ಸುಧಾಕರ್ ಯಾವತ್ತೂ ಒಬ್ಬ ದಲಿತನೊಂದಿಗೆ ಕೈಕುಲುಕಿಲ್ಲ, ಅವರು ಶ್ರೀಮಂತರ ನಾಯಕ: ಪ್ರದೀಪ್ ಈಶ್ವರ್

|

Updated on: Mar 12, 2024 | 1:58 PM

ಪರೆಸಂದ್ರ ಹೆಸರಿನ ಗ್ರಾಮದಲ್ಲಿ ದಲಿತರು ಮರಣ ಹೊಂದಿದರೆ ದೇಹವನ್ನು ಹೂಳಿಡಲು ಜಾಗವಿರಲಿಲ್ಲ. ತಾನು ವಿಷಯವನ್ನು ಸಂಪುಟದ ಮುಂದಿಟ್ಟು ಒಂದೂವರೆ ಎಕರೆ ಜಮೀನನ್ನು ಪರೆಸಂದ್ರದ ದಲಿತರ ಅಂತ್ಯಕ್ರಿಯೆಗಳಿಗೆ ಮಂಜೂರು ಮಾಡಿಸಿಕೊಂಡು ಇವತ್ತು ಅದನ್ನು ಅವರಿಗೆ ಹಸ್ತಾಂತರಿಸುವ ಕೆಲಸ ಮಾಡುತ್ತಿರುವುದಾಗಿ ಈಶ್ವರ್ ಹೇಳಿದರು.

ಚಿಕ್ಕಬಳ್ಳಾಪುರ: ಸ್ಥಳೀಯ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಮತ್ತು ಇಲ್ಲಿನ ಮಾಜಿ ಶಾಸಕ ಡಾ ಕೆ ಸುಧಾಕರ್ (Dr K Sudhakar) ನಡುವೆ ವಿಧಾನಸಭಾ ಚುನಾವಣೆ (Assembly polls) ಸಮಯದಲ್ಲಿ ಶುರುವಾದ ಮಾತಿನ ಸಮರ ಲೋಕಸಭಾ ಚುನಾವಣೆಯಲ್ಲೂ ಮುಂದುವರಿದಿದೆ. ಪರಸ್ಪರ ಬೈದಾಡುವುದು, ಕೆಸರೆರಚಾಟ, ನಿಂದನೆ ಮತ್ತು ತೆಗಳಿಕೆ ಜಾರಿಯಲ್ಲಿವೆ. ನಗರದಲ್ಲಿ ಇವತ್ತು ಟಿವಿ9 ಪ್ರತಿನಿಧಿಯೊಂದಿಗೆ ಮಾತಾಡಿದ ಈಶ್ವರ್, ಸುಧಾಕರ್ ಅವರನ್ನು ಅಯೋಗ್ಯ ಕೂಡ ಅಂತ ಹೇಳಿಬಿಟ್ಟರು. ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಗಿಟ್ಟಿಸಲು ಸುಧಾಕರ್ ದಲಿತ ಮತ್ತು ಹಿಂದುಳಿದವರ ಬಗ್ಗೆ ಕಾಳಜಿ ಇರುವವರ ಹಾಗೆ ಮತಾಡುತ್ತಿದ್ದಾರೆ. ಆದರೆ, ಪರೆಸಂದ್ರ ಹೆಸರಿನ ಗ್ರಾಮದಲ್ಲಿ ದಲಿತರು ಮರಣ ಹೊಂದಿದರೆ ದೇಹವನ್ನು ಹೂಳಿಡಲು ಜಾಗವಿರಲಿಲ್ಲ. ತಾನು ವಿಷಯವನ್ನು ಸಂಪುಟದ ಮುಂದಿಟ್ಟು ಒಂದೂವರೆ ಎಕರೆ ಜಮೀನನ್ನು ಪರೆಸಂದ್ರದ ದಲಿತರ ಅಂತ್ಯಕ್ರಿಯೆಗಳಿಗೆ ಮಂಜೂರು ಮಾಡಿಸಿಕೊಂಡು ಇವತ್ತು ಅದನ್ನು ಅವರಿಗೆ ಹಸ್ತಾಂತರಿಸುವ ಕೆಲಸ ಮಾಡುತ್ತಿರುವುದಾಗಿ ಈಶ್ವರ್ ಹೇಳಿದರು. ಇದೇ ಕೆಲಸವನ್ನು ಸುಧಾಕರ್ ಯಾಕೆ ಮಾಡಲಿಲ್ಲ ಎಂದು ಅವರು ಕೇಳಿದರು. ಸುಧಾಕರ್ ಯಾವತ್ತೂ ಒಬ್ಬ ದಲಿತನ ಜೊತೆ ಕೂತು ಮಾತಾಡಿಲ್ಲ ಅವರೇನಿದ್ದರೂ ಶ್ರೀಮಂತರ ನಾಯಕ ಆದರೆ ತಾನಾದರೋ ದಲಿತರಿಗಾಗಿ ಆರಿಸಿ ಬಂದಿರೋನು ಎಂದು ಈಶ್ವರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

ಇದನ್ನೂ ಓದಿ: ಪ್ರತಾಪ್ ಸಿಂಹ ಬೈ ಬರ್ತ್ ರೈಟರ್ ಇರಬಹುದು, ನಾನು ಫೈಟರ್: ಗುಡುಗಿದ ಪ್ರದೀಪ್ ಈಶ್ವರ್