ಡಿಕೆ ಸಹೋದರರ ಕಪಿಮುಷ್ಟಿಯಿಂದ ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಉಳಿಸಬೇಕಿದೆ: ಸಿಪಿ ಯೋಗೇಶ್ವರ್

|

Updated on: Apr 02, 2024 | 7:19 PM

ಸುರೇಶ್ ವರ್ತನೆಗೆ ತದ್ವಿರುದ್ಧವಾಗಿ ಡಾ ಮಂಜುನಾಥ್ ಸಜ್ಜನ, ವಿದ್ಯಾವಂತ ಮತ್ತು ಸುಸಂಸ್ಕೃತ ವ್ಯಕ್ತಿಯಾಗಿದ್ದಾರೆ. ಒಬ್ಬ ವೈದ್ಯನಾಗಿ 4 ದಶಕಗಳಿಗೂ ಹೆಚ್ಚು ಕಾಲ ಜನ ಸೇವೆ ಮಾಡಿದ್ದಾರೆ. ಇಂಥವರನ್ನು ಜನ ತಮ್ಮ ಪ್ರತಿನಿಧಿಯಾಗಿ ಹೊಂದಲು ಇಷ್ಟಪಡುತ್ತಾರೆ ಎಂದು ಯೋಗೇಶ್ವರ್ ಹೇಳಿದರು.

ರಾಮನಗರ: ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿಕೆ ಸುರೇಶ್ (DK Suresh) ಮತ್ತು ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Suresh) ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ದರ್ಪ ಮೆರೆಯುತ್ತಿದ್ದಾರೆ, ಅವರ ಕಪಿಮುಷ್ಟಿಯಿಂದ ಕ್ಷೇತ್ರವನ್ನು ರಕ್ಷಿಸಲು ಎನ್ ಡಿಎ ಅಭ್ಯರ್ಥಿಯಾಗಿರುವ ಡಾ ಸಿಎನ್ ಮಂಜುನಾಥ್ (Dr CN Manjunath) ಅವರು ಗೆಲ್ಲಲೇಬೇಕು ಎಂದು ಬಿಜೆಪಿ ಧುರೀಣ ಸಿಪಿ ಯೋಗೇಶ್ವರ್ (CP Yogeshwar) ಹೇಳಿದರು. ಜನ ಮತ್ತು ಅಧಿಕಾರಿಗಳೊಂದಿಗೆ ಸುರೇಶ್ ನಡೆದುಕೊಳ್ಳುವ ರೀತಿ, ಸಂಸತ್ತಿನ ಒಳಗೆ ಮಮತ್ತು ಹೊರಗೆ ಅವರ ವರ್ತನೆ, ದೇಶವಿರೋಧಿ ಹೇಳಿಕೆ ಕ್ಷೇತ್ರದಲ್ಲಿ ಅವರ ವಿರೋಧಿ ಅಲೆಯನ್ನು ಸೃಷ್ಟಿಸಿವೆ ಎಂದು ಯೋಗೇಶ್ವರ್ ಹೇಳಿದರು. ಅವರ ವರ್ತನೆಗೆ ತದ್ವಿರುದ್ಧವಾಗಿ ಡಾ ಮಂಜುನಾಥ್ ಸಜ್ಜನ, ವಿದ್ಯಾವಂತ ಮತ್ತು ಸುಸಂಸ್ಕೃತ ವ್ಯಕ್ತಿಯಾಗಿದ್ದಾರೆ. ಒಬ್ಬ ವೈದ್ಯನಾಗಿ 4 ದಶಕಗಳಿಗೂ ಹೆಚ್ಚು ಕಾಲ ಜನ ಸೇವೆ ಮಾಡಿದ್ದಾರೆ. ಇಂಥವರನ್ನು ಜನ ತಮ್ಮ ಪ್ರತಿನಿಧಿಯಾಗಿ ಹೊಂದಲು ಇಷ್ಟಪಡುತ್ತಾರೆ ಎಂದು ಯೋಗೇಶ್ವರ್ ಹೇಳಿದರು.

ಜೆಡಿಎಸ್ ಜೊತೆ ಮಾಡಿಕೊಂಡಿರುವ ಮೈತ್ರಿ ಬಗ್ಗೆ ಮಾತಾಡಿದ ಅವರು, ರಾಜಕೀಯದಲ್ಲಿ ನಿರ್ಧಾರಗಳು ಆಯಾ ಕಾಲಘಟ್ಟಕ್ಕೆ ತಕ್ಕಂತೆ ತೆಗೆದುಕೊಳ್ಳಬೇಕಾಗುತ್ತದೆ. ಕಳೆದ ಸಲ ಮೈತ್ರಿ ಇಲ್ಲದೆ 25 ಸ್ಥಾನ ಸಿಕ್ಕಿದ್ದವು, ಈ ಬಾರಿ ಎಲ್ಲ 28 ಸ್ಧಾನಗಳನ್ನು ಗೆಲ್ಲುವ ಮತ್ತು ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ಉದ್ದೇಶದಿಂದ ಮೈತ್ರಿ ಮಾಡಿಕೊಳ್ಳಲಾಗಿದೆ ಎಂದು ಯೋಗೇಶ್ವರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಡಾ ಸಿಎನ್ ಮಂಜುನಾಥ್ ಸ್ಪರ್ಧೆ ಡಿಕೆ ಸಹೋದರರ ಶಿಬಿರದಲ್ಲಿ ಆತಂಕ ಮೂಡಿಸಿದೆಯೇ? ಶಿವಕುಮಾರ್ ಪ್ರತಿಕ್ರಿಯೆ ಅದನ್ನು ಸೂಚಿಸುತ್ತದೆ!