ಬಿಜೆಪಿ ನಾಯಕರಿಗೆ ಅಜ್ಜಯ್ಯನ ಸಹವಾಸವಿನ್ನೂ ಗೊತ್ತಿಲ್ಲ: ಡಿಕೆ ಶಿವಕುಮಾರ್, ಡಿಸಿಎಂ

ಬಿಜೆಪಿ ನಾಯಕರಿಗೆ ಅಜ್ಜಯ್ಯನ ಸಹವಾಸವಿನ್ನೂ ಗೊತ್ತಿಲ್ಲ: ಡಿಕೆ ಶಿವಕುಮಾರ್, ಡಿಸಿಎಂ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 14, 2023 | 6:41 PM

ಗುತ್ತಿಗೆದಾರರನ್ನ ಬಳಸಿಕೊಂಡರಲ್ಲ? ಸಾಮ್ರಾಟ್ ಅಶೋಕ (ಆರ್ ಆಶೋಕ), ನವರಂಗಿ ನಾರಾಯಣ (ಅಶ್ವಥ್ ನಾರಾಯಣ), ರವಿ (ಸಿಟಿ ರವಿ) ಮತ್ತು ಗೋಪಾಲ ಸ್ವಾಮಿ (ಮಹಾಲಕ್ಷ್ಮಿ ಲೇಔಟ್ ಶಾಸಕ ಕೆ ಗೋಪಾಲಯ್ಯ)- ಇವರ ಬಗ್ಗೆ ಏನು ಹೇಳೋದು ಅಂತ ಶಿವಕುಮಾರ್ ಹೇಳಿದರು.

ಬೆಂಗಳೂರು: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಇಂದು ಬೆಳಗ್ಗೆ ತಮ್ಮನ್ನು ಟೀಕಿಸಿದ ಮಾಜಿ ಸಚಿವ ಮತ್ತು ಬಿಜೆಪಿ ಶಾಸಕ ಡಾ ಸಿ ಎನ್ ಅಶ್ವಥ್ ನಾರಾಯಣ(DR CN Ashwath Narayan) ಅವರಿಗೆ ತಿರುಗೇಟಿ ನೀಡಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತಾಡಿದ ಶಿವಕುಮಾರ್, ತಾನೀಗ ಗುತ್ತಿಗೆದಾರರ (contractors) ಬಗ್ಗೆ ಮಾತಾಡಲ್ಲ, ಅವರು ವಿಷಯ ಅರ್ಥಮಾಡಿಕೊಂಡಿದ್ದಾರೆ. ಅದರೆ ಅವರನ್ನು ಬಳಸಿಕೊಂಡರಲ್ಲ, ಸಾಮ್ರಾಟ್ ಅಶೋಕ (ಆರ್ ಆಶೋಕ), ನವರಂಗಿ ನಾರಾಯಣ (ಅಶ್ವಥ್ ನಾರಾಯಣ), ರವಿ (ಸಿಟಿ ರವಿ) ಮತ್ತು ಗೋಪಾಲ ಸ್ವಾಮಿ (ಮಹಾಲಕ್ಷ್ಮಿ ಲೇಔಟ್ ಶಾಸಕ ಕೆ ಗೋಪಾಲಯ್ಯ) ಬಗ್ಗೆ ಏನು ಹೇಳೋದು? ಅವರು ಮಾತಾಡಲಿ ಮತ್ತು ತಾವು ಕೇಳಿದ್ದಕ್ಕೆ ಉತ್ತರ ನೀಡಲಿ ಎಂದು ಹೇಳಿದರು. ಅಜ್ಜಯ್ಯನ ಸಹವಾಸ ಅವರಿಗೆ ಗೊತ್ತಿಲ್ಲ ಎಂದ ಶಿವಕುಮಾರ್ ಅವರೆಲ್ಲ ಏನೇನು ಮಾತಾಡಿದ್ದಾರಂತ ಗೊತ್ತಿಲ್ಲ, ಪತ್ರಕರ್ತರು ಹೇಳಿದ್ದಷ್ಟೇ ಗೊತ್ತು, ಅವರ ಮಾತುಗಳ ವಿವರಣೆ ಪಡೆದು ಮಾತಾಡುವುದಾಗಿ ಅಂತ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ