ರಾಜ್ಯವನ್ನು ಒಂದು ಸುತ್ತು ಹಾಕಿದ ಬಳಿಕ ಕಾಂಗ್ರೆಸ್​ಗೆ ಎಷ್ಟು ಸ್ಥಾನ ಸಿಗಲಿವೆ ಅಂತ ಹೇಳ್ತೀನಿ: ಡಿಕೆ ಶಿವಕುಮಾರ್

|

Updated on: Apr 12, 2024 | 3:06 PM

ಶಿರಹಟ್ಟಿ ಭಾವೈಕ್ಯ ಪೀಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿಯವರು ಧಾರವಾಡ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರವ ಬಗ್ಗೆ ಶಿವಕುಮಾರ್, ಸ್ವಾಮೀಜಿ ಬಗ್ಗೆ ತಾನೇನೂ ಕಾಮೆಂಟ್ ಮಾಡಲ್ಲ, ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿಗೆ ಬಿ ಫಾರಂ ನೀಡಲಾಗಿದೆ ಎಂದರು.

ಕಲಬುರಗಿ: ತೀಕ್ಷ್ನ ತಾಪಮಾನದಿಂದ ಕುದಿಯುತ್ತಿರುವ ಕಲಬುರಗಿಯಲ್ಲಿ ಆಯೋಜಿಸಲಾಗಿರುವ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಲು ಅಗಮಿಸಿದ ಡಿಕೆ ಶಿವಕುಮಾರ್ (DK Shivakumar) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಎಷ್ಟು ಸ್ಥಾನ ಸಿಗಲಿವೆ ಅನ್ನೋದನ್ನು ಇಡೀ ರಾಜ್ಯವನ್ನು ಒಂದು ಸುತ್ತು ಹಾಕಿದ ಬಳಿಕ ಹೇಳುತ್ತೇನೆ ಎಂದರು. ವಿಧಾನಸಭಾ ಚುನಾವಣೆಯಲ್ಲಿ (Assembly Polls) ಅವರು ಕಾಂಗ್ರೆಸ್ ಗೆ 141 ಸೀಟು ಬರುತ್ತವೆ ಎಂದಿದ್ದರು ಮತ್ತು ಅವರ ಭವಿಷ್ಯವಾಣಿ (prediction) ಆಲ್ಮೋಸ್ಟ್ ನಿಜವಾಗಿತ್ತು. ಬಿಜೆಪಿ ನಾಯಕರು ಎಲ್ಲ 28 ಸ್ಥಾನ ಗೆಲ್ಲುತ್ತೇವೆ ಅನ್ನುತ್ತಿದ್ದಾರಲ್ಲ ಸರ್ ಅಂತ ಕೇಳಿದಾಗ, ಅವರು ಲೋಕಸಭೆಯ ಎಲ್ಲ 543 ಸೀಟುಗಳನ್ನು ಗೆಲ್ಲುತ್ತೇವೆ ಅನ್ನುತ್ತಾರೆ, ಅಷ್ಟೆಲ್ಲ ವಿಶ್ವಾಸ ಇದ್ದವರು 14 ಕ್ಷೇತ್ರಗಳಲ್ಲಿ ಯಾಕೆ ಅಭ್ಯರ್ಥಿಗಳನ್ನು ಬದಲಾಯಿಸಿದ್ದಾರೆ? ಆ ಮುಖಗಳಿಗೆ ವೋಟು ಸಿಕ್ಕಲ್ಲ ಅಂತ ಪಕ್ಷದ ವರಿಷ್ಠರಿಗೆ ಚೆನ್ನಾಗಿ ಗೊತ್ತಿತ್ತು, ಹಾಗಾಗೇ ಬೇರೆಯರಿಗೆ ಟಿಕೆಟ್ ನೀಡಿದ್ದಾರೆ ಎಂದು ಶಿವಕುಮಾರ್ ಹೇಳಿದರು. ಶಿರಹಟ್ಟಿ ಭಾವೈಕ್ಯ ಪೀಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿಯವರು ಧಾರವಾಡ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರವ ಬಗ್ಗೆ ಶಿವಕುಮಾರ್, ಸ್ವಾಮೀಜಿ ಬಗ್ಗೆ ತಾನೇನೂ ಕಾಮೆಂಟ್ ಮಾಡಲ್ಲ, ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿಗೆ ಬಿ ಫಾರಂ ನೀಡಲಾಗಿದೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕಾಂಗ್ರೆಸ್​​ ಸೇರಿದ ದೀಪಕ್​ ತಿಮ್ಮಯ್ಯ: ಕೆಪಿಸಿಸಿ ಕಾರ್ಯದರ್ಶಿ, ಮಾಧ್ಯಮ ಸಲಹೆಗಾರರಾಗಿ ನೇಮಿಸಿದ ಡಿಕೆ ಶಿವಕುಮಾರ್