ನೊಂದಿರುವ ದೇವೇಗೌಡರನ್ನು ಭೇಟಿಯಾಗಲು ಬಂದ ಡಾ ಮಂಜುನಾಥ್ ಮತ್ತು ಕುಮಾರಸ್ವಾಮಿ
ಅವರನ್ನು ಭೇಟಿಯಾಗಿ ಮಾತಕತೆ ನಡೆಸಿ ಗೆಲುವಾಗಿಸಲು ಅವರ ಅಳಿಯ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ ಸಿಎನ್ ಮಂಜುನಾಥ್ ಮತ್ತು ಮಗ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಪದ್ಮನಾಭನಗರದಲ್ಲಿರುವ ದೇವೇಗೌಡರ ಮನೆಗೆ ಅಗಮಿಸುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು.
ಬೆಂಗಳೂರು: ಇತ್ತೀಚಿನ ವಿದ್ಯಮಾನಗಳಿಂದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ (HD Devegowda) ಅರೋಗ್ಯ ಹದಗೆಟ್ಟಿಲ್ಲವಾದರೂ ಹಿರಿಜೀವ ತುಂಬಾ ನೊಂದುಕೊಂಡಿದೆ. ಅವರು ಮೌನಕ್ಕೆ ಶರಣಾಗಿದ್ದರು. ಹೆಚ್ ಡಿ ರೇವಣ್ಣ (HD Revanna) ಅವರನ್ನು ದೇವೇಗೌಡರ ಮನೆಯಿಂದಲೇ ಎಸ್ಐಟಿ ಅಧಿಕಾರಿಗಳು (SIT officials) ವಶಕ್ಕೆ ಪಡೆದರು ಮತ್ತು ತಲೆಮರೆಸಿಕೊಂಡಿರುವ ಮೊಮ್ಮಗ ಯಾವಾಗ ವಾಪಸ್ಸು ಬರುತ್ತ್ತಾನೆ ಅಂತ ಖಚಿತವಾದ ಮಾಹಿತಿಯಿಲ್ಲ. ಇದನ್ನೆಲ್ಲ ಅವರು ಈ ವಯಸ್ಸಿನಲ್ಲಿ ನೋಡಬೇಕಾಯಿತಲ್ಲ ಅಂತ ಕನ್ನಡಿಗರೆಲ್ಲ ಮರುಗುತ್ತಿದ್ದಾರೆ. ಅವರನ್ನು ಭೇಟಿಯಾಗಿ ಮಾತಕತೆ ನಡೆಸಿ ಗೆಲುವಾಗಿಸಲು ಅವರ ಅಳಿಯ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ ಸಿಎನ್ ಮಂಜುನಾಥ್ ಮತ್ತು ಮಗ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಪದ್ಮನಾಭನಗರದಲ್ಲಿರುವ ದೇವೇಗೌಡರ ಮನೆಗೆ ಅಗಮಿಸುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಅವರಿಗಿಂತ ಮೊದಲು ಮಂಡ್ಯ ಮತ್ತು ಮೈಸೂರು ಭಾಗದ ಮುಖಂಡರಾಗಿರುವ ಸಿಎಸ್ ಪುಟ್ಟರಾಜು, ಸುರೇಶ್ ಗೌಡ, ಹೆಚ್ ಟಿ ಮಂಜುನಾಥ್, ಅನ್ನದಾನಿ, ಶ್ರೀಕಂಠಯ್ಯ ಮೊದಲಾದವರು ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ್ದರು. ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ನಾಯಕರು ಚರ್ಚೆ ನಡೆಸಿದರೆನ್ನಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಅಧಿಕಾರದ ಅಹಂನ್ನು ಇಳಿಸುತ್ತೇನೆ: ಸಿದ್ದರಾಮಯ್ಯ ವಿರುದ್ಧ ಮತ್ತೆ ಗುಡುಗಿದ ಹೆಚ್ಡಿ ದೇವೇಗೌಡ