ಸಚಿವ ನಾಗೇಶ್ ಮಡಿಕೇರಿಯ ಚಿಕ್ಕ ಹೋಟೆಲೊಂದರಲ್ಲಿ ಶಾಸಕ ಮತ್ತು ಅಧಿಕಾರಿಗಳೊಂದಿಗೆ ಚಹಾ ಸೇವಿಸಿ ಸರಳತೆ ಮೆರೆದರು
ನಿಮಗೆ ಗೊತ್ತಿದೆ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್ ಸದಸ್ಯರು ಸಹ ತಮ್ಮ ಮನೆಗಳ ಮುಂದೆ ದುಬಾರಿ, ಐಷಾರಾಮಿ ಕಾರುಳನ್ನು ನಿಲ್ಲಿಸಿಕೊಂಡಿರುವ ಕಾಲವಿದು. ಅವರಿಗೆ ನೀವು ಒಂದು ಚಿಕ್ಕ ಹೋಟೆಲ್ ಗೆ ಟೀ ಕುಡಿಯಲು ಆಹ್ವಾನಿಸಿ ನೋಡಿ. ಅವರು ಒಲ್ಲೆ ಎನ್ನುತ್ತಾರೆ.
ಮಡಿಕೇರಿ: ಕಳೆದೆರಡು ತಿಂಗಳುಗಳಿಂದ ಹಿಜಾಬ್ ಪ್ರಕರಣ, ಎಸ್ ಎಸ್ ಎಲ್ ಸಿ ಪರೀಕ್ಷೆ (SSLC exams) ತಯಾರಿ ಮೊದಲಾದವುಗಳಿಂದಾಗಿ ಎಡೆಬಿಡದೆ ಸುದ್ದಿಯಲ್ಲಿರುವ ಶಿಕ್ಷಣ ಸಚಿವ ಬಿ ಸಿ ನಾಗೇಶ್ (BC Nagesh) ಅವರು ಗುರುವಾರ ಕೊಡಗು ಜಿಲ್ಲೆ ಪ್ರವಾಸದಲ್ಲಿದ್ದರು. ಅವರು ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿದ್ದಾರೆ. ಹಿಂದಿನ ಶಿಕ್ಷಣ ಸಚಿವ ಸುರೇಶ್ ಕುಮಾರ (Suresh Kumar) ಅವರಂತೆ ನಾಗೇಶ್ ಅವರು ಸಹ ಸರಳ ಸ್ವಭಾವದವರು. ಗುರುವಾರ ಅವರು ಕೊಡಗಿನ ಶಾಸಕ ಅಪ್ಪಚ್ಚು ರಂಜನ್, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಮತ್ತು ಇತರ ಕೆಲವರೊಂದಿಗೆ ಜನಸಾಮಾನ್ಯರ ಹಾಗೆ ಮಡಿಕೇರಿ ಆನಂದ್ ಬೇಕರಿಯಲ್ಲಿ ಚಹಾ ಸೇವಿಸಿದರು. ಅದರಲ್ಲೇನು ಅಂಥ ವಿಶೇಷ ಅಂತ ಹುಬ್ಬೇರಿಸಬೇಡಿ ಮಾರಾಯ್ರೇ.
ನಿಮಗೆ ಗೊತ್ತಿದೆ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್ ಸದಸ್ಯರು ಸಹ ತಮ್ಮ ಮನೆಗಳ ಮುಂದೆ ದುಬಾರಿ, ಐಷಾರಾಮಿ ಕಾರುಳನ್ನು ನಿಲ್ಲಿಸಿಕೊಂಡಿರುವ ಕಾಲವಿದು. ಅವರಿಗೆ ನೀವು ಒಂದು ಚಿಕ್ಕ ಹೋಟೆಲ್ ಗೆ ಟೀ ಕುಡಿಯಲು ಆಹ್ವಾನಿಸಿ ನೋಡಿ. ಅವರು ಒಲ್ಲೆ ಎನ್ನುತ್ತಾರೆ.
ಚಿಕ್ಕ ಚಿಕ್ಕ ಹೋಟೆಲ್ ಗಳಲ್ಲಿ ಚಹಾ ಕುಡಿಯೋದು, ತಿಂಡಿ ತಿನ್ನೋದು ತಮ್ಮ ಪ್ರತಿಷ್ಠೆಗೆ ಧಕ್ಕೆ ಎಂದು ಆವರು ಭಾವಿಸುತ್ತಾರೆ. ಯಾರನ್ನೂ ಬೊಟ್ಟು ಮಾಡಿ ನಾವು ಹೇಳುತ್ತಿಲ್ಲ, ಒಂದು ಜನರಲ್ ಟ್ರೆಂಡ್ ಬಗ್ಗೆ ಮಾತಾಡುತ್ತಿದ್ದೇವೆ.
ಈ ಹಿನ್ನೆಲೆಯಲ್ಲೇ ನಮಗೆ ಸಚಿವ ನಾಗೇಶ್ ಅವರ ಸರಳತೆ ಇಷ್ಟವಾಗುತ್ತದೆ. ನಮ್ಮ ಬಹಳಷ್ಟು ನಾಯಕರು ನಾಗೇಶ್ ಅವರಿಂದ ಕಲಿಯಬೇಕಿದೆ ಮಾರಾಯ್ರೇ.
ಇದನ್ನೂ ಓದಿ: Pak Vs Aus: ಮಿಸ್ಫೀಲ್ಡಿಂಗ್ ಮಾಡಿದ ಪಾಕ್ ಆಟಗಾರ; ಆದರೂ ರನ್ ಔಟ್ ಆದ ಆಸ್ಟ್ರೇಲಿಯಾ ಬ್ಯಾಟರ್- ಹೇಗೆ? ವಿಡಿಯೋ ಇಲ್ಲಿದೆ