ಕೊಡಗು-ದಕ್ಷಿಣ ಕನ್ನಡ ಜಿಲ್ಲೆ ಗಡಿಭಾಗದಲ್ಲಿ ತಡರಾತ್ರಿ 1.12ರ ಸುಮಾರಿಗೆ ಲಘು ಭೂಕಂಪನ
ಸುಳ್ಯ ಪೇಟೆಯಲ್ಲಿ ಭೂಕಂಪನ ಅನುಭವ ಆಗಿದ್ದು, ಜನರು ಭಯದಲ್ಲಿ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಸುಮಾರು 4-5 ಸೆಕೆಂಡ್ಗಳ ಕಾಲ ಕಂಪನ ಆಗಿದೆ. ಕಳೆದ ಬಾರಿಗಿಂತ ಹೆಚ್ಚಿನ ತೀವ್ರತೆಯಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.
ಮಡಿಕೇರಿ: ಕೊಡಗು-ದಕ್ಷಿಣ ಕನ್ನಡ ಜಿಲ್ಲೆ ಗಡಿಭಾಗದಲ್ಲಿ ತಡರಾತ್ರಿ 1.12ರ ಸುಮಾರಿಗೆ ಲಘು ಭೂಕಂಪನ (Earthquake) ವಾಗಿದೆ. ಕೊಡಗು ಜಿಲ್ಲೆ ಚೆಂಬು, ಪೆರಾಜೆ, ಕರಿಕೆ, ಸಂಪಾಜೆ. ಅದೇ ರೀತಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಹಾಗೂ ಸಂಪಾಜೆ ಗ್ರಾಮ, ಕಲ್ಲುಗುಂಡಿ ವ್ಯಾಪ್ತಿಯಲ್ಲೂ ಭೂಮಿ ಕಂಪಿಸಿರುವ ಅನುಭವ ಉಂಟಾಗಿದೆ. ಕಳೆದ ಒಂದು ವಾರದಲ್ಲಿ ಐದು ಭಾರಿ ಭೂಮಿ ಕಂಪಿಸಿದೆ. ಕಳೆದ ಮೂರು ದಿನಗಳ ಹಿಂದೆಯೂ ಜಿಲ್ಲೆಯಲ್ಲಿ ಭೂಮಿ ಕಂಪಿಸಿತ್ತು. ಇದಕ್ಕೂ ಮೊದಲು 2018ರಲ್ಲಿ ಇದೇ ರೀತಿ ಕಂಪಿಸಿತ್ತು. ಅದೇ ವರ್ಷ ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿತ್ತು.
ಇದನ್ನೂ ಓದಿ: ದೆಹಲಿಯಲ್ಲಿ ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿಚಾರಣೆ, ಜಾಮೀನು ಪರಿಶೀಲನೆ
ಸುಳ್ಯ ಪೇಟೆಯಲ್ಲಿ ಭೂಕಂಪನ ಅನುಭವ ಆಗಿದ್ದು, ಜನರು ಭಯದಲ್ಲಿ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಸುಮಾರು 4-5 ಸೆಕೆಂಡ್ಗಳ ಕಾಲ ಕಂಪನ ಆಗಿದೆ. ಕಳೆದ ಬಾರಿಗಿಂತ ಹೆಚ್ಚಿನ ತೀವ್ರತೆಯಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಮೂರು ದಿನಗಳ ಹಿಂದೆ ಜಿಲ್ಲೆಯಲ್ಲಿ ಭೂಕಂಪನ ದೃಢವಾಗಿದ್ದು, ಈ ಬಗ್ಗೆ ರಾಜ್ಯ ವಿಪತ್ತು ನಿರ್ವಹಣಾ ಕೋಶ ದೃಢಪಡಿಸಿದೆ. ರಿಕ್ಟರ್ ಮಾಪಕದಲ್ಲಿ 2.7ರಷ್ಟು ತೀವ್ರತೆ ದಾಖಲಾಗಿದೆ. ಭೂಕಂಪನದಿಂದಾಗಿ ಕೊಡಗು-ದಕ್ಷಿಣ ಕನ್ನಡ ಜಿಲ್ಲೆ ಗಡಿಭಾಗವಾದ ಸಂಪಾಜೆಯಲ್ಲಿ ಮನೆ ಗೋಡೆಗಳು ಬಿರುಕು ಬಿಟ್ಟಿದ್ದವು.
ಮಂಡ್ಯದಲ್ಲೂ ಭೂಕಂಪನ
ಜೂನ್ 23ಕ್ಕೆ ಮಂಡ್ಯ ಜಿಲ್ಲೆಯ ಕೆಲವೆಡೆಯೂ ಜನರಿಗೆ ಮುಂಜಾನೆ 4.40ರ ಸುಮಾರಿಗೆ ಲಘು ಭೂಕಂಪನದ ಅನುಭವವಾಗಿತ್ತು. ಕೆ.ಆರ್.ಪೇಟೆ ತಾಲೂಕಿನ ಐಕನಹಳ್ಳಿ, ಚಿನ್ನೇನಹಳ್ಳಿ, ಮಾದಾಪುರ, ಗೊಂದಿಹಳ್ಳಿ, ಬಿದರಹಳ್ಳಿ, ಗೊಡೇಹೊಸಹಳ್ಳಿಯ ಗ್ರಾಮಗಳ ಜನರು ಭೂಕಂಪದಿಂದ ಆತಂಕಗೊಂಡಿದ್ದರು. ಹಾಸನ ಜಿಲ್ಲೆಯ, ಅರಕಲಗೂಡು, ಹೊಳೆನರಸೀಪುರ ತಾಲೂಕಿನ ಹಲವು ಗ್ರಾಮಗಳಲ್ಲಿ ನಸುಕಿನ 4.30ರಿಂದ 5 ಗಂಟೆಯ ಅವಧಿಯಲ್ಲಿ ಭೂಮಿಯು ಕಂಪಿಸಿತ್ತು.
ಇದನ್ನೂ ಓದಿ: IIP Index: ಮೇ ತಿಂಗಳಲ್ಲಿ ಪ್ರಮುಖ ವಲಯಗಳ ಉತ್ಪಾದನೆ ಶೇ 18.1ರಷ್ಟು ವಿಸ್ತರಣೆ