ಸಿಎಂ/ಡಿಸಿಎಂ ಅಗಬೇಕೆನ್ನುವವರು ವಿಧಾನಸಭೆ ವಿಸರ್ಜಿಸಿ ಮತ್ತೊಮ್ಮೆ ಚುನಾವಣೆ ಎದುರಿಸಲಿ: ಡಿಕೆ ಸುರೇಶ್

|

Updated on: Jun 29, 2024 | 1:53 PM

ಹೆಚ್ಚುವರಿ ಡಿಸಿಎಂಗಳ ಜರೂರತ್ತು ಅಷ್ಟೊಂದಿದ್ದರೆ ಎಲ್ಲ 33 ಸಚಿವರನ್ನು ಉಪ ಮುಖ್ಯಮಂತ್ರಿ ಮಾಡಲಿ, ಹಾಗೆ ಮಾಡಿದರೆ ಎಲ್ಲ ವರ್ಗ, ಸಮುದಾಯ ಮತ್ತು ಜಾತಿಯವರಿಗೆ ಪ್ರಾತಿನಿಧ್ಯ ನೀಡಿದಂತಾಗುತ್ತದೆ. ಸಂವಿಧಾನದಲ್ಲಿ ಇದಕ್ಕೆ ಅವಕಾಶವಿದೆ ಯಾಕೆಂದರೆ ಉಪ ಮುಖ್ಯಮಂತ್ರಿ ಸ್ಥಾನ ಸಾಂವೈಧಾನಿಕ ಹುದ್ದೆಯೇನೂ ಅಲ್ಲ ಎಂದು ಮಾಜಿ ಸಂಸದ ಡಿಕೆ ಸುರೇಶ್ ಹೇಳಿದರು.

ಬೆಂಗಳೂರು: ಹೆಚ್ಚುವರಿ ಡಿಸಿಎಂಗಳು ಬೇಕೆಂದು ಒಂದೇ ಸಮ ವರಾತ ತೆಗೆಯುತ್ತಿರುವ ಸಹಕಾರ ಸಚಿವ ಕೆಎನ್ ರಾಜಣ್ಣಗೆ ಪಕ್ಷದಲ್ಲಿ ವಿರೋಧ ಹೆಚ್ಚುತ್ತಿದೆ. ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಮಾಜಿ ಸಂಸದ ಡಿಕೆ ಸುರೇಶ್, ಸಿಎಂ ಮತ್ತು ಡಿಸಿಎಂ ಹುದ್ದೆಗಳಿಗಾಗಿ ಆಸೆ ಪಡುತ್ತಿರುವವರು ಮತ್ತೊಮ್ಮೆ ಚುನಾವಣೆ ಎದುರಿಸಲಿ, ತಮ್ಮ ತಮ್ಮ ನಾಯಕತ್ವದಲ್ಲಿ ಪಕ್ಷವನ್ನು ಮುನ್ನಡೆಸಿ ಚುನಾವಣೆಯಲ್ಲಿ ಗೆದ್ದು ಸಿಎಂ ಅದರೂ ಅಗಲಿ, ಡಿಸಿಎಂ ಅದರೂ ಅಗಲಿ; ಯಾರು ಬೇಡ ಅಂತಾರೆ? ಹಿಂದೆ ಕಡಿಮೆ ಸ್ಥಾನಗಳನ್ನು ಗೆದ್ದ ಕಾರಣ ರಾಮಕೃಷ್ಣ ಹೆಗಡೆಯವರು ವಿಧಾನಸಭೆಯನ್ನು ವಿಸರ್ಜಿಸಿ ಚುನಾವಣೆ ನಡೆಸಿದ್ದರು, ಅದರಲ್ಲಿ ತಪ್ಪೇನೂ ಇಲ್ಲ ಸುರೇಶ್ ಹೇಳಿದರು. ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಂದ ಗೆಲುವಿನ ಶ್ರೇಯಸ್ಸು ಕಾರ್ಯಕರ್ತರಿಗೆ ಸಲ್ಲಬೇಕು, ಎರಡೂವರೆ ವರ್ಷಗಳ ಕಾಲ ಅವರು ಹಗಲಿರುಳು ಬೆವರು ಸುರಿಸಿ ಶ್ರಮಪಟ್ಟ ಕಾರಣ ಪಕ್ಷ ಗೆಲ್ಲುವುದು ಸಾಧ್ಯವಾಯಿತು ಎಂದು ಡಿಕೆ ಸುರೇಶ್ ಹೇಳಿದರು.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಚನ್ನಪಟ್ಟಣ ಉಪಚುನಾವಣೆ: ಜನ ತಿರಸ್ಕರಿಸಿದ್ದಾರೆ, ಈಗಲೇ ಮತ್ತೆ ಸ್ಪರ್ಧಿಸಿದರೆ ನಗುತ್ತಾರೆ; ಡಿಕೆ ಸುರೇಶ್ ಮಾರ್ಮಿಕ ಮಾತು