Assembly Polls: ಚುನಾವಣಾ ಆಯೋಗದಿಂದ ಇಂದು ಸುದ್ದಿಗೋಷ್ಟಿ, ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಿಸುವ ಸಾಧ್ಯತೆ

Assembly Polls: ಚುನಾವಣಾ ಆಯೋಗದಿಂದ ಇಂದು ಸುದ್ದಿಗೋಷ್ಟಿ, ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಿಸುವ ಸಾಧ್ಯತೆ

ಅರುಣ್​ ಕುಮಾರ್​ ಬೆಳ್ಳಿ
|

Updated on:Mar 29, 2023 | 10:26 AM

ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಬೇಕಿದ್ದು ದಿನಾಂಕಗಳು ಇಂದೇ ಘೋಷಣೆಯಾದರೆ ಕೂಡಲೇ ಚುನಾವಣಾ ನೀತಿ ಸಂಹಿತೆ ಕೂಡ ಜಾರಿಗೆ ಬರುವ ಸಾಧ್ಯತೆಯಿದೆ

ನವದೆಹಲಿ: ಬಹು ನಿರೀಕ್ಷಿತ ಘೋಷಣೆ ಇವತ್ತು ಆಗುವ ಸಾಧ್ಯತೆ ಇದೆ. ಚುನಾವಣಾ ಅಯೋಗ (Election Commission) ಇಂದು ಬೆಳಗ್ಗೆ 11.30 ಕ್ಕೆ ಸುದ್ದಿಗೋಷ್ಟಿಯೊಂದನ್ನು ನಡೆಸಲಿದ್ದು ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly polls) ದಿನಾಂಕಗಳನ್ನು ಪ್ರಕಟಿಸಬಹುದೆಂದು ಹೇಳಲಾಗುತ್ತಿದೆ. ಮುಖ್ಯ ಚುನಾಚಾಣಾ ಆಯುಕ್ತ ರಾಜೀವ್ ಕುಮಾರ್ (Rajiv Kumar) ಅವರು ಪತ್ರಿಕಾ ಗೋಷ್ಟಿ ನಡೆಸಲಿದ್ದಾರೆ. ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಬೇಕಿದ್ದು ದಿನಾಂಕಗಳು ಇಂದೇ ಘೋಷಣೆಯಾದರೆ ಕೂಡಲೇ ಚುನಾವಣಾ ನೀತಿ ಸಂಹಿತೆ ಕೂಡ ಜಾರಿಗೆ ಬರುವ ಸಾಧ್ಯತೆಯಿದೆ. ಇದೇ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Mar 29, 2023 10:26 AM