ಕೇರಳದ ತ್ರಿಶೂರ್‌ನಲ್ಲಿ ಟ್ಯಾಂಕ್‌ಗೆ ಬಿದ್ದು ಆನೆ ಮರಿ ಸಾವು; ವಿಡಿಯೋ ವೈರಲ್
ಆನೆ ಮರಿ ಸೆಪ್ಟಿಕ್ ಟ್ಯಾಂಕ್‌ನೊಳಗೆ ಬಿದ್ದಾಗ ಅದರ ಕುತ್ತಿಗೆಗೆ ಗಾಯಗಳಾಗಿ ಸಾವನ್ನಪ್ಪಿದೆ. ಮರಣೋತ್ತರ ಪರೀಕ್ಷೆಯ ನಂತರವೇ ಸಾವಿಗೆ ನಿಖರವಾದ ಕಾರಣವನ್ನು ದೃಢೀಕರಿಸಬಹುದು.
ತ್ರಿಶೂರ್: ಕೇರಳದ ತ್ರಿಶೂರ್ನ ಚಾಲಕುಡಿ ಸಮೀಪದ ಪಾಲಪ್ಪಿಲ್ಲಿ ಗ್ರಾಮದಲ್ಲಿ ಇಂದು ಬೆಳಗ್ಗೆ ಹಳೆಯ ಸೆಪ್ಟಿಕ್ ಟ್ಯಾಂಕ್‌ಗೆ ಬಿದ್ದ ಗಂಡು ಆನೆ ಮರಿಯೊಂದು ಗಾಯಗೊಂಡು ಸಾವನ್ನಪ್ಪಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಬೆಳಗ್ಗೆ 8.30ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಮಧ್ಯಾಹ್ನದ ವೇಳೆಗೆ ಆನೆ ಮರಿ ಸಾವನ್ನಪ್ಪಿದೆ. ಆನೆ ಮರಿ ಸೆಪ್ಟಿಕ್ ಟ್ಯಾಂಕ್‌ನೊಳಗೆ ಬಿದ್ದಾಗ ಅದರ ಕುತ್ತಿಗೆಗೆ ಗಾಯಗಳಾಗಿ ಸಾವನ್ನಪ್ಪಿದೆ. ಮರಣೋತ್ತರ ಪರೀಕ್ಷೆಯ ನಂತರವೇ ಸಾವಿಗೆ ನಿಖರವಾದ ಕಾರಣವನ್ನು ದೃಢೀಕರಿಸಬಹುದು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos