ಸಚಿವ ಸತೀಶ್ ಜಾರಕಿಹೊಳಿ ನಿವಾಸಗಳ ಮೇಲೆ ಇಡಿ ಶೋಧ: ಸಿಎಂ ಡಿಕೆ ಶಿವಕುಮಾರ್‌ಗೆ ಪ್ರಿಯಾಂಕ್ ಖರ್ಗೆ ಮಾಹಿತಿ

Edited By:

Updated on: Sep 09, 2026 | 11:44 AM

ಸಚಿವ ಸತೀಶ್ ಜಾರಕಿಹೊಳಿ ಸಂಬಂಧಿತ 18 ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. ಬೆಂಗಳೂರು, ಗೋಕಾಕ್‌ನಲ್ಲಿರುವ ನಿವಾಸಗಳು, ಮಗಳು ಪ್ರಿಯಾಂಕಾ ಜಾರಕಿಹೊಳಿ ಹಾಗೂ ಭಾವಮೈದುನ ವೈ. ಮಂಜುನಾಥ್ ಅವರ ಆವರಣಗಳಲ್ಲೂ ಶೋಧ ನಡೆದಿದೆ. ಅಕ್ರಮ ವಿದೇಶಿ ಹಣ ಹೂಡಿಕೆ ಹಾಗೂ ವರ್ಗಾವಣೆ ಆರೋಪದಡಿ, ಫೆಮಾ ಕಾಯ್ದೆ ಅಡಿ ಈ ದಾಳಿ ನಡೆದಿದ್ದು, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ಗೆ ಪ್ರಾಥಮಿಕ ಮಾಹಿತಿ ನೀಡಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್ 9: ಕರ್ನಾಟಕದ ಸಚಿವರಾದ ಸತೀಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ 18 ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿದೆ. ಬೆಂಗಳೂರಿನ ಡಾಲರ್ಸ್ ಕಾಲೋನಿ ಮತ್ತು ಸರ್ಕಾರಿ ನಿವಾಸ ಸೇರಿದಂತೆ ಅವರ ನಿವಾಸಗಳು, ಗೋಕಾಕ್‌ನಲ್ಲಿರುವ ನಿವಾಸ ಹಾಗೂ ಮಗಳು ಪ್ರಿಯಾಂಕಾ ಜಾರಕಿಹೊಳಿ ಅವರ ಆವರಣಗಳ ಮೇಲೂ ಶೋಧ ಕಾರ್ಯಾಚರಣೆ ನಡೆದಿದೆ. ಅಕ್ರಮ ವಿದೇಶಿ ಹಣ ಹೂಡಿಕೆ ಮತ್ತು ಹಣ ವರ್ಗಾವಣೆ ಆರೋಪಗಳು ಈ ದಾಳಿಗೆ ಕಾರಣವಾಗಿವೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) 1999 ರ ಅಡಿಯಲ್ಲಿ ಈ ಶೋಧ ನಡೆಯುತ್ತಿದೆ ಎಂದು ತಿಳಿದುಬಂದಿದೆ. ದಾಳಿಯ ಕುರಿತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಪ್ರಾಥಮಿಕ ಮಾಹಿತಿ ನೀಡಿದ್ದಾರೆ.

ದಾಳಿಗಳು ಬೆಳಿಗ್ಗೆ 7 ಗಂಟೆಯಿಂದ ಮುಂದುವರೆದಿದೆ. ಈ ಹಿಂದೆ ಸತೀಶ್ ಜಾರಕಿಹೊಳಿ ಅವರ ಭಾವಮೈದುನ ವೈ. ಮಂಜುನಾಥ್ ಅವರ ಮೇಲಿನ ಅಕ್ರಮ ಪ್ರಕರಣಕ್ಕೂ ಈ ದಾಳಿಗೆ ಸಂಬಂಧವಿರಬಹುದು ಎಂದು ಮೂಲಗಳು ತಿಳಿಸಿದ್ದವು. ಆದರೆ, ನಂತರ ವಿದೇಶಿ ಹೂಡಿಕೆ ಸಂಬಂಧ ದಾಳಿ ನಡೆದಿದೆ ಎಂದು ಇಡಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us