ಕೊಡಗು ಭೂಕಂಪನದ ದೃಶ್ಯ ಸಿಸಿಟಿವಿಯಲ್ಲಿ ಸೆರೆ; ವಿಡಿಯೋ ಇಲ್ಲಿದೆ

| Updated By: sandhya thejappa

Updated on: Jul 02, 2022 | 9:44 AM

ಜೂನ್ 28ರಂದು ಬೆಳಗ್ಗೆ 7.45ರ ಸುಮಾರಿಗೆ ಮಡಿಕೇರಿ ತಾಲೂಕಿನ ಕರಿಕೆ, ಪೆರಾಜೆ ಭಾಗಮಂಡಲ ಹಾಗೂ ಸಂಪಾಜೆ ಕರ್ಣಂಗೇರಿ ಸೇರಿ ಹಲವೆಡೆ ಭೂಕಂಪನ ಅನುಭವವಾಗಿದೆ.

ಕೊಡಗು (Kodagu) ಜಿಲ್ಲೆಯಲ್ಲಿ ನಿರಂತರವಾಗಿ ಭೂಕಂಪನ (Earthquake) ಆಗುತ್ತಿದ್ದು, ಜನರಿಗೆ ಆತಂಕ ಹೆಚ್ಚಾಗುತ್ತಿದೆ. 2018ರಲ್ಲಿ ಜಿಲ್ಲೆಯಲ್ಲಿ ಇದೇ ರೀತಿ ಭೂಕಂಪನ ಆಗಿತ್ತು. ಅದೇ ವರ್ಷ ಪ್ರಾಕೃತಿಕ ವಿಕೋಪ ಸಂಭವಿಸಿತ್ತು. ಈ ಬಾರಿಯೂ ಪ್ರಾಕೃತಿಕ ವಿಕೋಪ ಸಂಭವಿಸುವ ಬಗ್ಗೆ ಜನರಿಗೆ ಭಯ ಶುರುವಾಗಿದೆ. ಜೂನ್ 28ರಂದು ಬೆಳಗ್ಗೆ 7.45ರ ಸುಮಾರಿಗೆ ಮಡಿಕೇರಿ ತಾಲೂಕಿನ ಕರಿಕೆ, ಪೆರಾಜೆ ಭಾಗಮಂಡಲ ಹಾಗೂ ಸಂಪಾಜೆ ಕರ್ಣಂಗೇರಿ ಸೇರಿ ಹಲವೆಡೆ ಭೂಕಂಪನ ಅನುಭವವಾಗಿದೆ. ಇದಕ್ಕೂ ಮೊದಲು ಅಂದರೆ ವಾರದ ಹಿಂದೆ ಜಿಲ್ಲೆಯಲ್ಲಿ ಆಗಿದ್ದ ಭೂಕಂಪನ ದೃಢವಾಗಿದೆ. ಈ ಬಗ್ಗೆ ರಾಜ್ಯ ವಿಪತ್ತು ನಿರ್ವಹಣಾ ಕೋಶ ದೃಢಪಡಿಸಿದ್ದು, ರಿಕ್ಟರ್ ಮಾಪಕದಲ್ಲಿ 2.7ರಷ್ಟು ತೀವ್ರತೆ ದಾಖಲಾಗಿದೆ. ಭೂಕಂಪನದಿಂದಾಗಿ ಕೊಡಗು-ದಕ್ಷಿಣ ಕನ್ನಡ ಜಿಲ್ಲೆ ಗಡಿಭಾಗವಾದ ಸಂಪಾಜೆಯಲ್ಲಿ ಮನೆ ಗೋಡೆಗಳು ಬಿರುಕು ಬಿಟ್ಟಿದ್ದವು.

ಸದ್ಯ ಕೊಡಗು ಭೂಕಂಪನದ ಮತ್ತೊಂದು ಸಿಸಿಟಿವಿ ದೃಶ್ಯ ಲಭ್ಯವಾಗಿದೆ. ಜೂನ್ 28 ರ ಬೆಳಗ್ಗೆ 7.45 ಕ್ಕೆ ಭೂಮಿ ಕಂಪಿಸಿತ್ತು. ಕಂಪನದ ತೀವ್ರತೆಗೆ ಮನೆಯ ಕಂಬಗಳು ಅಲುಗಾಡಿವೆ. ಕಂಬ ಅಲುಗಾಡಿದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಪ್ರತಿಭಟನೆ ಮುಂದುವರೆಸಿದ ಪೌರಕಾರ್ಮಿಕರು! ಸಿಎಂ ಬೊಮ್ಮಾಯಿ ಹೇಳಿದ್ದೇನು?

Published on: Jul 02, 2022 09:43 AM