Amit Shah Road Show Live: ಡಿಕೆ ಬ್ರದರ್ಸ್​​ ಕೋಟೆಯಲ್ಲಿ ಅಮಿತ್ ಶಾ ಭರ್ಜರಿ ರೋಡ್ ಶೋ,  ಲೈವ್​ನಲ್ಲಿ ನೋಡಿ​

Amit Shah Road Show Live: ಡಿಕೆ ಬ್ರದರ್ಸ್​​ ಕೋಟೆಯಲ್ಲಿ ಅಮಿತ್ ಶಾ ಭರ್ಜರಿ ರೋಡ್ ಶೋ, ಲೈವ್​ನಲ್ಲಿ ನೋಡಿ​

ರಮೇಶ್ ಬಿ. ಜವಳಗೇರಾ
|

Updated on:Apr 02, 2024 | 6:33 PM

Amit Shah road show in channapatna: ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಇದೇ ಮೊದಲ ಬಾರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಕ್ಕೆ ಆಗಮಿಸಿದ್ದು, ಡಿಕೆ ಬ್ರದರ್ಸ್​ ಕೋಟೆ ರಾಮನಗರ ಜಿಲ್ಲೆಯಿಂದಲೇ ಪ್ರಚಾರ ಆರಂಭಿಸಿದ್ದಾರೆ. ಚನ್ನಪಟ್ಟಣದಲ್ಲಿ ಮೈತ್ರಿ ಅಭ್ಯರ್ಥಿ ಡಾ ಸಿಎನ್ ಮಂಜುನಾಥ್ ಪರ ಶಾ ಭರ್ಜರಿ ರೋಡ್​ ಶೋ ನಡೆಸಿದ್ದಾರೆ. ರೋಡ್​ ಶೋವನ್ನು ಲೈವ್​ನಲ್ಲಿ ನೋಡಿ

ರಾಮನಗರ, (ಏಪ್ರಿಲ್ 02): ಲೋಕಸಭಾ ಚುನಾವಣೆಗೆ (Loksabha Election 2024) ದಿನಾಂಕ ಘೋಷಣೆಯಾದ ಬೆನ್ನಲ್ಲೇ ಇದೇ ಮೊದಲ ಬಾರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಅವರು ರಾಜ್ಯಕ್ಕೆ ಆಗಮಿಸಿದ್ದು, ನಿನ್ನೆಯಿಂದ (ಏಪ್ರಿಲ್ 01) ಬಿಜೆಪಿ ಮತ್ತು ಜೆಡಿಎಸ್ ನಾಯಕರ ಜೊತೆ ಸರಣಿ ಸಭೆ ನಡೆಸಿ ಗೆಲುವಿಗೆ ಬೇಕಾದ ತಂತ್ರಗಳನ್ನು ನಾಯಕರಿಗೆ ತಿಳಿಸಿದ್ದಾರೆ. ಇದೀಗ ಅಮಿತ್ ಶಾ ಡಿಕೆ ಬ್ರದರ್ಸ್​ ಕೋಟೆಗೆ ಎಂಟ್ರಿ ಕೊಟ್ಟಿದ್ದಾರೆ. ಹೌದು….ಬೆಂಗಳೂರಿನಲ್ಲಿ ಸರಣಿ ಸಭೆ ಮುಗಿಸಿಕೊಂಡು ಅಮಿತ್ ಶಾ ಹೆಲಿಕಾಪ್ಟರ್​ ಮೂಲಕ ರಾಮನಗರ ಜಿಲ್ಲೆಯ ಚನ್ನಪಟ್ಟಣಕ್ಕೆ ಆಗಮಿಸಿದ್ದು, ಹೆಲಿಪ್ಯಾಡ್​ನಲ್ಲೇ ಕೆಲ ಹೊತ್ತು ನಾಯಕರ ಜೊತೆ ಮಾತುಕತೆ ನಡೆಸಿದರು. ಬಳಿಕ ಬೆಂಗಳೂರು ಗ್ರಾಮಾಂತರ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸಿಎನ್ ಮಂಜುನಾಥ್ ಪರ ಭರ್ಜರಿ  ರೋಡ್ ಶೋ ನಡೆಸಿದರು. ಇನ್ನು ಅಮಿತ್ ಶಾ ಅವರು ಚನ್ನಪಟ್ಟಣದಲ್ಲಿ ( Amit Shah road show in channapatna ) ಮಂಗಳವಾರಪೇಟೆಯಿಂದ ಗಾಂಧಿಭವನ ಸರ್ಕಲ್​ವರೆಗೆ ಸುಮಾರು ಒಂದು ಕಿಲೋ ಮೀಟರ್​ ರೋಡ್ ಶೋ ಹೇಗಿದೆ ಎನ್ನುವುದನ್ನು ಲೈವ್​ನಲ್ಲಿ ನೋಡಿ.

Published on: Apr 02, 2024 06:31 PM