ಲಾಕ್​ಡೌನ್ ನಡುವೆ Spain ಯುವತಿ ಆದಳು ಅಪ್ಪಟ ಕನ್ನಡತಿ !

[lazy-load-videos-and-sticky-control id=”OcCyeuVsXBk”] ಉಡುಪಿ: ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ. ಭಾರತದ ಸಂಸ್ಕೃತಿಗೆ ಮಾರು ಹೋಗದವರಿಲ್ಲ. ಲಕ್ಷಾಂತರ ಮಂದಿ ವಿದೇಶಿಗರು ಇಲ್ಲಿನ ಸಂಸ್ಕೃತಿ ತಿಳಿದುಕೊಳ್ಳಲು ಭಾರತಕ್ಕೆ ಬರುತ್ತಾರೆ. ಅದೇ ರೀತಿ, ಸ್ಪೇನ್​ನ ಯುವತಿಯೊಬ್ಬಳು ಪ್ರವಾಸಕ್ಕೆಂದು ಬಂದು ಉಡುಪಿಯ ಹೆರಂಜಾಲಿನ ಮನೆ ಮಗಳಾಗಿಬಿಟ್ಟಿದ್ದಾಳೆ. ಜಿಲ್ಲೆಯ ಬೈಂದೂರಿನಲ್ಲಿ ಇಂತಹ ಅಪರೂಪದ ಘಟನೆ ನಡೆದಿದೆ. ಹೌದು, ಸ್ಪೇನ್​ ಮೂಲದ ಯುವತಿ ಥೆರೆಸಾ ಪ್ರವಾಸಕ್ಕೆಂದು ಭಾರತಕ್ಕೆ ಬಂದಿದ್ರು. ಆದರೆ ದೇಶ ಲಾಕ್​ಡೌನ್​ ಆದ ನಂತರ ಕುಂದಾಪುರದ ಹೆರಂಜಾಲಿನಲ್ಲಿ ಲಾಕ್ ಆಗಿಬಿಟ್ಟಿದ್ದಾರೆ. ಈ ನಡುವೆ ಇವರು […]

ಲಾಕ್​ಡೌನ್ ನಡುವೆ Spain ಯುವತಿ ಆದಳು ಅಪ್ಪಟ ಕನ್ನಡತಿ !
ಆಯೇಷಾ ಬಾನು Edited By: ಸಾಧು ಶ್ರೀನಾಥ್​

Updated on: Aug 02, 2020 | 2:51 PM

[lazy-load-videos-and-sticky-control id=”OcCyeuVsXBk”]

ಉಡುಪಿ: ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ. ಭಾರತದ ಸಂಸ್ಕೃತಿಗೆ ಮಾರು ಹೋಗದವರಿಲ್ಲ. ಲಕ್ಷಾಂತರ ಮಂದಿ ವಿದೇಶಿಗರು ಇಲ್ಲಿನ ಸಂಸ್ಕೃತಿ ತಿಳಿದುಕೊಳ್ಳಲು ಭಾರತಕ್ಕೆ ಬರುತ್ತಾರೆ. ಅದೇ ರೀತಿ, ಸ್ಪೇನ್​ನ ಯುವತಿಯೊಬ್ಬಳು ಪ್ರವಾಸಕ್ಕೆಂದು ಬಂದು ಉಡುಪಿಯ ಹೆರಂಜಾಲಿನ ಮನೆ ಮಗಳಾಗಿಬಿಟ್ಟಿದ್ದಾಳೆ. ಜಿಲ್ಲೆಯ ಬೈಂದೂರಿನಲ್ಲಿ ಇಂತಹ ಅಪರೂಪದ ಘಟನೆ ನಡೆದಿದೆ.

ಹೌದು, ಸ್ಪೇನ್​ ಮೂಲದ ಯುವತಿ ಥೆರೆಸಾ ಪ್ರವಾಸಕ್ಕೆಂದು ಭಾರತಕ್ಕೆ ಬಂದಿದ್ರು. ಆದರೆ ದೇಶ ಲಾಕ್​ಡೌನ್​ ಆದ ನಂತರ ಕುಂದಾಪುರದ ಹೆರಂಜಾಲಿನಲ್ಲಿ ಲಾಕ್ ಆಗಿಬಿಟ್ಟಿದ್ದಾರೆ. ಈ ನಡುವೆ ಇವರು ನಮ್ಮ ಭಾಷೆ, ಉಡುಗೆ-ತೊಡುಗೆ, ಆಚರಣೆಗಳಿಗೆ ಮಾರು ಹೋಗಿದ್ದಾರೆ. ಹೀಗಾಗಿ, ಥೆರೆಸಾ ಸಹ ನಮ್ಮಲೊಬ್ಬರಾಗಿ ಕನ್ನಡ ಕಲಿತು ಇಲ್ಲಿನ ಉಡುಗೆ-ತೊಡುಗೆಗಳನ್ನು ಹಾಕಿಕೊಂಡು ಅಪ್ಪಟ ಕರಾವಳಿ ಕನ್ನಡತಿಯಂತೆ ಕಾಣಿಸುತ್ತಾರೆ.

ಸ್ನೇಹಿತರಾದ ಕೃಷ್ಣ ಪೂಜಾರಿ ಎಂಬವವರ ಮನೆಯಲ್ಲಿ ಆಶ್ರಯ ಪಡೆದಿರುವ ಈಕೆ, ಅಪ್ಪಟ ಕನ್ನಡತಿ ಆಗಿಬಿಟ್ಟಿದ್ದಾಳೆ. ಅದರಲ್ಲೂ ಈಕೆಯ ದನಿಯಲ್ಲಿ ಕುಂದಾಪುರ ಕನ್ನಡವನ್ನ ಕೇಳಿಸಿಕೊಂಡರೇ ಖಂಡಿತ ವಾಹ್​ ಅಂತಾ ಹೇಳ್ತೀರಾ. ಒಟ್ನಲ್ಲಿ, ಇಲ್ಲಿನ ಸಂಸ್ಕೃತಿಗೆ ಮಾರು ಹೋಗಿ ಇಲ್ಲಿಯವಳೇ ಆಗಿಬಿಟ್ಟಿದ್ದಾಳೆ.

Published On - 11:43 am, Sun, 2 August 20

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us