ಹಾಸನ: ಕೆರೆಯಲ್ಲಿ ಈಜಾಡಿ ಕಾಫಿ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆಗಳು, ವಿಡಿಯೋ ನೋಡಿ
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಬಿಕ್ಕೋಡು ತಾವರೆಕೆರೆ ಬಳಿ ಕಾಡಾನೆ ಹಿಂಡು ಪ್ರತ್ಯಕ್ಷವಾಗಿದೆ. 20 ಆನೆಗಳಿರುವ ಗಜಪಡೆ ಬೆಳ್ಳಂಬೆಳಿಗ್ಗೆ ಕೆರೆಯಲ್ಲಿ ಈಜಾಡಿವೆ. ಕೆರೆಯಲ್ಲಿ ಈಜಾಡಿದ ಬಳಿಕ ಆನೆಗಳು ಕಾಫಿತೋಟಕ್ಕೆ ಎಂಟ್ರಿ ಕೊಟ್ಟಿವೆ. ಇದರಿಂದ ಕಾಫಿ ತೋಟ ನಾಶವಾಗಿದೆ. ವಿಡಿಯೋ ನೋಡಿ
ಹಾಸನ (Hassan) ಜಿಲ್ಲೆಯಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದೆ. ಇಂದು (ಸೆ.10) ಬೇಲೂರು ತಾಲೂಕಿನ ಬಿಕ್ಕೋಡು ತಾವರೆಕೆರೆ ಬಳಿ ಕಾಡಾನೆ (Elephant) ಹಿಂಡು ಪ್ರತ್ಯಕ್ಷವಾಗಿದೆ. 20 ಆನೆಗಳಿರುವ ಗಜಪಡೆ ಬೆಳ್ಳಂಬೆಳಿಗ್ಗೆ ಕೆರೆಯಲ್ಲಿ ಈಜಾಡಿವೆ. ಕೆರೆಯಲ್ಲಿ ಈಜಾಡಿದ ಬಳಿಕ ಆನೆಗಳು ಕಾಫಿತೋಟಕ್ಕೆ ಲಗ್ಗೆ ಇಟ್ಟಿವೆ. ಕಾಫಿತೋಟದಲ್ಲಿ ಆನೆ ಓಡಾಟದಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಇದರಿಂದ ಕಾಫಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಡಾನೆಗಳ ಉಪಟಳದಿಂದ ಗ್ರಾಮಸ್ಥರು ಜೀವ ಭಯದಲ್ಲಿ ಓಡಾಡುತ್ತಿದ್ದಾರೆ. ಹೀಗಾಗಿ ಕಾಡಾನೆ ಹಾವಳಿಯಿಂದ ಶಾಶ್ವತ ಪರಿಹಾರ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಕಾಡಾನೆಗಳ ಹಾವಳಿಯಿಂದ ಆಗುತ್ತಿರುವ ಬೆಳೆ ಹಾನಿಗೆ ವೈಜ್ಞಾನಿಕ ಪರಿಹಾರ ನೀಡುವಂತೆ ರೈತರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ