Loading video

ಬೆಣ್ಣೆಹಳ್ಳ ಸೃಷ್ಟಿಸಿರುವ ಚಿಕ್ಕ ನಡುಗಡ್ಡೆಯಲ್ಲಿ ಸಿಲುಕಿರುವ ನಾಯಿಯ ಪಾಡು ಯಾರಿಗೂ ಬೇಡ

Updated on: Jun 20, 2025 | 5:57 PM

ಸೇತುವೆ ಮೇಲೆ ನಿಂತು ತನ್ನ ವಿಡಿಯೋ ಮಾಡುತ್ತಿರುವ ಜನರತ್ತ ನಾಯಿ ಅಸಹಾಯಕತೆಯಿಂದ ನೋಡುತ್ತಿದೆ. ಅದರ ಕಣ್ಣುಗಳಲ್ಲಿ ವೇದನೆ ಮಡುಗಟ್ಟಿರುವುದನ್ನು ಗುರುತಿಸಬಹುದು. ಅದನ್ನು ಅಲ್ಲಿಂದ ಮೇಲೆತ್ತುವುದು ಅಗ್ನಿಶಾಮಕ ದಳದ ಸಿಬ್ಬಂದಿಗೆ ಕಷ್ಟವೇನೂ ಅಲ್ಲ. ರೋಣದಲ್ಲಿ ಪ್ರಾಯಶಃ ಫೈರ್ ಬ್ರಿಗೇಡ್ ಇದ್ದೀತು. ಗದಗನಲ್ಲಂತೂ ಇದ್ದೇ ಇರುತ್ತದೆ, ಜನ ಫೋನ್ ಮಾಡಿ ಕರೆಸಬೇಕು ಅಷ್ಟೇ.

ಗದಗ, ಜೂನ್ 20: ನಮ್ಮ ಪಾಡು ನಾಯಿ ಪಾಡು (dog’s plight) ಅಯಿತು  ಅನ್ನುವುದನ್ನು ಕೇಳುತ್ತಿರುತ್ತೇವೆ, ಅದರೆ ಈ ನಾಯಿಯ ಪಾಡು ನೋಡಿದರೆ ಇಂಥ ಪಾಡು ಯಾರಿಗೂ ಬೇಡ ಅನಿಸುತ್ತದೆ. ಜಿಲ್ಲೆಯ ರೋಣ ತಾಲೂಕಿನಲ್ಲಿರುವ ಬೆಣ್ಣೆಹಳ್ಳ ಉಕ್ಕಿ ಹರಿಯುತ್ತಿರುವುದನ್ನು ಮತ್ತು ರೈತಾಪಿ ಸಮುದಾಯದೊಂದಿಗೆ ಬೇರೆ ಜನ ಸಹ ಕಷ್ಟಪಡುತ್ತಿರುವುದನ್ನು ನಾವು ವ್ಯಾಪಕವಾಗಿ ವರದಿ ಮಾಡಿದ್ದೇವೆ. ಆದರೆ ಇದು ವಿಚಿತ್ರ ಸಂದರ್ಭ. ಚಿಕ್ಕ ನಡುಗಡ್ಡೆಯಲ್ಲಿ ನಾಯಿ ಸಿಲುಕಿಕೊಂಡಿದೆ. ಬೆಣ್ಣಹಳ್ಳದಲ್ಲಿ ಹರಿವ ನೀರಿನ ಪ್ರಮಾಣ ಕಡಿಮೆಯಾಗಿರೋದು ನಿಜವಾದರೂ ನೀರು ಮಾತ್ರ ಹರಿಯುತ್ತಲೇ ಇದೆ. ನಾಯಿಗೆ ಈಜುವುದು ಗೊತ್ತು, ಅದರೆ ಸುತ್ತಲೂ ನೀರು ಹರಿಯುವುತ್ತಿರೋದ್ರಿಂದ ಯಾವ ಕಡೆ ಹೋಗೋದು ಎಂಬ ಗೊಂದಲ ನಾಯಿಗಿದೆ.

ಇದನ್ನೂ ಓದಿ:  ಬೆಣ್ಣೆ ಹಳ್ಳ ಪ್ರವಾಹ: ದೇವಸ್ಥಾನದೊಳಗೆ ನುಗ್ಗಿದ ನೀರಿನಲ್ಲೇ 2 ದಿನ ಕಳೆದ ಮಾನಸಿಕ ಅಸ್ವಸ್ಥನ ರಕ್ಷಣೆ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ