ನಾಮಪತ್ರ ಸಲ್ಲಿಸುವ ಮುನ್ನ ಕೆಂಕೇರಮ್ಮ ದೇವಿಯ ಸನ್ನಿಧಿಯಲ್ಲಿ ತಾಯಿ, ಅಣ್ಣ ಮತ್ತು ಅತ್ತಿಗೆಯ ಪಾದಗಳಿಗೆ ನಮಸ್ಕರಿಸಿದ ಡಿಕೆ ಸುರೇಶ್

|

Updated on: Mar 28, 2024 | 1:47 PM

ಪೂಜೆಯ ಬಳಿಕ ಸುರೇಶ್ ತಮ್ಮ ತಾಯಿ ಗೌರಮ್ಮನವರ ಪಾದಗಳಿಗೆ ನಮಸ್ಕರಿಸಿ ಅವರ ಅಶೀರ್ವಾದ ಪಡೆದರು. ನಂತರ ಅವರು ಎಲ್ಲ ಮಹತ್ವದ ಸಂದರ್ಭಗಳಲ್ಲಿ ಮಾಡುವ ಹಾಗೆ ತಮ್ಮ ಅಣ್ಣ ಮತ್ತು ಅತ್ತಿಗೆ ಉಷಾ ಶಿವಕುಮಾರ್ ಅವರ ಆಶೀರ್ವಾದ ಪಡೆಯುತ್ತಾರೆ. ಮೊದಲು ಶಿವಕುಮಾರ್ ನಂತರ ಉಷಾ ಶಿವಕುಮಾರ್ ಕಾಲಿಗೆ ಸುರೇಶ್ ವಂದಿಸುತ್ತಾರೆ.

ರಾಮನಗರ: ರಾಮನಗರದ ಜಿಲ್ಲಾಧಿಕಾರಿ ಕಚೇರಿಗೆ ಭರ್ಜರಿ ರೋಡ್ ಶೋವೊಂದರಲ್ಲಿ ತೆರಳಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ (Bengaluru Rural LS seat) ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರವನ್ನು ಸಲ್ಲಿಸುವ ಮೊದಲು ಡಿಕೆ ಸುರೇಶ್ (DK Suresh) ತಮ್ಮ ಕುಟುಂಬದ ಸದಸ್ಯರೊಂದಿಗೆ ಕನಕಪುರದ ಕೆಂಕೇರಮ್ಮ ದೇವಸ್ಥಾನಕ್ಕೆ ತೆರಳಿ ನಾಮಪತ್ರದ ಫೈಲನ್ನು ದೇವಿಯ ಸನ್ನಿಧಿಯಲ್ಲಿಟ್ಟು ಪೂಜೆ ಸಲ್ಲಿಸಿದರು. ಪೂಜಾ ಕೈಂಕರ್ಯಗಳೆಲ್ಲ ಅವರ ಸಹೋದರ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ನೇತೃತ್ವದಲ್ಲಿ ನಡೆಯುತ್ತಿರುವುದನ್ನು ದೃಶ್ಯಗಳಲ್ಲಿ ಗಮನಿಸಬಹುದು. ಪೂಜೆಯ ಬಳಿಕ ಸುರೇಶ್ ತಮ್ಮ ತಾಯಿ ಗೌರಮ್ಮನವರ ಪಾದಗಳಿಗೆ ನಮಸ್ಕರಿಸಿ ಅವರ ಅಶೀರ್ವಾದ ಪಡೆದರು. ನಂತರ ಅವರು ಎಲ್ಲ ಮಹತ್ವದ ಸಂದರ್ಭಗಳಲ್ಲಿ ಮಾಡುವ ಹಾಗೆ ತಮ್ಮ ಅಣ್ಣ ಮತ್ತು ಅತ್ತಿಗೆ ಉಷಾ ಶಿವಕುಮಾರ್ ಅವರ ಆಶೀರ್ವಾದ ಪಡೆಯುತ್ತಾರೆ. ಮೊದಲು ಶಿವಕುಮಾರ್ ನಂತರ ಉಷಾ ಶಿವಕುಮಾರ್ ಕಾಲಿಗೆ ಸುರೇಶ್ ವಂದಿಸುತ್ತಾರೆ.

ಉಷಾ ಅವರ ಪಕ್ಕದಲ್ಲಿ ನಿಂತಿದ್ದ ಶಿವಕುಮಾರ್ ಮಗಳು ಸಹ ತನ್ನ ಅಜ್ಜಿಯ ಕಾಲಿಗೆ ನಮಸ್ಕರಿಸುತ್ತಾರೆ. ಬೆಂಗಳೂರು ಗ್ರಾಮಾಂತರ ಒಂದು ಪ್ರತಿಷ್ಠಿತ ಕಣವಾಗಿ ಮಾರ್ಪಟ್ಟಿದೆ. ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಮತ್ತು ನಾಡಿನ ಖ್ಯಾತ ಹೃದ್ರೋಗ ತಜ್ಞ ಡಾ ಸಿಎನ್ ಮಂಜುನಾಥ್ ಅವರನ್ನು ಬಿಜೆಪಿ ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಧರ್ಮ ಯುದ್ಧಕ್ಕೂ ಮುನ್ನ ಮಂಜುನಾಥನ ದರ್ಶನ ಪಡೆದೆ: ಧರ್ಮಸ್ಥಳದಲ್ಲಿ ಡಿಕೆ ಶಿವಕುಮಾರ್ ಮಾರ್ಮಿಕ ಮಾತು

Follow us on