ಯಾರಿಗೂ ತೊಂದರೆ ಮಾಡ್ಬೇಡ, ನಾನೇ ನಿಂಜೊತೆ ಬರ್ತೀನೀ ಅಂತ ವೀರಪ್ಪನ್​ಗೆ ಹೇಳಿದ್ರಂತೆ ರಾಜ್​ಕುಮಾರ್

Updated on: Jul 30, 2025 | 11:20 AM

ಚಾಮರಾಜನಗರವನ್ನು ರಾಜ್​ಕುಮಾರ್ ಸ್ವರ್ಗದ ಹೆಬ್ಬಾಗಿಲು ಎನ್ನುತ್ತಿದ್ದರಂತೆ, ಯಾಕೆ ಅವರಿಗೆ ಗಾಜನೂರು ಅಷ್ಟು ಇಷ್ಟವಾಗುತಿತ್ತು ಅಂತ ಕೇಳಿದರೆ, ಇದು ಅವರ ಹುಟ್ಟೂರು, ಬಾಲ್ಯವನ್ನು ಇಲ್ಲೇ ಕಳೆದಿದ್ದು, ಅವರ ಅಪ್ಪ ಅಮ್ಮ ಇದೇ ಊರಲ್ಲಿದ್ದರು , ಅವರ ತಂದೆ ನಾಟಕ ಕಲಿಸುತ್ತಿದ್ದ ಕಾರಣ ಯಾರೋ ಬಳುವಳಿಯಾಗಿ ಕೊಟ್ಟ ಜಮೀನನ್ನು ತೋಟವನ್ನಾಗಿ ಮಾಡಿಕೊಂಡಿದ್ದರು, ಅಪಹರಣ ಪ್ರಕರಣದ ಅವರು ಇಲ್ಲಿಗೆ ಬರೋದು ನಿಂತಿತು ಎಂದು ಸಂಬಂಧಿ ಹೇಳುತ್ತಾರೆ.

ಚಾಮರಾಜನಗರ, ಜುಲೈ 30: ದಿವಂಗತ ಡಾ ರಾಜ್​ಕುಮಾರ್ ಅವರನ್ನು ದಂತಚೋರ ಮತ್ತು ನರಹಂತಕ ವೀರಪ್ಪನ್ (bandit, poacher Veerappan) ಅಪಹರಿಸಿ 25 ವರ್ಷಗಳ ಕಳೆದಿವೆ. ಅಪಹರಣ ನಡೆದಾಗ ಅಣ್ಣಾವ್ರು ತಮ್ಮ ಹುಟ್ಟೂರು ಗಾಜನೂರಲ್ಲಿದ್ದರು. ಇಲ್ಲಿಂದಲೇ ವೀರಪ್ಪನ್ ಮೇರುನಟನನ್ನು ಕಾಡಿಗೆ ಕರೆದೊಯ್ದಿದ್ದ. ಸಂಬಂಧಿಕರಿಗೆ ಆ ಕರಾಳದಿನ ಈಗಲೂ ಕಣ್ಣಿಗೆ ಕಟ್ಟಿದಂತೆ ನೆನಪಿದೆ. ರಾಜ್ ಕುಮಾರ್ ಅವತ್ತು ತುಂಬಾ ಸಂತೋಷದಲ್ಲಿದ್ದರು, ಸಂಜೆಯವರೆಗೆ ತೋಟದಲ್ಲಿದ್ದು ಮನೆಗೆ ಬಂದು ಟಿವಿ ನೋಡುತ್ತಾ ಕೂತಿದ್ದ ಅಪ್ಪಾಜಿಯವರನ್ನು ವೀರಪ್ಪನ್ ಮತ್ತು ಅವನ ಸಹಚರರು ಬಂದು ಕರೆದೊಯ್ದಿದ್ದರು. ಅಮ್ಮ (ಪಾರ್ವತಮ್ಮ ರಾಜ್​ ಕುಮಾರ್) ತುಂಬಾ ಅಳ್ತಾ ಇದ್ದರು, ಅಪ್ಪಾಜಿಯವರು ವೀರಪ್ಪನ್​​ಗೆ ಯಾರಿಗೂ ತೊಂದರೆ ಮಾಡಬೇಡ, ನಾನೇ ನಿನ್ನ ಜೊತೆ ಬರುತ್ತೇನೆ ಅಂತ ಅವನ ಜೊತೆ ಕಾಡಿಗೆ ಹೋದರು ಎಂದು ಸಂಬಂಧಿಯೊಬ್ಬರು ಹೇಳುತ್ತಾರೆ.

ಇದನ್ನೂ ಓದಿ:  ವಿಷ್ಣುವರ್ಧನ್ ಸಿನಿಮಾ ನೋಡುವಾಗ ವೀರಪ್ಪನ್ ಬಂದ; ರಾಜ್​ಕುಮಾರ್ ಕಿಡ್ನ್ಯಾಪ್ ಘಟನೆ ಹೇಳಿದ ಕುಟುಂಬಸ್ಥರು

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ