ಚಿರಂಜೀವಿ ಮತ್ತು ರಾಮ್​ ಚರಣ್ ಜತೆ ಪ್ರಶಾಂತ್​ ನೀಲ್​​; ಆರ್​ಆರ್​ಆರ್​ ನಿರ್ಮಾಣ ಸಂಸ್ಥೆಯಿಂದ ಬಂಡವಾಳ?

ಪ್ರಶಾಂತ್​ ನೀಲ್​ ಜತೆ ಕೆಲಸ ಮಾಡಬೇಕು ಎಂದು ದೊಡ್ಡ ಪ್ರೊಡಕ್ಷನ್​ ಹೌಸ್​ಗಳು ಕಾದು ಕೂತಿವೆ. ಸ್ಟಾರ್​ ನಟರ ಜತೆ ಸಿನಿಮಾ ಮಾಡೋಕೆ ಪ್ರಶಾಂತ್​ ನೀಲ್​ ಆಸಕ್ತಿ ತೋರಿಸುತ್ತಿದ್ದಾರೆ.

ಚಿರಂಜೀವಿ ಮತ್ತು ರಾಮ್​ ಚರಣ್ ಜತೆ ಪ್ರಶಾಂತ್​ ನೀಲ್​​; ಆರ್​ಆರ್​ಆರ್​ ನಿರ್ಮಾಣ ಸಂಸ್ಥೆಯಿಂದ ಬಂಡವಾಳ?
ರಾಮ್​ ಚರಣ್​-ಪ್ರಶಾಂತ್​ ನೀಲ್​- ಚಿರಂಜೀವಿ

ಪ್ರಶಾಂತ್​ ನೀಲ್ ಬೇಡಿಕೆಯ ನಿರ್ದೇಶಕ. ‘ಕೆಜಿಎಫ್​’ ತೆರೆಕಂಡ ನಂತರದಲ್ಲಿ ಅವರಿಗೆ ದೊಡ್ಡ ಮಟ್ಟದಲ್ಲಿ ಬೇಡಿಕೆ ಸೃಷ್ಟಿ ಆಗಿದೆ. ಈ ಕಾರಣಕ್ಕೆ ಸ್ಟಾರ್​ ನಟರ ಜತೆ ಅವರು ಸಿನಿಮಾ ಮಾಡುತ್ತಿದ್ದಾರೆ. ಈಗ ರಾಮ್​ ಚರಣ್​ ಹಾಗೂ ಚಿರಂಜೀವಿ ಜತೆ ಕಾಣಿಸಿಕೊಂಡಿದ್ದಾರೆ ಪ್ರಶಾಂತ್ ನೀಲ್​​. ಈ ಭೇಟಿ ಹಿಂದಿನ ಉದ್ದೇಶ ಬೇರೆಯೇ ಇದೆ ಎನ್ನುತ್ತಿದ್ದಾರೆ ಫ್ಯಾನ್ಸ್​.

ಪ್ರಶಾಂತ್​ ನೀಲ್​ ಜತೆ ಕೆಲಸ ಮಾಡಬೇಕು ಎಂದು ದೊಡ್ಡ ಪ್ರೊಡಕ್ಷನ್​ ಹೌಸ್​ಗಳು ಕಾದು ಕೂತಿವೆ. ಸ್ಟಾರ್​ ನಟರ ಜತೆ ಸಿನಿಮಾ ಮಾಡೋಕೆ ಪ್ರಶಾಂತ್​ ನೀಲ್​ ಆಸಕ್ತಿ ತೋರಿಸುತ್ತಿದ್ದಾರೆ. ಈಗ ಅವರು ಚಿರಂಜೀವಿ ಜತೆ ಕಾಣಿಸಿಕೊಂಡಿರುವುದು ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಅಷ್ಟೇ ಅಲ್ಲ, ಆರ್​ಆರ್​ಆರ್​ ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಈ ಟ್ವೀಟ್​ನಲ್ಲಿ ಟ್ಯಾಗ್​ ಮಾಡಲಾಗಿದೆ.

‘ಲೆಜೆಂಡ್​ ನಟರನ್ನು ಭೇಟಿ ಮಾಡಿದೆ. ಆತಿಥ್ಯ ನೀಡಿದ್ದಕ್ಕೆ ಧನ್ಯವಾದ. ಚಿರಂಜೀವಿಯನ್ನು ಭೇಟಿ ಮಾಡಬೇಕು ಎನ್ನುವ ಬಾಲ್ಯದ ಕನಸು ನನಸಾಯಿತು’ ಎಂದು ಟ್ವೀಟ್​ ಮಾಡಿದ್ದಾರೆ. ಇದರ ಜತೆಗೆ ಆರ್​ಆರ್​ಆರ್​ ಸಿನಿಮಾ ನಿರ್ಮಾಣ ಸಂಸ್ಥೆ ಡಿವಿವಿ ಮೂವಿಸ್​ ಅನ್ನು ಟ್ಯಾಗ್​ ಮಾಡಿದ್ದಾರೆ.  ಈ ಮೂಲಕ ಸಾಕಷ್ಟು ಕುತೂಹಲ ಹುಟ್ಟಿಸಿದ್ದಾರೆ.

ಇಡೀ ಭಾರತೀಯ ಚಿತ್ರರಂಗವೇ ಕಾತರದಿಂದ ಕಾಯುತ್ತಿರುವ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಯಾವಾಗ ರಿಲೀಸ್​ ಆಗಲಿದೆ ಎಂಬುದಕ್ಕೆ ಇತ್ತೀಚೆಗೆ ಉತ್ತರ ಸಿಕ್ಕಿತ್ತು. 2022ರ ಏಪ್ರಿಲ್​ 14ರಂದು ಚಿತ್ರ ಬಿಡುಗಡೆ ಆಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇಷ್ಟು ಹೊತ್ತಿಗಾಗಲೇ ‘ಕೆಜಿಎಫ್​ 2’ ತೆರೆಕಂಡಿರಬೇಕಿತ್ತು. ಆದರೆ ಕೊರೊನಾ ವೈರಸ್​ ಎರಡನೇ ಅಲೆ ಹರಡಿದ ಪರಿಣಾಮ ಚಿತ್ರದ ರಿಲೀಸ್​ ದಿನಾಂಕ ಮುಂದೂಡಲಾಗಿತ್ತು. ಈ ಚಿತ್ರದ ಕೊನೆಯ ಹಂತದ ಕೆಲಸದಲ್ಲಿ ಪ್ರಶಾಂತ್​ ನೀಲ್​ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ: KGF 2 Release Date: 2022 ಏಪ್ರಿಲ್​ 14ಕ್ಕೆ ‘ಕೆಜಿಎಫ್: ಚಾಪ್ಟರ್​ 2’ ರಿಲೀಸ್​; ಬ್ರೇಕಿಂಗ್​ ನ್ಯೂಸ್​ ನೀಡಿದ ಯಶ್​-ಪ್ರಶಾಂತ್​ ನೀಲ್​​

ಬಿಗ್​ ಬಾಸ್​ ಬೆಡಗಿಗೆ ‘ಸಲಾರ್​’ ಚಿತ್ರದಲ್ಲಿ ಪ್ರಶಾಂತ್​ ನೀಲ್​ ಚಾನ್ಸ್​ ಕೊಟ್ಟಿದ್ದು ನಿಜವೇ? ಇಲ್ಲಿದೆ ಅಸಲಿಯತ್ತು

Published On - 4:54 pm, Fri, 15 October 21

Click on your DTH Provider to Add TV9 Kannada