Sign In

By signing in or creating an account, you agree with Associated Broadcasting Company's Terms & Conditions and Privacy Policy.

IIP Index: ಮೇ ತಿಂಗಳಲ್ಲಿ ಪ್ರಮುಖ ವಲಯಗಳ ಉತ್ಪಾದನೆ ಶೇ 18.1ರಷ್ಟು ವಿಸ್ತರಣೆ

ಭಾರತದ ಪ್ರಮುಖ ಕೈಗಾರಿಕೆ ವಲಯಗಳು 2022ರ ಮೇ ತಿಂಗಳಲ್ಲಿ ಶೇ 18.1ರಷ್ಟು ವಿಸ್ತರಣೆ ಆಗಿದೆ. ಆ ಬಗ್ಗೆ ವಿವರ ಈ ಲೇಖನದಲ್ಲಿದೆ.

IIP Index: ಮೇ ತಿಂಗಳಲ್ಲಿ ಪ್ರಮುಖ ವಲಯಗಳ ಉತ್ಪಾದನೆ ಶೇ 18.1ರಷ್ಟು ವಿಸ್ತರಣೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jul 01, 2022 | 7:18 AM

ಭಾರತದ (India) ಪ್ರಮುಖ ವಲಯದ ಉತ್ಪಾದನೆಯು 2021ರ ಮೇ ತಿಂಗಳಲ್ಲಿ ಇದ್ದ ಶೇ 16.4ರಿಂದ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗಿ, ಈ ಮೇ ತಿಂಗಳಲ್ಲಿ ಶೇ 18.1ಕ್ಕೆ ಏರಿದೆ ಎಂದು ಗುರುವಾರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಂಕಿ- ಅಂಶಗಳು ಬಹಿರಂಗಪಡಿಸಿದೆ. ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ಸಿಮೆಂಟ್, ಕಲ್ಲಿದ್ದಲು, ರಸಗೊಬ್ಬರಗಳು ಮತ್ತು ವಿದ್ಯುತ್ ಕೈಗಾರಿಕೆಗಳಲ್ಲಿ ಉತ್ಪಾದನೆಯನ್ನು ಹೆಚ್ಚಿಸಿರುವುದು ಈ ಬೆಳವಣಿಗೆಗೆ ಕಾರಣವಾಗಿದೆ. ಸಿಮೆಂಟ್ ಉದ್ಯಮವು ಕಳೆದ ತಿಂಗಳು ಶೇ 8ಕ್ಕೆ ಹೋಲಿಸಿದರೆ ಈ ವರ್ಷದ ಮೇ ತಿಂಗಳಲ್ಲಿ ಶೇ 26.3ರಷ್ಟು ಅತ್ಯಧಿಕ ಬೆಳವಣಿಗೆಯನ್ನು ದಾಖಲಿಸಿದೆ.

ಮತ್ತೊಂದು ಪ್ರಮುಖ ಚಾಲಕ ಅಂದರೆ ಕಲ್ಲಿದ್ದಲು ವಲಯವು ಶೇ 25.1ರಷ್ಟು ತೀಕ್ಷ್ಣವಾದ ಇಳಿಜಾರಿಗೆ ಸಾಕ್ಷಿಯಾಗಿದೆ. ರಸಗೊಬ್ಬರ, ವಿದ್ಯುತ್ ಮತ್ತು ನೈಸರ್ಗಿಕ ಅನಿಲ ಸೇರಿದಂತೆ ಇತರ ವಲಯಗಳು ಕ್ರಮವಾಗಿ ಶೇಕಡಾ 22.8, ಶೇ 22 ಮತ್ತು ಶೇ 7ರಷ್ಟು ಬೆಳೆದವು.

ಡೇಟಾ ಪ್ರಕಾರ, ಕಚ್ಚಾ ತೈಲ ವಲಯವು ಕಳೆದ ತಿಂಗಳು ಶೇ 0.9ರಷ್ಟು ಸಂಕೋಚನದ ವಿರುದ್ಧ ಶೇ 4.6ರಷ್ಟು ಬೆಳವಣಿಗೆಯನ್ನು ಕಂಡಿದೆ. ಅದೇ ರೀತಿ ಮೇ ತಿಂಗಳಲ್ಲಿ ಉಕ್ಕು ಉದ್ಯಮ ಶೇ 15ರಷ್ಟು ಬೆಳವಣಿಗೆ ಕಂಡಿದೆ. ಪೆಟ್ರೋಲಿಯಂ ರಿಫೈನರಿ ಉತ್ಪನ್ನಗಳ ಉತ್ಪಾದನೆಯು ಕಳೆದ ತಿಂಗಳು ಶೇ 9.2ಕ್ಕೆ ಹೋಲಿಸಿದರೆ ಶೇ 16.7ರಷ್ಟು ಹೆಚ್ಚಾಗಿದೆ.

ಪ್ರಮುಖ ವಲಯವು ಕೈಗಾರಿಕಾ ಉತ್ಪಾದನೆಯ ಸೂಚ್ಯಂಕದ (IIP) ಶೇ 40.27ರಷ್ಟಿದೆ, ಇದು ಕೈಗಾರಿಕಾ ಚಟುವಟಿಕೆಯ ಪ್ರಮುಖ ಸೂಚಕವಾಗಿದೆ.

ಇದನ್ನೂ ಓದಿ: Indian Economy: ಭಾರತದ ಆರ್ಥಿಕತೆ ಚೇತರಿಕೆಗೆ ಕಚ್ಚಾ ತೈಲ ಬೆಲೆ ಏರಿಕೆಯ ಆತಂಕ ಇದೆಯೆಂದ ಅನಂತ ನಾಗೇಶ್ವರನ್