ಹಿಂದೂವಾಗಿ ನಾನು ಸಾಯಲಾರೆ ಎಂದು ಅಂಬೇಡ್ಕರ್ ಬೌದ್ಧ ಧರ್ಮ ಸೇರಿದರು: ಸಿದ್ದರಾಮಯ್ಯ

ಹಿಂದೂವಾಗಿ ನಾನು ಸಾಯಲಾರೆ ಎಂದು ಅಂಬೇಡ್ಕರ್ ಬೌದ್ಧ ಧರ್ಮ ಸೇರಿದರು: ಸಿದ್ದರಾಮಯ್ಯ

ದಿಲೀಪ್​, ಚೌಡಹಳ್ಳಿ
| Updated By: ಗಂಗಾಧರ​ ಬ. ಸಾಬೋಜಿ

Updated on: Apr 02, 2024 | 8:53 PM

ಮೈಸೂರಿನಲ್ಲಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸಂವಿಧಾನ ಕೆಟ್ಟವರ ಕೈಯಲ್ಲಿ ಸಿಲುಕಿದೆ. ಸಂವಿಧಾನ ಉಳಿಯಬೇಕೆಂದರೆ ಬಿಜೆಪಿಯನ್ನು ಸೋಲಿಸಬೇಕು. ಬಿಜೆಪಿ ಸಮಾಜಕ್ಕೆ ಡೇಂಜರ್. ಬಿಜೆಪಿ ಆರ್​ಎಸ್ಎಸ್​ನ ಮತ್ತೊಂದು ಮುಖ. ಹಿಂದೂವಾಗಿ ಹುಟ್ಟಿದ್ದೇನೆ ಆದರೆ ಹಿಂದೂವಾಗಿ ನಾನು ಸಾಯಲಾರೆ ಅಂತಾ ಅಂಬೇಡ್ಕರ್ ಅವರು ಬೌದ್ಧ ಧರ್ಮ ಸೇರಿದರು ಎಂದು ಹೇಳಿದ್ದಾರೆ.

ಮೈಸೂರು, ಮಾರ್ಚ್​ 02: ನಗರದಲ್ಲಿ ಇಂದು ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ (Siddaramaiah) ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಸಂವಿಧಾನ ಕೆಟ್ಟವರ ಕೈಯಲ್ಲಿ ಸಿಲುಕಿದೆ. ಸಂವಿಧಾನ ಉಳಿಯಬೇಕೆಂದರೆ ಬಿಜೆಪಿಯನ್ನು ಸೋಲಿಸಬೇಕು. ದಲಿತರನ್ನು ದೇವರ ಗರ್ಭಗುಡಿ ಒಳಗಡೆಯೇ ಬಿಡುವುದಿಲ್ಲ. ಹೀಗಾಗಿ ದಲಿತರು ಮತ್ತೆ ಬಿಜೆಪಿಯವರ ಮುಖ ನೋಡಬೇಡಿ. ಸಾಮಾಜಿಕ ನ್ಯಾಯಕ್ಕೆ ಬಿಜೆಪಿಯವರು ವಿರುದ್ಧವಾಗಿದ್ದಾರೆ. ಬಿಜೆಪಿ ಸಮಾಜಕ್ಕೆ ಡೇಂಜರ್. ಬಿಜೆಪಿ ಆರ್​ಎಸ್ಎಸ್​ನ ಮತ್ತೊಂದು ಮುಖ. ಹಿಂದೂವಾಗಿ ಹುಟ್ಟಿದ್ದೇನೆ ಆದರೆ ಹಿಂದೂವಾಗಿ ನಾನು ಸಾಯಲಾರೆ ಅಂತಾ ಅಂಬೇಡ್ಕರ್ ಅವರು ಬೌದ್ಧ ಧರ್ಮ ಸೇರಿದರು ಎಂದು ಹೇಳಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.