ಟೆಕ್ಸಾಸ್ನಲ್ಲಿ ಭೀಕರ ಅಪಘಾತ; ಟ್ರಕ್ನೊಳಗಿದ್ದ 46 ಪ್ರಯಾಣಿಕರು ಸಾವು, 10ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರ
ಟೆಕ್ಸಾಸ್‌ನ ಸ್ಯಾನ್ ಆಂಟೋನಿಯಲ್ಲಿ ಟ್ರಾಕ್ಟರ್-ಟ್ರೇಲರ್‌ನಲ್ಲಿದ್ದ 46 ಜನರು ಸಾವನ್ನಪ್ಪಿದ್ದಾರೆ. ಟ್ರಕ್ಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಆದರೆ, ಈ ಅಪಘಾತಕ್ಕೆ ಸರಿಯಾದ ಕಾರಣ ಇನ್ನೂ ಪತ್ತೆಯಾಗಿಲ್ಲ.
ಟೆಕ್ಸಾಸ್: ಅಮೆರಿಕಾದ ಟೆಕ್ಸಾಸ್‌ನ ಸ್ಯಾನ್ ಆಂಟೋನಿಯೊದಲ್ಲಿ ಸೋಮವಾರ ಭೀಕರ ಅಪಘಾತ (Accident) ಸಂಭವಿಸಿದೆ. ಈ ಅಪಘಾತದಲ್ಲಿ 46 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಟೆಕ್ಸಾಸ್‌ನ ಸ್ಯಾನ್ ಆಂಟೋನಿಯಲ್ಲಿ ಟ್ರಕ್ಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಆದರೆ, ಈ ಅಪಘಾತಕ್ಕೆ ಸರಿಯಾದ ಕಾರಣ ಇನ್ನೂ ಪತ್ತೆಯಾಗಿಲ್ಲ. ಟ್ರಾಕ್ಟರ್-ಟ್ರೇಲರ್‌ನಲ್ಲಿದ್ದ 46 ಜನರು ಸಾವನ್ನಪ್ಪಿದ್ದಾರೆ. ಇನ್ನೂ ಹತ್ತಾರು ಜನರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಜನರ ಸಂಚಾರ ಇಲ್ಲದ ಪ್ರದೇಶದಲ್ಲಿ ರೈಲ್ವೆ ಟ್ರ್ಯಾಕ್ ಪಕ್ಕದಲ್ಲಿ ಈ ಟ್ರಕ್ ನುಜ್ಜುಗುಜ್ಜಾಗಿ ಬಿದ್ದಿತ್ತು.
ಸ್ಯಾನ್ ಆಂಟೋನಿಯೊದ KSAT ದೂರದರ್ಶನದ ವರದಿ ಪ್ರಕಾರ, ಟ್ರಕ್‌ನೊಳಗೆ ಇದ್ದ 46 ಜನರು ಸಾವನ್ನಪ್ಪಿದ್ದಾರೆ. ನಗರದ ದಕ್ಷಿಣ ಹೊರವಲಯದಲ್ಲಿರುವ ದೂರದ ಪ್ರದೇಶದಲ್ಲಿ ರೈಲು ಹಳಿಗಳ ಪಕ್ಕದಲ್ಲಿ ಅಪಘಾತಕ್ಕೀಡಾದ ಟ್ರಕ್ ಪತ್ತೆಯಾಗಿದೆ ಎಂದು ಕೆಎಸ್‌ಎಟಿ ವರದಿ ಮಾಡಿದೆ. ಈ ಅಪಘಾತದಲ್ಲಿ ಸಾವನ್ನಪ್ಪಿರುವವರೆಲ್ಲರೂ ವಲಸಿಗರು ಎಂದು ಮೂಲಗಳು ತಿಳಿಸಿವೆ.
?#BREAKING: 42+ people found dead inside truck in San Antonio, Texas
According to emergency personnel, Reportedly an 18 wheeler packed with illegal aliens was found abandoned in the city’s southwestern edge resulting with 42+ dead inside the truck pic.twitter.com/h1PyF6Ud39
— R A W S A L E R T S (@rawsalerts) June 28, 2022
ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, 10ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಪಘಾತಕ್ಕೀಡಾದ ವಾಹನವು ಸ್ಯಾನ್ ಆಂಟೋನಿಯೊದ ನೈಋತ್ಯ ಭಾಗದಲ್ಲಿ ರೈಲು ಹಳಿಗಳ ಪಕ್ಕದಲ್ಲಿ ಪತ್ತೆಯಾಗಿದೆ. ಸ್ಯಾನ್ ಆಂಟೋನಿಯೊ ಪೊಲೀಸ್ ಇಲಾಖೆ ಅಧಿಕಾರಿಗಳು ಸ್ಥಳದಿಂದ ಕಾಣೆಯಾದ ಟ್ರಕ್ನ ಚಾಲಕನನ್ನು ಹುಡುಕುತ್ತಿದ್ದಾರೆ.
ಇದನ್ನೂ ಓದಿ: Accident: ಉತ್ತರ ಪ್ರದೇಶದಲ್ಲಿ ಹರಿದ್ವಾರದಿಂದ ಭಕ್ತರನ್ನು ಸಾಗಿಸುತ್ತಿದ್ದ ವಾಹನ ಅಪಘಾತ, 10 ಜನ ಸಾವು, 7 ಮಂದಿಗೆ ಗಾಯ
ಟೆಕ್ಸಾಸ್‌ನಲ್ಲಿರುವ ಸ್ಯಾನ್ ಆಂಟೋನಿಯೊ ಯುಎಸ್-ಮೆಕ್ಸಿಕನ್ ಗಡಿಯಿಂದ ಸುಮಾರು 250 ಕಿ.ಮೀ. (150 ಮೈಲುಗಳು) ದೂರದಲ್ಲಿದೆ. ಈ 46 ಜನರು ಹೇಗೆ ಸತ್ತರು ಎಂಬುದು ಖಚಿತವಾಗಿಲ್ಲ. ಮೂಲಗಳ ಪ್ರಕಾರ, ರೈಲ್ವೆ ಹಳಿಯ ಪಕ್ಕದಲ್ಲಿ ಟ್ರಕ್ ಬಿದ್ದಿರುವುದರಿಂದ ರೈಲು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿರುವ ಸಾಧ್ಯತೆ ಹೆಚ್ಚಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Published On - 8:11 am, Tue, 28 June 22