ಜೆಡಿಎಸ್ ನಾಯಕರು ಬಿಜೆಪಿ ಆಹ್ವಾನ ನೀಡದೆ ಹತ್ತಾರು ಪ್ರತಿಭಟನೆಗಳನ್ನು ಮಾಡಿದ್ದಾರೆ: ಆರ್ ಅಶೋಕ
ವಿಧಾನ ಸಭೆಯಲ್ಲಿ ಬಜೆಟ್ ಮೇಲೆ ಭಾಷಣ ಮಾಡುವಾಗಲೇ ತಾನು ಮುಂದೆ ಮಾರಿಹಬ್ಬ ಕಾದೈತೆ ಅಂತ ಹೇಳಿದ್ದೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಜನರಿಗೆ ನೀಡಿದ ಭರವಸೆ ಏನು? ಈಗ ಮಾಡುತ್ತಿರೋದೇನು? ಬರೀ ಮೋಸ. ಡೀಸೆಲ್ ಬೆಲೆ ಹೆಚ್ಚಿಸುವುದರಿಂದ ಇತರ ಹತ್ತಾರು ಸಾಮಗ್ರಿಗಳ ಬೆಲೆ ಕೂಡ ಹೆಚ್ಚಾಗುತ್ತದೆ ಎಂದು ಅಶೋಕ ಹೇಳಿದರು.
ಬೆಂಗಳೂರು, ಏಪ್ರಿಲ್ 2: ಸರ್ಕಾರದ ವಿರುದ್ಧ ಬಿಜೆಪಿ ನಾಯಕರು (BJP leaders) ಜೆಡಿಎಸ್ಗೆ ಆಮಂತ್ರಣ ನೀಡದೆ ಮಾಡುತ್ತಿರುವ ಪ್ರತಿಭಟನೆ ಮತ್ತು ಹೋರಾಟಗಳನ್ನು ವಿಪಕ್ಷ ನಾಯಕ ಅರ್ ಅಶೋಕ ಸಮರ್ಥಿಸಿಕೊಂಡರು. ಫ್ರೀಡಂ ಪಾರ್ಕ್ನಲ್ಲಿ ಮಾತಾಡಿದ ಅವರು ಇದೇ ಪಾರ್ಕಲ್ಲಿ ಜೆಡಿಎಸ್ ಹತ್ತಾರು ಹೋರಾಟಗಳನ್ನು ಮಾಡಿದೆ, ಬಿಜೆಪಿಗೆ ಅಹ್ವಾನ ನೀಡಿರಲಿಲ್ಲ, ಹಾಗೆಯೇ ಬಿಜೆಪಿ ಕೂಡ ಹತ್ತಾರು ಮುಷ್ಕರಗಳನ್ನು ಜೆಡಿಎಸ್ ಇಲ್ಲದೆ ಮಾಡಿದೆ, ಅವರು ಬೇಸರ ವ್ಯಕ್ತಪಡಿಸಿರುವುದು ಸರಿಯಲ್ಲ, ಬಿಜೆಪಿ ಮತ್ತು ಜೆಡಿಎಸ್ ಸದನದೊಳಗೆ ಜಂಟಿಯಾಗಿ ಹೋರಾಟ ಮಾಡುತ್ತಿವೆ, ಚುನಾವಣೆಗಳಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ಇದೆ, ಅದೇ ಬೇರೆ ಪ್ರತಿಭಟನೆಗಳೇ ಬೇರೆ, ಜೆಡಿಎಸ್ ನಾಯಕರು ದುರಹಂಕಾರದಂಥ ಪದ ಬಳಸುವುದು ಸರಿಯಲ್ಲ ಎಂದು ಅಶೋಕ ಹೇಳಿದರು.
ಇದನ್ನೂ ಓದಿ: ಪೋನ್ ಟ್ಯಾಪ್ ಆಗುತ್ತಿದೆಯೆಂದು ವಿಪಕ್ಷ ನಾಯಕ ಅಶೋಕ ಇದುವರೆಗೆ ದೂರು ದಾಖಲಿಸಿಲ್ಲ: ಪರಮೇಶ್ವರ್
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ