪಿ 104, ಕಾಂಗ್ರೆಸ್ 78, ಜೆಡಿಎಸ್‌ 37, ಇತರ 2 ಫಲಿತಾಂಶ ಹೊರ ಹೊಮ್ಮಿತ್ತು. ಬಹುಮತಕ್ಕೆ 113 ಬೇಕಾಗಿದ್ದು, ಅಧಿಕ ಸ್ಥಾನಗಳಲ್ಲಿ ಗೆದ್ದ ಮೊದಲು ಬಿಜೆಪಿ ಅಧಿಕಾರಕ್ಕೆ ಬಂತು. ಆ ಸರ್ಕಾರ ಮೂರೇ ದಿನಗಳಲ್ಲಿ ಪತನವಾಯಿತು. ನಂತರ ಕಾಂಗ್ರೆಸ್-ಜೆಡಿಎಸ್ ಒಟ್ಟಾಗಿ ಸರ್ಕಾರ ರಚಿಸಿದವು. 14 ತಿಂಗಳ ನಂತರ ಕಾಂಗ್ರೆಸ್-ಜೆಡಿಎಸ್​ 17 ಶಾಸಕರು ಬಂಡಾಯವೆದ್ದು ಬಿಜೆಪಿ ಅಧಿಕಾರಕ್ಕೆ ಬಂದಿದ್ದರಿಂದ ಮುಖ್ಯಮಂತ್ರಿ ಬದಲಾದರು. ಈ ವಿಚಾರವಾಗಿ ಹೆಚ್​ಡಿ ಕುಮಾರಸ್ವಾಮಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳ್ನು ಓದಲು ಇಲ್ಲಿ ಕ್ಲಿಕ್ ಮಾಡಿ