ಈಶ್ವರಪ್ಪ ನಾಮಪತ್ರ ಮೆರವಣಿಗೆಯಲ್ಲಿ ಮಿಂಚಿದ ಜೂನಿಯರ್ ಮೋದಿ, ಏನಂದ್ರು ಗೊತ್ತಾ?
ಬಿಜೆಪಿಗೆ ಸೆಡ್ಡು ಹೊಡೆದು ಪಕ್ಷೇತರವಾಗಿ ಕಣಕ್ಕಿಳಿದಿರುವ ಹಿರಿಯ ನಾಯಕ ಕೆಎಸ್ ಈಶ್ವರಪ್ಪ(K.S. Eshwarappa) ಅವರು ಇಂದು(ಏ.12) ಬೃಹತ್ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಿದರು. ಈ ವೇಳೆ ಮೋದಿ ರೀತಿಯಲ್ಲಿ ಕಾಣುವ ಸದಾನಂದ್ ನಾಯ್ಕ ಅವರು ಭಾಗಿಯಾಗಿ ಮಾತನಾಡಿ, ‘ಈಶ್ವರಪ್ಪ ನಾಮಪತ್ರ ಮೆರವಣಿಗೆಯಲ್ಲಿ ನಾನು ಭಾಗಿ ಆಗಿದ್ದೆ. ಇದರಿಂದ ನನಗೆ ತುಂಬಾ ಖುಷಿ ಆಯ್ತು. ಮೋದಿ ಪ್ರೀತಿ ಮಾಡುವ ಜನರು ಎಲ್ಲರೂ ಒಂದಾಗಬೇಕು. ಮೆರವಣಿಗೆಯಲ್ಲಿ ನನ್ನ ನೋಡಿದ ಜನರು ತುಂಬಾ ಸಂತಸ ಪಟ್ಟಿದ್ದಾರೆ ಎಂದರು.
ಶಿವಮೊಗ್ಗ, ಏ.12: ಈ ಬಾರಿ ಶಿವಮೊಗ್ಗ ಲೋಕಸಭಾ ಕಣ ಮತ್ತಷ್ಟು ರಂಗೇರಿದ್ದು, ಬಿಜೆಪಿಗೆ ಸೆಡ್ಡು ಹೊಡೆದು ಪಕ್ಷೇತರವಾಗಿ ಕಣಕ್ಕಿಳಿದಿರುವ ಹಿರಿಯ ನಾಯಕ ಕೆಎಸ್ ಈಶ್ವರಪ್ಪ(K.S. Eshwarappa) ಅವರು ಇಂದು(ಏ.12) ಬೃಹತ್ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಿದರು. ಈ ವೇಳೆ ಮೋದಿ ರೀತಿಯಲ್ಲಿ ಕಾಣುವ ಸದಾನಂದ್ ನಾಯ್ಕ ಅವರು ಭಾಗಿಯಾಗಿ ಮಾತನಾಡಿ, ‘ಈಶ್ವರಪ್ಪ ನಾಮಪತ್ರ ಮೆರವಣಿಗೆಯಲ್ಲಿ ನಾನು ಭಾಗಿ ಆಗಿದ್ದೆ. ಇದರಿಂದ ನನಗೆ ತುಂಬಾ ಖುಷಿ ಆಯ್ತು. ಮೋದಿ ಪ್ರೀತಿ ಮಾಡುವ ಜನರು ಎಲ್ಲರೂ ಒಂದಾಗಬೇಕು. ಮೆರವಣಿಗೆಯಲ್ಲಿ ನನ್ನ ನೋಡಿದ ಜನರು ತುಂಬಾ ಸಂತಸ ಪಟ್ಟಿದ್ದಾರೆ. ಇನ್ನು ನನ್ನ ಮುಖ ಮೋದಿ ಅವರ ರೀತಿಯಲ್ಲಿ ಕಾಣುತ್ತದೆ. ಈ ಹಿನ್ನಲೆಯಲ್ಲಿ ನನಗೆ ಕಾರ್ಯಕ್ರಮಕ್ಕೆ ಆಹ್ವಾನಿಸಿ ಬಳಿಕ ಒಂದಿಷ್ಟು ಹಣ ನೀಡುತ್ತಾರೆ. ಕೊನೆಗೆ ಹೋಗುವಾಗ ಜನರು ನೂಕು ನುಗ್ಗಲು ಮಾಡಿ ತಳ್ಳುತ್ತಾರೆ. ಇದರಿಂದ ಮನಸ್ಸಿಗೆ ಬೇಸರ ಆಗುತ್ತದೆ ಎಂದು ಸಂತಸದ ಜೊತೆಗೆ ತಮ್ಮ ನೋವುನ್ನು ಹಂಚಿಕೊಂಡರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Published on: Apr 12, 2024 02:44 PM
Latest Videos