ವಿಷ್ಣುವರ್ಧನ್- ಅಂಬರೀಶ್ ಸ್ನೇಹ ಹೇಗಿತ್ತು?; ಹಿರಿಯ ನಟ ದೊಡ್ಡಣ್ಣ ವ್ಯಾಖ್ಯಾನಿಸಿದ್ದು ಹೀಗೆ..
Doddanna: ಹಿರಿಯ ನಟ ದೊಡ್ಡಣ್ಣ ಕನ್ನಡ ಚಿತ್ರರಂಗಕ್ಕೆ ಸಿಕ್ಕ ಅಪರೂಪದ ಮಾಣಿಕ್ಯ. ಖಳನಟನಾಗಿ , ಹಾಸ್ಯನಟನಾಗಿ, ಪೋಷಕ ನಟನಾಗಿ ಕನ್ನಡ ಚಿತ್ರಪ್ರೇಮಿಗಳ ಮನಸೋರೆಗೊಂಡಿರುವ ಅವರು ತಮ್ಮ ಜೀವನದ ಹಾದಿಯನ್ನು ಟಿವಿ9ನೊಂದಿಗೆ ಮೆಲುಕು ಹಾಕಿದ್ದಾರೆ. ಈ ವೇಳೆ ಅವರು ವಿಷ್ಣುವರ್ಧನ್ ಹಾಗೂ ಅಂಬರೀಶ್ ನಡುವಿನ ಸ್ನೇಹದ ಕುರಿತು ಮಾತನಾಡಿದ್ದಾರೆ.
ಕನ್ನಡದ ಹಿರಿಯ ನಟ ದೊಡ್ಡಣ್ಣ ಕನ್ನಡ ಚಿತ್ರರಂಗದಲ್ಲಿ ಬಹಳ ಕಾಲದಿಂದ ಸಕ್ರಿಯರಾಗಿ ತೊಡಗಿಸಿಕೊಂಡಿವರು. ಖ್ಯಾತ ದಿಗ್ಗಜ ನಟರಿಂದ ತೊಡಗಿ ಇಂದಿನ ತಲೆಮಾರಿನ ಉದಯೋನ್ಮುಖ ನಟರೊಂದಿಗೆ ದೊಡ್ಡಣ್ಣ ಕೆಲಸ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಅನುಭವ ಸಂಪತ್ತು ಬಹಳ ದೊಡ್ಡದು. ಜೊತೆಗೆ ಖ್ಯಾತ ಕಲಾವಿದರನ್ನು ಬಹಳ ಹತ್ತಿರದಿಂದಲೂ ಅವರು ಗಮನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಟಿವಿ9ನೊಂದಿಗೆ ಅವರು ಮಾತನಾಡುತ್ತಾ, ವಿಷ್ಣುವರ್ಧನ್ ಹಾಗೂ ಅಂಬರೀಷ್ ಗೆಳೆತನದ ಬಾಂಧವ್ಯವನ್ನು ನೆನಪಿಸಿಕೊಂಡಿದ್ದಾರೆ.
ಅಂಬರೀಶ್ ಹಾಗೂ ವಿಷ್ಣುವರ್ಧನ್ ಗೆಳೆತನವನ್ನು ವ್ಯಾಖ್ಯಾನಿಸುತ್ತಾ ದೊಡ್ಡಣ್ಣ ವಚನವನ್ನು ನೆನಪಿಸಿಕೊಂಡಿದ್ದಾರೆ. ‘ಸಮುದ್ರದ ಉಪ್ಪು, ಬೆಟ್ಟದ ನೆಲ್ಲಿಕಾಯಿ ಎತ್ತಣಿಂದೆತ್ತ ಸಂಬಂಧವಯ್ಯ.. ಆದರೆ, ಅವೆರಡೂ ಸೇರಿದಾಗ ಅತ್ಯುತ್ತಮ ಉಪ್ಪಿನಕಾಯಿಯಾಗುತ್ತದೆ. ಹಾಗೆಯೇ ವಿಷ್ಣು ಹಾಗೂ ಅಂಬಿ ಸೇರಿದಾಗ ಅನ್ಯೋನ್ಯತೆ ಕಾಣುತ್ತದೆ. ಅಂತಹ ಅನ್ಯೋನ್ಯತೆಗೆ ಒಂದು ಹೊಸ ಶಬ್ಧ ನೀಡಿದವರು ಹಂಸಲೇಖ. ದಿಗ್ಗಜರು ಚಿತ್ರದ ಹಾಡಿನಲ್ಲಿ ‘ಕುಚಿಕು’ ಎಂಬ ಅದ್ಭುತ ಪದವನ್ನು ಬಳಸಿದರು. ಅತ್ಯುತ್ತಮ ಸ್ನೇಹಿತರನ್ನು ‘ಕುಚಿಕು’ ಗೆಳೆಯರು ಎಂದೇ ಕರೆಯುತ್ತೇವೆ. ಅದನ್ನು ನೋಡಿ ಹಂಸಲೇಖ ಆ ಹೆಸರು ನೀಡಿದ್ದು, ಈಗಲೂ ಎಲ್ಲರ ಮನದಲ್ಲಿದೆ. ತಾನೂ ಆ ಚಿತ್ರದಲ್ಲಿ ನಟಿಸಿದ್ದು ಹೆಮ್ಮೆ’ ಎಂದು ದೊಡ್ಡಣ್ಣ ನುಡಿದಿದ್ದಾರೆ. ವಿಷ್ಣುವರ್ಧನ್ ಮಾತಿಗೆ ಅಂಬರೀಷ್ ಬಹಳ ಬೆಲೆ ಕೊಡುತ್ತಿದ್ದರು ಎಂದು ದೊಡ್ಡಣ್ಣ ಇದೇ ವೇಳೆ ಸ್ಮರಿಸಿಕೊಂಡಿದ್ದಾರೆ.
ಇದನ್ನೂ ಓದಿ:
ಸಲ್ಮಾನ್ ಖಾನ್ ಜೊತೆ ಶಮಿತಾ ಶೆಟ್ಟಿ ತುಳು ಮಾತುಕತೆ; ಮಾತೃಭಾಷೆ ಅಭಿಮಾನಕ್ಕೆ ಜನರು ಫಿದಾ
ಚಿರಂಜೀವಿ ಮತ್ತು ರಾಮ್ ಚರಣ್ ಜತೆ ಪ್ರಶಾಂತ್ ನೀಲ್; ಆರ್ಆರ್ಆರ್ ನಿರ್ಮಾಣ ಸಂಸ್ಥೆಯಿಂದ ಬಂಡವಾಳ?