AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಡಗಿನಲ್ಲಿ ಹಲವೆಡೆ ಮತ್ತೆ ಭೂಕಂಪನ ಅನುಭವ! ಪ್ರಕೃತಿ ವಿಕೋಪ ಆತಂಕದಲ್ಲಿ ಜನರು

ಕಳೆದ ಮೂರು ದಿನಗಳ ಹಿಂದೆಯೂ ಜಿಲ್ಲೆಯಲ್ಲಿ ಭೂಮಿ ಕಂಪಿಸಿತ್ತು. ಇದಕ್ಕೂ ಮೊದಲು 2018ರಲ್ಲಿ ಇದೇ ರೀತಿ ಕಂಪಿಸಿತ್ತು. ಅದೇ ವರ್ಷ ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿತ್ತು.

ಕೊಡಗಿನಲ್ಲಿ ಹಲವೆಡೆ ಮತ್ತೆ ಭೂಕಂಪನ ಅನುಭವ! ಪ್ರಕೃತಿ ವಿಕೋಪ ಆತಂಕದಲ್ಲಿ ಜನರು
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Jun 28, 2022 | 9:46 AM

Share

ಕೊಡಗು: ಜಿಲ್ಲೆಯ ಹಲವೆಡೆ ಇಂದು (ಜೂನ್ 28) ಮತ್ತೆ ಭೂಕಂಪನದ (Earthquake) ಅನುಭವವಾಗಿದ್ದು, ಜನರಿಗೆ ಆತಂಕ ಹೆಚ್ಚಾಗಿದೆ. ಬೆಳಗ್ಗೆ 7.45ರ ಸುಮಾರಿಗೆ ಮಡಿಕೇರಿ (Madikeri) ತಾಲೂಕಿನ ಕರಿಕೆ, ಪೆರಾಜೆ ಭಾಗಮಂಡಲ ಹಾಗೂ ಸಂಪಾಜೆ ಕರ್ಣಂಗೇರಿ ಸೇರಿ ಹಲವೆಡೆ ಭೂಕಂಪನ ಅನುಭವಾಗಿದೆ. ಇನ್ನು ಮಡಿಕೇರಿ ನಗರದಲ್ಲೂ ಲಘು ಭೂಕಂಪನ ಆಗಿದೆ ಎಂದು ತಿಳಿದುಬಂದಿದೆ. ಕಳೆದ ಮೂರು ದಿನಗಳ ಹಿಂದೆಯೂ ಜಿಲ್ಲೆಯಲ್ಲಿ ಭೂಮಿ ಕಂಪಿಸಿತ್ತು. ಇದಕ್ಕೂ ಮೊದಲು 2018ರಲ್ಲಿ ಇದೇ ರೀತಿ ಕಂಪಿಸಿತ್ತು. ಅದೇ ವರ್ಷ ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿತ್ತು.

ಸುಳ್ಯ ಪೇಟೆಯಲ್ಲೂ ಇಂದು ಭೂಕಂಪನ ಅನುಭವ ಆಗಿದ್ದು, ಜನರು ಭಯದಲ್ಲಿ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಸುಮಾರು 4-5 ಸೆಕೆಂಡ್​ಗಳ ಕಾಲ ಕಂಪನ ಆಗಿದೆ. ಕಳೆದ ಬಾರಿಗಿಂತ ಹೆಚ್ಚಿನ ತೀವ್ರತೆಯಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.

ಮೂರು ದಿನಗಳ ಹಿಂದೆ ಜಿಲ್ಲೆಯಲ್ಲಿ ಆಗಿದ್ದ ಭೂಕಂಪನ ದೃಢವಾಗಿದೆ. ಈ ಬಗ್ಗೆ ರಾಜ್ಯ ವಿಪತ್ತು ನಿರ್ವಹಣಾ ಕೋಶ ದೃಢಪಡಿಸಿದ್ದು, ರಿಕ್ಟರ್ ಮಾಪಕದಲ್ಲಿ 2.7ರಷ್ಟು ತೀವ್ರತೆ ದಾಖಲಾಗಿದೆ. ಭೂಕಂಪನದಿಂದಾಗಿ ಕೊಡಗು-ದಕ್ಷಿಣ ಕನ್ನಡ ಜಿಲ್ಲೆ ಗಡಿಭಾಗವಾದ ಸಂಪಾಜೆಯಲ್ಲಿ ಮನೆ ಗೋಡೆಗಳು ಬಿರುಕು ಬಿಟ್ಟಿದ್ದವು.

ಇದನ್ನೂ ಓದಿ
Image
ಆರತಕ್ಷತೆಗೆ ಸಿದ್ದತೆಯಲ್ಲಿದ್ದ ಯುವತಿಯನ್ನು ಕಿಡ್ನಾಪ್ ಮಾಡಿದ ಕಾರ್ಪೋರೆಟರ್? ನ್ಯಾಯಕ್ಕಾಗಿ ಅಂಗಲಾಚುತ್ತಿರುವ ಯುವತಿ
Image
ಟೆಕ್ಸಾಸ್​​​ನಲ್ಲಿ ಭೀಕರ ಅಪಘಾತ; ಟ್ರಕ್​ನೊಳಗಿದ್ದ 46 ಪ್ರಯಾಣಿಕರು ಸಾವು, 10ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರ
Image
ಮೂವತ್ತು ಸಾವಿರ ವರ್ಷಗಳ ಹಿಂದೆ ಹಿಮಯುಗದಲ್ಲಿ ವಾಸವಾಗಿತ್ತೆನ್ನಲಾದ ವೂಲಿ ಮೊಮ್ಮತ್ ಪ್ರಾಣಿಯ ಸಂರಕ್ಷಿತ ದೇಹ ಕೆನಡಾದಲ್ಲಿ ಸಿಕ್ಕಿದೆ
Image
IND vs IRE: ಒಂದು ಬದಲಾವಣೆ: ದ್ವಿತೀಯ ಟಿ20ಗೆ ಮತ್ತೊಂದು ಮಾಸ್ಟರ್ ಪ್ಲಾನ್ ಮಾಡಿದ ಟೀಮ್ ಇಂಡಿಯಾ

ಇದನ್ನೂ ಓದಿ: ಆರತಕ್ಷತೆಗೆ ಸಿದ್ದತೆಯಲ್ಲಿದ್ದ ಯುವತಿಯನ್ನು ಕಿಡ್ನಾಪ್ ಮಾಡಿದ ಕಾರ್ಪೋರೆಟರ್? ನ್ಯಾಯಕ್ಕಾಗಿ ಅಂಗಲಾಚುತ್ತಿರುವ ಯುವತಿ

ಇನ್ನು ಜೂನ್ 23ಕ್ಕೆ ಮಂಡ್ಯ ಜಿಲ್ಲೆಯ ಕೆಲವೆಡೆಯೂ ಜನರಿಗೆ ಮುಂಜಾನೆ 4.40ರ ಸುಮಾರಿಗೆ ಲಘು ಭೂಕಂಪನದ ಅನುಭವವಾಗಿತ್ತು. ಕೆ.ಆರ್.ಪೇಟೆ ತಾಲೂಕಿನ ಐಕನಹಳ್ಳಿ, ಚಿನ್ನೇನಹಳ್ಳಿ, ಮಾದಾಪುರ, ಗೊಂದಿಹಳ್ಳಿ, ಬಿದರಹಳ್ಳಿ, ಗೊಡೇಹೊಸಹಳ್ಳಿಯ ಗ್ರಾಮಗಳ ಜನರು ಭೂಕಂಪದಿಂದ ಆತಂಕಗೊಂಡಿದ್ದರು. ಹಾಸನ ಜಿಲ್ಲೆಯ, ಅರಕಲಗೂಡು, ಹೊಳೆನರಸೀಪುರ ತಾಲೂಕಿನ ಹಲವು ಗ್ರಾಮಗಳಲ್ಲಿ ನಸುಕಿನ 4.30ರಿಂದ 5 ಗಂಟೆಯ ಅವಧಿಯಲ್ಲಿ ಭೂಮಿಯು ಕಂಪಿಸಿತ್ತು.

ಇದನ್ನೂ ಓದಿ: ಆರತಕ್ಷತೆಗೆ ಸಿದ್ದತೆಯಲ್ಲಿದ್ದ ಯುವತಿಯನ್ನು ಕಿಡ್ನಾಪ್ ಮಾಡಿದ ಕಾರ್ಪೋರೆಟರ್? ನ್ಯಾಯಕ್ಕಾಗಿ ಅಂಗಲಾಚುತ್ತಿರುವ ಯುವತಿ

Published On - 8:24 am, Tue, 28 June 22