ಜಮಖಂಡಿಯಲ್ಲಿ ವೇದಿಕೆಯೊಂದರ ಮೇಲೆ ಡಿಕೆ ಶಿವಕುಮಾರ್ ಮತ್ತು ಮುರುಗೇಶ್ ನಿರಾಣಿ ನಡುವೆ ಗಹನ ಚರ್ಚೆ
ಜಮಖಂಡಿಯಲ್ಲಿರುವ ದಿ ಜಮಖಂಡಿ ಅರ್ಬನ್ ಕೋಆಪರೇಟಿವ್ ಬ್ಯಾಂಕ್ ಲಿಮಿಟೆಡ್ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಶಿವಕುಮಾರ್ ಭಾಗಿಯಾಗಿದ್ದಾಗ ನಿರಾಣಿ, ಡಿಸಿಎಂ ಪಕ್ಕದಲ್ಲಿ ಕೂತು ಗಹನವಾದ ಚರ್ಚೆ ನಡೆಸಿದರು. ನಿರಾಣಿ ಅವರ ಬಲಭಾಗಲ್ಲಿ ಅಥಣಿಯ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಕೂತಿದ್ದರೆ ಶಿವಕುಮಾರ್ ಎಡಭಾಗದಲ್ಲಿ ಕೆಲ ಮಠಾಧೀಶರು ಕೂತಿದ್ದರು.
ಬಾಗಲಕೋಟೆ, ಏಪ್ರಿಲ್ 2: ಮೊನ್ನೆಯಷ್ಟೇ ಹಿಂದಿ ಭಾಷೆಯಲ್ಲಿರುವ ಗಾದೆಮಾತೊಂದನ್ನು ನಾವು ಉಲ್ಲೇಖಿಸಿದ್ದೆವು, ದುಶ್ಮನ್ ಕಾ ದುಶ್ಮನ್ ದೋಸ್ತ್ ಅಂತೆ! ವೇದಿಕೆ ಮೇಲೆ ಕೂತು ಡಿಸಿಎಂ ಡಿಕೆ ಶಿವಕುಮಾರ್ ಜೊತೆ ಗುಸುಗುಸು ಮಾತಾಡುತ್ತಿರುವ ರಾಜ್ಯ ಬಿಜೆಪಿ ಉಪಾಧ್ಯಕ್ಷ ಮತ್ತು ಉದ್ಯಮಿ ಮುರುಗೇಶ್ ನಿರಾಣಿಯವರನ್ನು (Murugesh Nirani) ನೋಡಿದರೆ ಹಾಗನ್ನಿಸದಿರದು. ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ನಿರಾಣಿ ನಡುವೆ ಒಂದೇ ಪಕ್ಷದವರಾಗಿದ್ದರೂ ಉತ್ತಮ ಬಾಂಧವ್ಯವಿಲ್ಲ, ಹಾಗೆಯೇ ಶಿವಕುಮಾರ್ ಮತ್ತು ಯತ್ನಾಳ್ ನಡುವೆ ಎಂಥ ಸ್ನೇಹವಿದೆ ಅಂತ ಎಲ್ಲರಿಗೂ ಗೊತ್ತು. ಇವರಿಬ್ಬರಿಗೂ ಕಾಮನ್ ದುಶ್ಮನ್ ಯತ್ನಾಳ್, ಹಾಗಾಗಿ ಏನು ಮಾತುಕತೆ ನಡೆಯುತ್ತಿದೆ ಅಂತ ಊಹಿಸಬಹುದು.
ಇದನ್ನೂ ಓದಿ: ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಡಿಕೆ ಶಿವಕುಮಾರ್
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ