ಸುದೀಪ್ ಭೇಟಿ ಮಾಡಿದ್ದು ಪರ್ಸನಲ್ ಕಾರಣಕ್ಕೆ: ಅಸಲಿ ವಿಷಯ ತಿಳಿಸಿದ ಡಿಕೆಶಿ
ಡಿ.ಕೆ. ಶಿವಕುಮಾರ್ ಅವರನ್ನು ಸುದೀಪ್ ಭೇಟಿ ಮಾಡಿದ್ದಾರೆ. ಬಳಿಕ ಮಾಧ್ಯಮಗಳಿಗೆ ಡಿಕೆಶಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಭೇಟಿಯ ಉದ್ದೇಶ ಏನು ಎಂಬುದನ್ನು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ರಾಜಕೀಯದ ಕಾರಣಕ್ಕೆ ಭೇಟಿ ನಡೆದಿಲ್ಲ. ಸಿನಿಮಾದ ಶೂಟಿಂಗ್ ಲೊಕೇಷನ್ಗೆ ಸಂಬಂಧಿಸಿದ ವಿಚಾರವನ್ನು ಮಾತನಾಡಲು ಸುದೀಪ್ ಅವರು ಬಂದಿದ್ದರು.
ನಟ ಕಿಚ್ಚ ಸುದೀಪ್ ಅವರು ಇಂದು (ಫೆಬ್ರವರಿ 6) ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಆಗಿದ್ದಾರೆ. ಈ ಭೇಟಿಯ ಹಿಂದಿರುವ ಕಾರಣ ಏನು ಎಂಬುದಕ್ಕೆ ಡಿಕೆಶಿ ಉತ್ತರ ನೀಡಿದ್ದಾರೆ. ‘ಸುದೀಪ್ ಅವರದ್ದು ಏನೋ ಸ್ವಲ್ಪ ಪರ್ಸನಲ್ ವಿಚಾರಗಳು ಇರುತ್ತವೆ. ಶೂಟಿಂಗ್ ಜಾಗದ ಸಲುವಾಗಿ ಬಂದು ಕೇಳಿದ್ದಾರೆ. ಅದನ್ನು ಹೊರತುಪಡಿಸಿ ಬೇರೆ ಏನೂ ಇಲ್ಲ. ರಾಜಕೀಯದ ಭೇಟಿ ಅಲ್ಲ. ಸ್ನೇಹಿತನಾಗಿ ಬಂದು ಭೇಟಿ ಮಾಡಿದ್ದಾರೆ’ ಎಂದು ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.