BZ Zameer Ahmed: ನಗರಾಭಿವೃದ್ಧಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರ ನಡುವೆ ವಸತಿ ಖಾತೆ ಸಚಿವ!

BZ Zameer Ahmed: ನಗರಾಭಿವೃದ್ಧಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರ ನಡುವೆ ವಸತಿ ಖಾತೆ ಸಚಿವ!

ಅರುಣ್​ ಕುಮಾರ್​ ಬೆಳ್ಳಿ
|

Updated on: May 31, 2023 | 3:46 PM

ಶುಕ್ರವಾರವೇ ಸಭೆ ನಡೆಯಲಿ, ಒಟ್ಟಿನಲ್ಲಿ ಆದಷ್ಟು ಬೇಗ ಗ್ಯಾರಂಟಿ ಜಾರಿಯಾದರೆ ಸಾಕು ಅಂತ ಜನ ಕಾಯ್ತಾ ಇದ್ದಾರೆ.

ಬೆಂಗಳೂರು: ಒಂದು ಹಳೆಯ ಜೋಕ್ ಇದೆ. ಸಭೆಯೊಂದು ಮುಗಿದ ಬಳಿಕ ಹೊರಬಂದ ಒಬ್ಬ ಸಚಿವನಿಗೆ ಮಾಧ್ಯಮದವರು, ಸಭೆಯಲ್ಲಿ ಏನೆಲ್ಲ ತೀರ್ಮಾನಗಳನ್ನು ತೆಗೆದುಕೊಳ್ಳಲಾಯಿತು ಸರ್ ಅಂತ ಕೇಳಿದಾಗ, ಮುಂದಿನ ಸಭೆ ಯಾವ ದಿನಾಂಕ ನಡೆಸಬೇಕು ಅನ್ನೋ ತೀರ್ಮಾನ ತೆಗೆದುಕೊಳ್ಳಲಾಯಿತು ಅಂದನಂತೆ! ಕಾಂಗ್ರೆಸ್ ಸರ್ಕಾರ ಇಂದು ಸಂಪುಟ ಸಬೆ ನಡೆಸಬೇಕಿತ್ತು, ಸಭೆ ನಡೆದಿದ್ದು ನಿಜ, ಆದರೆ ಅಸಲೀ ಸಭೆ ಶುಕ್ರವಾರ ನಡೆಯಲಿದೆಯಂತೆ! ಸರಿಬಿಡಿ, ಶುಕ್ರವಾರವೇ ನಡೆಯಲಿ, ಒಟ್ಟಿನಲ್ಲಿ ಆದಷ್ಟು ಬೇಗ ಗ್ಯಾರಂಟಿ ಜಾರಿಯಾದರೆ ಸಾಕು ಅಂತ ಜನ ಕಾಯ್ತಾ ಇದ್ದಾರೆ. ವಸತಿ ಖಾತೆ ಸಚಿವ ಬಿಜೆಡ್ ಜಮೀರ್ ಅಹ್ಮದ್ (BZ Zameer Ahmed) ಅವರ ಹಾಸ್ಯಪ್ರಜ್ಞೆ ಚೆನ್ನಾಗಿದೆ. ಇಂದಿನ ಸಭೆಯಲ್ಲಿ ಅವರು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ (Byrathi Suresh) ನಡುವೆ ಕೂತಿದ್ದರು. ಪ್ರಿಯಾಂಕ್ ಏನೋ ಕೇಳಿದಾಗ ಜಮೀರ್ ನಗರಾಭಿವೃದ್ಧಿ ಮತ್ತು ಗ್ರಾಮೀಣಾಭಿವೃದ್ಧಿ ನಡುವೆ ನಾನು ಕೂತಿದ್ದೇನೆ ಅನ್ನುತ್ತಾರೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ