ಚಿಕ್ಕಮಗಳೂರು: ಸೋರುತಿಹುದು ಕೆಎಸ್​ಆರ್​ಟಿಸಿ ಬಸ್, ಅಧಿಕಾರಿಗಳ ಅಜ್ಞಾನದಿಂದ ಎಂದ ಪ್ರಯಾಣಿಕರು​​

ಚಿಕ್ಕಮಗಳೂರು: ಸೋರುತಿಹುದು ಕೆಎಸ್​ಆರ್​ಟಿಸಿ ಬಸ್, ಅಧಿಕಾರಿಗಳ ಅಜ್ಞಾನದಿಂದ ಎಂದ ಪ್ರಯಾಣಿಕರು​​

ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ವಿವೇಕ ಬಿರಾದಾರ

Updated on: Aug 25, 2024 | 9:43 AM

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ರಾಜ್ಯದ ಜನರ ಜೀವನಾಡಿಯಾಗಿದೆ. ಕೆಎಸ್​ಆರ್​​ಟಿಸಿ ಬಸ್​ನಲ್ಲಿ ಪ್ರತಿದಿನ ಅಸಂಖ್ಯ ಜನರು ಪ್ರಯಾಣ ಮಾಡುತ್ತಾರೆ. ದೊಡ್ಡಬಳ್ಳಾಪುರ ಡಿಪೋಗೆ ಸೇರಿದ ಕೆಎಸ್​ಆರ್​ಟಿಸಿ ಬಸ್ ಸೋರುತ್ತಿದ್ದು, ಪ್ರಯಾಣಿಕರು ಪರದಾಡಿದ ವಿಡಿಯೋ ವೈರಲ್​ ಆಗಿದೆ.

ಚಿಕ್ಕಮಗಳೂರು, ಆಗಸ್ಟ್​​ 25: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ (KSRTC) ಬಸ್​ ಸೋರುತ್ತಿದೆ. ಸೋರುತ್ತಿರುವ ಕೆಎಸ್ಆರ್​ಟಿಸಿ ಬಸ್​​ನಲ್ಲೇ (Bus) ಜನರು ಪ್ರಯಾಣಿಸಿದ್ದು, ಸರ್ಕಾರಕ್ಕೆ ಹಿಡಿಶಾಪ ಹಾಕಿದ್ದಾರೆ. ಸೋರುವ ಬಸ್​ನಲ್ಲಿ ಪ್ರಯಾಣಿಕರ ಪರದಾಟ ಹೇಳುತೀರದು. ಬೇಗ ನಮ್ಮ ನಿಲ್ದಾಣ ಬರಲಿ ಅಂತ ದೇವರಲ್ಲಿ ಪಾರ್ಥಿಸಿದರು.

ದೊಡ್ಡಬಳ್ಳಾಪುರ ಡಿಪೋಗೆ ಸೇರಿದ ಕೆಎಸ್​ಆರ್​ಟಿಸಿ ಬಸ್ ದೊಡ್ಡಬಳ್ಳಾಪುರದಿಂದ ಹೊರಟು ಹಾಸನ ಮಾರ್ಗವಾಗಿ ಹೊರನಾಡಿಗೆ ತಲುಪುತ್ತದೆ. ಈ ಬಸ್​ನಲ್ಲಿ ಮುಚ್ಚಿದ ಕಿಟಕಿಯ ಮೇಲಿನ ಸಂಧಿ, ಮುಚ್ಚಿದ ಬಾಗಿಲು ಮತ್ತು ಬಸ್​ನ ಮಾಳಿಗೆಯಿಂದ ಸೀಟ್​​ ಮೇಲೆ ನೀರು ಸೋರುತ್ತಿದೆ. ಸೀಟ್​​ ಮೇಲೆ ನೀರು ಬಿದ್ದಿರುವುದರಿಂದ ಪ್ರಯಾಣಿಕರು ನಿಂತು ಪ್ರಯಾಣ ಮಾಡಿದರು. ಇನ್ನು ಕೆಲವರು ನೀರು ಒರೆಸಿ ಅಲ್ಲೇ ಕೂತಿದ್ದರೆ, ಇನ್ನು ಕೆಲವರು ನೀರು ಬಿದ್ದ ಸೀಟು ಬಿಟ್ಟು ಪಕ್ಕದ ಸೀಟ್​ನಲ್ಲಿ ಕೂತು ಪ್ರಯಾಣ ಮಾಡಿದರು. ಸೋರುವ ಬಸ್ಸಿನಲ್ಲಿ ಪ್ರಯಾಣಿಕರ ಪರದಾಟ ಹೇಳತೀರದು.

ಇದನ್ನೂ ಓದಿ: ಕೆಎಸ್​ಆರ್​ಟಿಸಿ ಬಸ್ ಟಿಕೆಟ್ ದರ ಹೆಚ್ಚಳ ಸುಳಿವು ನೀಡಿದ ಸಚಿವ ರಾಮಲಿಂಗಾ ರೆಡ್ಡಿ: ಬಿಜೆಪಿ ವಿರುದ್ಧ ವಾಗ್ದಾಳಿ

ಸೋರುತ್ತಿರುವ KSRTC ಬಸ್​

ಕೆಎಸ್​ಆರ್​ಟಿ ಬಸ್​ ಪರಿಸ್ಥಿತಿಯನ್ನು ಕಾಲೇಜು ವಿದ್ಯಾರ್ಥಿಯೊಬ್ಬ ವಿಡಿಯೋ ಮೂಲಕ ವಿವರಿಸಿದ್ದು, ಮಳೆಯಿಂದ ಬಸ್​ ಸೋರುತ್ತಿದೆ. ಸೀಟ್​​ ಮೇಲೆ ನೀರು ಬಿದ್ದಿದೆ. ಯಾವ ಸೀಟ್​ ಮೇಲೆ ಕೂತು ಪ್ರಯಾಣ ಮಾಡಬೇಕು ಎಂಬುವುದು ನಮಗೆ ಗೊಂದಲವಾಗಿದೆ. ಸಾರಿಗೆ ಅಧಿಕಾರಿಗಳೆ ನಮಗೆ ದಯವಿಟ್ಟು ತಿಳಿಸಿ ಯಾವ ಸೀಟ್​ ಮೇಲೆ ಕೂರಬೇಕೆಂದು. ದಿನನಿತ್ಯ ಇದೇ ಗೋಳು ಆಗಿದೆ ಎಂದು ಆಕ್ರೋಶ ಹೊರ ಹಾಕಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ