ಡಾ.ಕೆ.ಸುಧಾಕರ್ ಒಬ್ಬ ಅಯೋಗ್ಯ, ಕಾಂಗ್ರೆಸ್ ಟಿಕೆಟ್ಗಾಗಿ ಅವರಿವರ ಕಾಲಿಗೆ ಬೀಳುತ್ತಿದ್ದಾನೆ -ಪ್ರದೀಪ್ ಈಶ್ವರ್
ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಮಾಜಿ ಸಚಿವ ಡಾ.ಕೆ. ಸುಧಾಕರ್ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಡಾ.ಕೆ.ಸುಧಾಕರ್ ಒಬ್ಬ ಅಯೋಗ್ಯ, ಕಾಂಗ್ರೆಸ್ ಟಿಕೆಟ್ಗಾಗಿ ಅವರಿವರ ಕಾಲಿಗೆ ಬೀಳುತ್ತಿದ್ದಾನೆ ಎಂದು ವ್ಯಂಗ್ಯವಾಡಿದ್ದಾರೆ. ಅಲ್ಲದೆ ಸುಧಾಕರ್ ಡಬಲ್ ಗೇಮ್ ರಾಜಕಾರಣ ಬಿಟ್ಟು ರಾಜಕಾರಣ ಮಾಡಲಿ ಎಂದು ಸಲಹೆ ನೀಡಿದ್ದಾರೆ.
ಚಿಕ್ಕಬಳ್ಳಾಪುರ, ಮಾರ್ಚ್.12: ಡಾ.ಕೆ.ಸುಧಾಕರ್ (Dr K Sudhakar) ಒಬ್ಬ ಅಯೋಗ್ಯ. ಕಾಂಗ್ರೆಸ್ ಟಿಕೆಟ್ಗಾಗಿ ಅವರಿವರ ಕಾಲಿಗೆ ಬೀಳುತ್ತಿದ್ದಾನೆ ಎಂದು ಮಾಜಿ ಸಚಿವ ಸುಧಾಕರ್ ವಿರುದ್ಧ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಎಂಪಿ ಟಿಕೆಟ್ ಮಿಸ್ ಆದ್ರೆ, ಕಾಂಗ್ರೆಸ್ನಿಂದ ಬೆಂಗಳೂರು ಉತ್ತರದಲ್ಲಿ ಸ್ಪರ್ಧೆಗೆ ಸುಧಾಕರ್ ಯತ್ನ ಮಾಡ್ತಿದ್ದಾರೆ. ಬೆಂಗಳೂರು ಉತ್ತರದ ಕಾಂಗ್ರೆಸ್ ಟಿಕೆಟ್ಗಾಗಿ ಅವರಿವರ ಕಾಲಿಗೆ ಬೀಳ್ತಿದ್ದಾನೆ ಎಂದು ಶಾಸಕ ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸಿದ್ದಾರೆ.
ಟಿಕೆಟ್ಗಾಗಿ ಸುಧಾಕರ್ ಅವರಿವರ ಕಾಲಿಗೆ ಬೀಳುತ್ತಿದ್ದಾನೆ. ತಾಜ್ ವೆಸ್ಟೆಂಡ್ ಹೋಟೆಲ್ನಲ್ಲಿ ಕಾಂಗ್ರೆಸ್ ನಾಯಕರ ಕಾಲಿಗೆ ಬಿದ್ದಿದ್ದಾರೆ. ಸುಧಾಕರ್ ಡಬಲ್ ಗೇಮ್ ರಾಜಕಾರಣಿ ಎಂದು ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಕಿಡಿಕಾರಿದ್ದಾರೆ. ತಾಕತ್ತು ಇದ್ರೆ ದಮ್ಮು ಇದ್ರೆ ಚಿಕ್ಕಬಳ್ಳಾಪುರದಲ್ಲಿ ಇನ್ನೂ ಮುಂದೆ ಒಂದು ಓಟು ಹೆಚ್ಚಿಗೆ ತೆಗೆದುಕೊಳ್ಳಿ ನೋಡೋಣ. ದಲಿತರನ್ನು ಕಂಡ್ರೆ ದೂರ ಓಡುತ್ತಿದ್ರು, ಈಗ ದಲಿತರ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.
ಇದನ್ನೂ ಓದಿ: ವಿಧಾನಸಭೆ ಚುನಾವಣೆಯಲ್ಲಿ ನಾನು ಸೋಲಲು ಅನಂತಕುಮಾರ್ ಹೆಗಡೆ ಕಾರಣ: ರೂಪಾಲಿ ನಾಯ್ಕ
ಇನ್ನು ಇದೇ ವೇಳೆ ಒಂದು ಅನ್ನ, ದಾನ, ಧರ್ಮ ಮಾಡದೆ ಪ್ರದೀಪ್ ಈಶ್ವರ್ ಶಾಸಕರಾಗಿದ್ದಾರೆ ಅನ್ನೊ ಡಾ.ಕೆ.ಸುಧಾಕರ್ ಹೇಳಿಕೆಗೆ ಪ್ರದೀಪ್ರ ಈಶ್ವರ್ ತಿರುಗೇಟು ನೀಡಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಸಮಾಜ ಸೇವೆ ಶಿಕ್ಷಣ ಸೇವೆಯಲ್ಲಿ ತೊಡಗಿದ್ದೇನೆ. ಶಾಸಕರಾದ ಮೇಲೆ ಶಾಲಾ ಕಾಲೇಜು ಅಂಗನವಾಡಿಗಳಿಗೆ ಬಟ್ಟೆ ಬರೆ ಅನ್ನ ದಾನ ಧರ್ಮ ಪ್ರೋತ್ಸಾಹ ಧನ ನೀಡುತ್ತಿದ್ದೇನೆ. ಶಾಸಕರಾದ ಮೇಲೆ ಆರೋಗ್ಯ ಸೇವೆ, ಶಿಕ್ಷಣ ಸೇವೆ, ದಲಿತರು ಬಡವರ ಸೇವೆಯಲ್ಲಿ ತೊಡಗಿದ್ದೇನೆ. ಅಯೋಗ್ಯ ಡಾ.ಕೆ.ಸುಧಾಕರ್ಗೆ ದಲಿತರ ಸ್ಮಶಾನಕ್ಕೆ ಜಾಗ ಕೊಡೊ ಯೋಗ್ಯತೆ ಇಲ್ಲ. ನಾನು ಶಾಸಕನಾದ ಮೇಲೆ ಸ್ವಗ್ರಾಮದಲ್ಲಿ ದಲಿತರ ಸ್ಮಶಾನಕ್ಕೆ ಜಾಗ ಕೊಟ್ಟಿದ್ದೇನೆ ಎಂದು ವಾಗ್ದಾಳಿ ನಡೆಸಿದರು.
ಸುಧಾಕರ್ ಡಬಲ್ ಗೇಮ್ ರಾಜಕಾರಣ ಬಿಟ್ಟು ರಾಜಕಾರಣ ಮಾಡಲಿ. ಬಿಜೆಪಿಯಲ್ಲೇ ಇರಿ ಇಲ್ಲಾ ಕಾಂಗ್ರೇಸ್ನಲ್ಲೇ ಇರಿ. ಇಲ್ಲೊ ಡಬಲ್ ಗೇಮ್ ಅಲ್ಲೂ ಡಬಲ್ ಗೇಮ್ ಆಡ್ತಿದ್ದರೆ ಕೊನೆಗೆ ಕೆಪಿಸಿಸಿ ಕಚೇರಿಯಲ್ಲಿ ಜವಾನ ಕೆಲಸನೂ ಸಿಗಲ್ಲ ಎಂದು ಸುಧಾಕರ್ಗೆ ಶಾಸಕ ಪ್ರದೀಪ್ ಈಶ್ವರ್ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ