ಪಹಲ್ಗಾಮ್ ದಾಳಿಯಲ್ಲಿ ತಮ್ಮವರನ್ನು ಕಳೆದುಕೊಂಡಿರುವ ಜನರ ಮಾತನ್ನು ಯಾರೂ ಟೀಕಿಸಬಾರದು: ಜಯಪ್ರಕಾಶ್ ಹೆಗ್ಡೆ

Updated on: May 01, 2025 | 8:00 PM

ಯುದ್ಧ ಮಾಡಬೇಕಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಯಪ್ರಕಾಶ್ ಹೆಗ್ಡೆ ಅವರು, ಅಗತ್ಯಬಿದ್ದರೆ ಯುದ್ದ ಮಾಡಲೇಬೇಕು ಅದರಲ್ಲಿ ಎರಡು ಮಾತಿಲ್ಲ, ಮುಖ್ಯಮಂತ್ರಿಯವರು ಮತ್ತು ಪೇಜಾವರ ಶ್ರೀಗಳು ಅದನ್ನೇ ಹೇಳಿದ್ದಾರೆ, ಅದರೆ ಯುದ್ಧ ಮಾಡಬೇಕಾ ಅಥವಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ, ಅಲ್ಲೊಂದು ಕಮಿಟಿ ಇರುತ್ತದೆ, ಅದನ್ನು ಬಿಟ್ಟು ಬೇರೆ ಯಾರೂ ಕಾಲ್ ತೆಗೆದುಕೊಳ್ಳಲಾಗದು ಎಂದು ಹೇಳಿದರು.

ಉಡುಪಿ, ಮೇ 1: ಪಹಲ್ಗಾಮ್ ನಲ್ಲಿ ಕಣ್ಣೆದುರೇ ಉಗ್ರರ ದಾಳಿ ನಡೆದು, ತಮ್ಮವರನ್ನು ಕಳೆದುಕೊಂಡು ಊರುಗಳಿಗೆ ಹಿಂತಿರುಗಿರುವ ದುಃಖತಪ್ತ ಜನರ ಹೇಳಿಕೆಗಳನ್ನು ಟೀಕಿಸುವುದು, ಪ್ರಶ್ನಿಸುವುದನ್ನು ಯಾರೂ ಮಾಡಬಾರದು ಎಂದು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ ಜಯಪ್ರಕಾಶ್ ಹೆಗ್ಡೆ (K Jayaprakash Hegde ) ಹೇಳಿದರು. ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು ದಾಳಿಯ ನಂತರ ಎಲ್ಲ ಪಕ್ಷಗಳು ಒಂದಾಗಿ ಕೇಂದ್ರ ಸರಕಾರದೊಂದಿಗೆ ನಿಂತಿವೆ, ಪ್ರಶ್ನೆ ಅದಲ್ಲ; ದಾಳಿಯನ್ನು ಪ್ರತ್ಯಕ್ಷವಾಗಿ ನೋಡಿದ ಜನ ಅಪಾರ ನೋವಲ್ಲಿದ್ದಾರೆ, ಅವರ ನೋವು ಇಡೀ ದೇಶದ ನೋವು, ಅವರು ಅಲ್ಲಿ ಕಂಡಿದ್ದನ್ನು ಕೇಳಿದ್ದನ್ನು ಹೇಳುತ್ತಿದ್ದಾರೆ, ಘಟನೆ ನಡೆದ ಬಳಿಕ ಹೀಗೆ ಹೇಳಬೇಕು ಅಂತ ಅವರಿಗೇನು ಸ್ಕ್ರಿಪ್ಟ್ ಕೊಡಬೇಕಿತ್ತಾ ಎಂದು ಹೆಗ್ಡೆ ಖಾರವಾಗಿ ಪ್ರಶ್ನಿಸಿದರು.

ಇದನ್ನೂ ಓದಿ:Caste Census Report: ಸಿಎಂ ಸಿದ್ದರಾಮಯ್ಯಗೆ ಜಾತಿಗಣತಿ ವರದಿ ಸಲ್ಲಿಸಿದ ಜಯಪ್ರಕಾಶ್ ಹೆಗ್ಡೆ, ವರದಿಯಲ್ಲಿ ಏನೇನಿದೆ?

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ