ಬೆಂಗಳೂರು: ಮಾದಾವರ ಸುತ್ತಮುತ್ತ ಫುಲ್​ ಟ್ರಾಫಿಕ್​ಜಾಮ್, ವಾಹನ ಸವಾರರ ಪರದಾಟ

Edited By:

Updated on: Feb 09, 2025 | 7:46 PM

ಬುಕ್ ಮೈ ಶೋ ಆಯೋಜಿಸಿದ್ದ ಎಡ್ ಶೆರಾನ್ ಅವರ ಅಂತರಾಷ್ಟ್ರೀಯ ಸಂಗೀತ ಕಾರ್ಯಕ್ರಮ ನೆಲಮಂಗಲದ ಬಿಐಇಸಿ ಮಾದಾವರ ಮೈದಾನದಲ್ಲಿ ನಡೆಯಿತು. 20,000 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರಿಂದ ಮಾದಾವರದ ಸುತ್ತಮುತ್ತ ಭಾರಿ ಸಂಚಾರ ದಟ್ಟಣೆ ಉಂಟಾಯಿತು. ಪೊಲೀಸರು ಸಂಚಾರ ನಿಯಂತ್ರಿಸಲು ಹರಸಾಹಸ ಪಟ್ಟರು. ಸಾವಿರಾರು ವಾಹನಗಳು ಸಿಲುಕಿಕೊಂಡವು.

ನೆಲಮಂಗಲ: ಬಿಐಇಸಿ ಮಾದಾವರ ಮೈದಾನದಲ್ಲಿ ಬುಕ್ ಮೈ ಶೋ ಆಯೋಜನೆ ಮಾಡಿರುವ ಅಂತರಾಷ್ಟ್ರೀಯ ಹಾಡುಗಾರ ಎಡ್ ಶೆರೀನ್ ಅವರ ಸಂಗೀತ ಕಾರ್ಯಕ್ರಮ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ಭಾಗಿಯಾದ 20ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗಿದ್ದಾರೆ. ಹೀಗಾಗಿ ಮಾದಾವರ ಸುತ್ತಮುತ್ತ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ. ಜಾಮ್​ನಲ್ಲಿ ಸಿಲುಕಿ ವಾಹನ ಸವಾರರು ಪರದಾಡುತ್ತಿದ್ದಾರೆ. ಸಂಚಾರ ದಟ್ಟಣೆ ನಿಯಂತ್ರಿಸಲು ನೆಲಮಂಗಲ ಪೊಲೀಸರು ಹರಸಾಹಸ ಪಟ್ಟರು. ಸಾವಿರಾರು ವಾಹನಗಳು ನಿಂತಲ್ಲೇ ನಿಂತಿವೆ.