ಕೊಪ್ಪಳ ಜಿಲ್ಲೆಯಲ್ಲಿ ನಡೆದ ಉರುಸ್ನಲ್ಲೂ ರಾರಾಜಿಸಿದರು ಕನ್ನಡಿಗರ ಕಣ್ಮಣಿ ಡಾ ಪುನೀತ್ ರಾಜಕುಮಾರ್!
ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದಲ್ಲಿ ಇತ್ತೀಚಿಗೆ ನಡೆದ ಉರುಸ್ ನಲ್ಲಿ ಅಪ್ಪು ಅವರ ದೊಡ್ಡ ದೊಡ್ಡ ಚಿತ್ರಗಳು ರಾರಾಜಿಸಿದವು. ವಾಹನಗಳ ಮೇಲೆ ಪುನೀತ್ ಪೋರ್ಟ್ರೇಟ್ಗಳು, ಉರುಸ್ನಲ್ಲಿ ಹಾಕಿದ್ದ ಸ್ಟಾಲ್ಗಳಲ್ಲಿ ಅವರ ಫೊಟೋಗಳು ಮತ್ತು ಅವುಗಳ ಜೊತೆಗೆ ಒಂದು ಮೆರವಣಿಗೆ.
ಕಳೆದ ವರ್ಷ ಅಕಾಲಿಕವಾಗಿ ಕನ್ನಡಿಗರನ್ನು ಅಗಲಿದ ಪುನೀತ್ ರಾಜಕುಮಾರ್ (Puneeth Rajkumar) ಅವರಿಗೆ ಧರ್ಮಾತೀತ, ಜಾತ್ಯಾತೀತ, ರಾಜ್ಯಾತೀತ, ದೇಶಾತೀತ, ಭಾಷಾತೀತ ಅಭಿಮಾನಿಗಳು ಮಾರಾಯ್ರೇ. ಮುಸ್ಲಿಂ ಸಮುದಾಯ (Muslim Community) ಆಚರಿಸುವ ಉರುಸ್ (Urs) ಮತ್ತು ಪುನೀತ್ ನಡುವಿನ ಬಾಂಧವ್ಯ ಕುರಿತು ನಾವು ಇದಕ್ಕೆ ಮೊದಲು ಯಾವತ್ತಾದರೂ ಯೋಚಿಸಿದ್ದೇವೆಯೇ? ಅವರಿಗೆ ಅಸಂಖ್ಯಾತ ಮುಸ್ಲಿಂ ಅಭಿಮಾನಿಗಳಿದ್ದಾರೆ ಅದು ಬೇರೆ ವಿಷಯ. ಆದರೆ, ಉರುಸ್ ಅನ್ನೋದು ಮುಸಲ್ಮಾನರ ಒಂದು ಧಾರ್ಮಿಕ ಉತ್ಸವ. ಆದರೆ, ಅಪ್ಪು ಅವರ ಮುಸ್ಲಿಂ ಅಭಿಮಾನಿಗಳು ಉರುಸ್ ನಲ್ಲೂ ತಮ್ಮ ನೆಚ್ಚಿನ ನಟನಿಗೆ ಪ್ರೀತಿ ಧಾರೆ ಎರೆದಿದ್ದಾರೆ. ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದಲ್ಲಿ ಇತ್ತೀಚಿಗೆ ನಡೆದ ಉರುಸ್ ನಲ್ಲಿ ಅಪ್ಪು ಅವರ ದೊಡ್ಡ ದೊಡ್ಡ ಚಿತ್ರಗಳು ರಾರಾಜಿಸಿದವು. ವಾಹನಗಳ ಮೇಲೆ ಪುನೀತ್ ಪೋರ್ಟ್ರೇಟ್ಗಳು, ಉರುಸ್ನಲ್ಲಿ ಹಾಕಿದ್ದ ಸ್ಟಾಲ್ಗಳಲ್ಲಿ ಅವರ ಫೊಟೋಗಳು ಮತ್ತು ಅವುಗಳ ಜೊತೆಗೆ ಒಂದು ಮೆರವಣಿಗೆ. ಅಪ್ಪು ಜನಪ್ರಿಯತೆ, ಜನರಿಗೆ ಅವರ ಬಗ್ಗೆಯಿರುವ ಅಭಿಮಾನ ನಮ್ಮ ಊಹೆಗೆ ನಿಲುಕದಂಥದ್ದು ಮಾರಾಯ್ರೇ.
ಮಂಗಳವಾರದಂದು ಪುನೀತ್ ರಾಜಕುಮಾರ್ ಅವರಿಗೆ ಮೈಸೂರು ವಿಶ್ವವಿದ್ಯಾಲಯದ ವತಿಯಿಂದ ಮರಣೋತ್ತರ ಗೌರವ ಡಾಕ್ಟರೇಟ್ ನೀಡಲಾಯಿತು. ಅಶ್ವಿನಿ ಪುನೀತ್ ರಾಜಕುಮಾರ್ ಅವರು ವಿಶ್ವವಿದ್ಯಾಲಯದ 102 ನೇ ಘಟಿಕೋತ್ಸವದಲ್ಲಿ ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಂದ ಗೌರವ ಸ್ವೀಕರಿಸಿದರು.
ಪುನೀತ್ ಹೆಸರಿನ ಘೋಷಣೆಯಾಗುತ್ತಿದ್ದಂತೆ ಯೂನಿವರ್ಸಿಟಿಯ ಆಡಿಟೋರಿಯಂನಲ್ಲಿ ಕೂತಿದ್ದ ಜನರ ಹರ್ಷೋದ್ಗಾರ ಮುಗಿಲು ಮುಟ್ಟಿತು. ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಎಲ್ ಇ ಡಿ ಸ್ಕ್ರೀನ್ ಮೇಲೆ ಪುನೀತ್ ಅವರ ಬಾಲ್ಯ, ಅವರು ನಟಿಸಿದ ಸಿನಿಮಾಗಳ ಕ್ಲಿಪ್ ಗಳನ್ನು ಪ್ರದರ್ಶಿಸಲಾಯಿತು.
ಹಾಗಾಗಿ, ಕನ್ನಡಿಗರ ಕಣ್ಮಣಿ ಪುನೀತ್ ರಾಜಕುಮಾರ್ ಇನ್ನು ಬರೀ ಪುನೀತ್ ರಾಜಕುಮಾರ್ ಅಲ್ಲ, ಡಾ. ಪುನೀತ್ ರಾಜಕುಮಾರ್!!
ಇದನ್ನೂ ಓದಿ: ಪಾರ್ವತಮ್ಮ, ಪುನೀತ್ ಹೆಸರಲ್ಲಿ 2 ಬಂಗಾರದ ಪದಕ ಘೋಷಿಸಿದ ಅಶ್ವಿನಿ; ‘ದೊಡ್ಮನೆ ಯಾವತ್ತಿಗೂ ದೊಡ್ಮನೆ’ ಎಂದ ಅಭಿಮಾನಿಗಳು