ಇನ್ಮೇಲೆ ನನ್ನ ಡಾಕ್ಟರ್​ ಸಿದ್ದರಾಮಯ್ಯ ಅಂತ ಕರೀಬೇಡಿ: ಮಾಜಿ ಸಿಎಂ ನಗೆ ಚಟಾಕಿ

Edited By:

Updated on: Oct 19, 2026 | 4:57 PM

ಮಾತನಾಡಿದ ಸಿದ್ದರಾಮಯ್ಯ, ನಾನು ಡಾಕ್ಟರೇಟ್ ಬೇಡ ಅಂತ ಹೇಳಿದ್ದೆ.ಸ್ವೀಕಾರ ಮಾಡೋದಾ ಬೇಡ್ವಾ ಅಂತ ಇದ್ದೆ. ಆದ್ರೂ ನನಗೆ RL ಜಾಲಪ್ಪ ಕಾಲೇಜಿನವರು ಗೌರವ ಡಾಕ್ಟರೇಟ್ ನೀಡಿದ್ದಾರೆ. RL ಜಾಲಪ್ಪ ಕಾಲೇಜಿನವರಿಗೆ ಧನ್ಯವಾದಗಳು. ಆದ್ರೆ ನನಗೆ ಸಿದ್ದರಾಮಯ್ಯ ಅಂತಾನೆ ಕರೆಯಿರಿ. ಡಾ.ಸಿದ್ದರಾಮಯ್ಯ ಅಂತಾ ಕರೆಯಬೇಡಿ ಎಂದು ನಗೆ ಚಟಾಕಿ ಹಾರಿಸಿದರು.

ಕೋಲಾರ, (ಅಕ್ಟೋಬರ್ 19): ಕೆಲ ವಿಶ್ವವಿದ್ಯಾಲಯಗಳು ಘೋಷಣೆ ಮಾಡಿದ್ದ ಡಾಕ್ಟರೇಟ್ ಅನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು (ಅಕ್ಟೋಬರ್ 19) ದೇವರಾಜ ಅರಸು ಮೆಡಿಕಲ್ ಕಾಲೇಜಿನಿಂದ ನೀಡಿದ ಗೌರವ ಡಾಕ್ಟರೇಟ್ ಅನ್ನು ಸ್ವೀಕರಿಸಿದ್ದಾರೆ. ಒಂದು ವರ್ಷದ ಹಿಂದೆಯೇ ಸಿದ್ದರಾಮಯ್ಯನವರಿಗೆ ಡಾಕ್ಟರೇಟ್ ಘೋಷಣೆ ಮಾಡಲಾಗಿತ್ತು. ಆದ್ರೆ, ಸ್ವೀಕರಿಸಲು ಸಿದ್ದರಾಮಯ್ಯ ನಿರಾಕರಿಸಿದ್ದರು. ಆದೆ, ಅನಿವಾರ್ಯವಾಗಿ ಎಲ್ಲರ ಒತ್ತಾಯದ ಮೇರೆಗೆ ಇಂದು (ಅಕ್ಟೋಬರ್ 19) ನಡೆದ R.L.ಜಾಲಪ್ಪ ಆಸ್ಪತ್ರೆ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯನವರು ದೇವರಾಜ ಅರಸು ಮೆಡಿಕಲ್ ಕಾಲೇಜಿನಿಂದ ನೀಡಿದ ಗೌರವ ಡಾಕ್ಟರೇಟ್ ಅನ್ನು ಸ್ವೀಕರಿಸಿದ್ದಾರೆ. ಆದ್ರೆ, ಡಾಕ್ಟರ್ ಸಿದ್ದರಾಮಯ್ಯ ಎಂದು ಕರೆಯಬೇಡಿ ಎಂದಿದ್ದಾರೆ.

ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ನಾನು ಡಾಕ್ಟರೇಟ್ ಬೇಡ ಅಂತ ಹೇಳಿದ್ದೆ.ಸ್ವೀಕಾರ ಮಾಡೋದಾ ಬೇಡ್ವಾ ಅಂತ ಇದ್ದೆ. ಆದ್ರೂ ನನಗೆ RL ಜಾಲಪ್ಪ ಕಾಲೇಜಿನವರು ಗೌರವ ಡಾಕ್ಟರೇಟ್ ನೀಡಿದ್ದಾರೆ. RL ಜಾಲಪ್ಪ ಕಾಲೇಜಿನವರಿಗೆ ಧನ್ಯವಾದಗಳು. ಆದ್ರೆ ನನಗೆ ಸಿದ್ದರಾಮಯ್ಯ ಅಂತಾನೆ ಕರೆಯಿರಿ. ಡಾ.ಸಿದ್ದರಾಮಯ್ಯ ಅಂತಾ ಕರೆಯಬೇಡಿ ಎಂದು ನಗೆ ಚಟಾಕಿ ಹಾರಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ರಾಚಪ್ಪಾಜಿ ನಾಯ್ಕ್

ರಾಚಪ್ಪಾಜಿ ನಾಯ್ಕ್ ಅವರು ಮೂಲತಃ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನವರು. ಕಳೆದ 2 ವರ್ಷದಿಂದ ಟಿವಿ9 ಕನ್ನಡದ ಬೆಂಗಳೂರು ಕ್ರೈಂ ಬ್ಯೂರೊ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ನಡೆದ ಪ್ರಮುಖ ಅಪಾರಧ ವಿಷಯಗಳ ಮೇಲಿನ ವರದಿ ಮಾಡಿದ ಅನುಭವವಿದೆ. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆದ ಪ್ರಮುಖ ಬೆಳವಣಿಗೆಯ ವರದಿ ಮಾಡಿದ್ದಾರೆ.

Read More