ಕಾಳಜಿ ಕೇಂದ್ರದಲ್ಲಿರೋ ಮಾಲೀಕನ ಕಾಣಲು ಬಂದ ಸಾಕು ನಾಯಿಯ ಮೂಕ ವೇದನೆ,ಎಲ್ಲಿ?
[lazy-load-videos-and-sticky-control id=”PkNSHVZZR5U”] ಕೊಡಗು: ಮನುಷ್ಯ ಮತ್ತು ಸಾಕುಪ್ರಾಣಿಗಳಿಗೆ ಅದೆಂತಹ ಅವಿನಾಭಾವ ಸಂಬಂಧವಿರುತ್ತದೆ ಎಂದರೆ ತಮ್ಮ ಪ್ರೀತಿಪಾತ್ರರನ್ನು ಅದೆಂಥದ್ದೇ ಕಷ್ಟಕಾಲದಲ್ಲೂ ಸಾಕುಪ್ರಾಣಿಗಳು ಬಿಟ್ಟುಕೊಡದಂತಹ ಪ್ರಕರಣಗಳನ್ನು ಸಾಕಷ್ಟು ಭಾರಿ ನೋಡಿದ್ದೇವೆ. ಅಂಥದ್ದೇ ಒಂದು ಪ್ರಕರಣ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಗುಡ್ಡಗಾಡಿನ ಪ್ರದೇಶದ ಜನರು ಗುಡ್ಡ ಕುಸಿತದ ಆತಂಕದಿಂದ ಹಾಗೂ ಮಳೆ ಸೃಷ್ಟಿಸಿರುವ ಪ್ರವಾಹದಿಂದ ಬಚಾವಾಗಲು ಸುರಕ್ಷಿತ ಪ್ರದೇಶಗಳಿಗೆ ತೆರಳುತ್ತಿದ್ದಾರೆ. ಇನ್ನು ಕೆಲವರು ಜಿಲ್ಲಾಡಳಿತ ವ್ಯವಸ್ಥೆ ಮಾಡಿರುವ ಕಾಳಜಿ ಕೇಂದ್ರಗಳಿಗೆ ಬರುತ್ತಿದ್ದಾರೆ. ಹೀಗೆ ಪ್ರವಾಹದಿಂದ […]

[lazy-load-videos-and-sticky-control id=”PkNSHVZZR5U”]
ಕೊಡಗು: ಮನುಷ್ಯ ಮತ್ತು ಸಾಕುಪ್ರಾಣಿಗಳಿಗೆ ಅದೆಂತಹ ಅವಿನಾಭಾವ ಸಂಬಂಧವಿರುತ್ತದೆ ಎಂದರೆ ತಮ್ಮ ಪ್ರೀತಿಪಾತ್ರರನ್ನು ಅದೆಂಥದ್ದೇ ಕಷ್ಟಕಾಲದಲ್ಲೂ ಸಾಕುಪ್ರಾಣಿಗಳು ಬಿಟ್ಟುಕೊಡದಂತಹ ಪ್ರಕರಣಗಳನ್ನು ಸಾಕಷ್ಟು ಭಾರಿ ನೋಡಿದ್ದೇವೆ. ಅಂಥದ್ದೇ ಒಂದು ಪ್ರಕರಣ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಗುಡ್ಡಗಾಡಿನ ಪ್ರದೇಶದ ಜನರು ಗುಡ್ಡ ಕುಸಿತದ ಆತಂಕದಿಂದ ಹಾಗೂ ಮಳೆ ಸೃಷ್ಟಿಸಿರುವ ಪ್ರವಾಹದಿಂದ ಬಚಾವಾಗಲು ಸುರಕ್ಷಿತ ಪ್ರದೇಶಗಳಿಗೆ ತೆರಳುತ್ತಿದ್ದಾರೆ. ಇನ್ನು ಕೆಲವರು ಜಿಲ್ಲಾಡಳಿತ ವ್ಯವಸ್ಥೆ ಮಾಡಿರುವ ಕಾಳಜಿ ಕೇಂದ್ರಗಳಿಗೆ ಬರುತ್ತಿದ್ದಾರೆ.
ಹೀಗೆ ಪ್ರವಾಹದಿಂದ ಮನೆ ಕಳೆದುಕೊಂಡ ಮನೆ ಮಾಲೀಕ ಕಾಳಜಿ ಕೇಂದ್ರಕ್ಕೆ ತೆರಳಿದ್ದಾನೆ. ಈ ನಡುವೆ ಆತ ಸಾಕಿದ್ದ ಶ್ವಾನ ತನ್ನ ಮಾಲೀಕನನ್ನು ಹುಡುಕಿಕೊಂಡು ಬಂದಿದ್ದು, ಕೇಂದ್ರದ ಮುಂದೆ ಕಾದು ಕುಳಿತಿದೆ. ಶ್ವಾನವನ್ನು ಯಾರೇ ಅಲ್ಲಿಂದ ಓಡಿಸಲು ಪ್ರಯತ್ನಿಸಿದರೂ ಸಹ ಶ್ವಾನ ಕಾಳಜಿ ಕೇಂದ್ರವನ್ನು ಬಿಟ್ಟು ಹೋಗದೆ ಅಲ್ಲೇ ತನ್ನ ಮಾಲಿಕನಿಗೆ ಕಾಯುತ್ತಿರುವ ಶ್ವಾನದ ಮೂಕರೋದನೆ ಮನಸ್ಸು ಕಲಕುವಂತಿತ್ತು.
Published On - 12:12 pm, Sun, 9 August 20




