ಸಿಟಿ ರವಿ ಬಂಧನ; ಎಲ್ಲ ವಿಷಯಗಳನ್ನು ಮಾಧ್ಯಮಗಳ ಮುಂದೆ ಹೇಳಲಾಗಲ್ಲ: ಜಿ ಪರಮೇಶ್ವರ್
ಸಿಟಿ ರವಿ ಬಂಧನ ಮತ್ತು ಹಲ್ಲೆ ಪ್ರಕರಣದ ಕೆಲ ಪ್ರಶ್ನೆಗಳಿಗೆ ಪರಮೇಶ್ವರ್ ತನಗೆ ಗೊತ್ತಿಲ್ಲ ಅಂತ ಉತ್ತರಿಸಿದ್ದು ಅಶ್ಚರ್ಯ ಹುಟ್ಟಿಸುತ್ತದೆ. ರವಿಯವರನ್ನು ಇಂದು ಕೋರ್ಟ್ ಮುಂದೆ ಹಾಜರುಪಡಿಸಲಿರುವ ಸಂಗತಿಯ ಮಟ್ಟಿಗೆ ತನಗೆ ಮಾಹಿತಿ ಇದೆ ಅನ್ನುತ್ತಾರೆ. ಪೊಲೀಸ್ ಪ್ರಕರಣಗಳಲ್ಲಿ ಮಾಧ್ಯಮದವರರು ಗೃಹ ಸಚಿವರನ್ನು ಬಿಟ್ಟು ಬೇರೆ ಸಚಿವರನ್ನು ಕೇಳಲಾದೀತೆ?
ಬೆಂಗಳೂರು: ಸಿಟಿ ರವಿ ಬಂಧನದ ವಿಷಯದಲ್ಲಿ ಗೃಹಸಚಿವ ಯಾಕೆ ಮೌನವಾಗಿದ್ದಾರೆ ಅಂತ ಕೇಳಿದರೆ ಜಿ ಪರಮೇಶ್ವರ್ ಏರುಧ್ವನಿಯಲ್ಲಿ ಉತ್ತರಿಸಿದರು. ತಾನ್ಯಾಕೆ ಸೈಲೆಂಟ್ ಆಗಲಿ? ಆ ಪ್ರಶ್ನೆಯೇ ಉದ್ಭವಿಸಲ್ಲ, ಪೊಲೀಸ್ ತನಿಖೆಗೆ ಸಂಬಂಧಟ್ಟ ವಿಷಯಗಳು ಗೌಪ್ಯವಾಗಿರುತ್ತವೆ, ಅವುಗಳನ್ನು ಸಾರ್ವಜನಿಕವವಾಗಿ ಬಹಿರಂಗಪಡಿಸಲು ಅಗಲ್ಲ, ಎಲ್ಲ ಸಂದರ್ಭಗಳಲ್ಲಿ ಏನು ಮಾಡಬೇಕು ಅಂತ ಸರ್ಕಾರ ಸೂಚನೆಗಳನ್ನು ನೀಡಲ್ಲ, ಪೊಲೀಸರು ಸಂದರ್ಭಕ್ಕನುಗುಣವಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ, ಎಂದ ಪರಮೇಶ್ವರ್ ಇದು ರಾಜಕೀಯ ವಿಷಯವಾದ್ದರಿಂದ ರಾಜಕೀಯ ಸ್ತರದಲ್ಲೇ ಉತ್ತರ ಕೊಡುತ್ತಿರುವುದಾಗಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: CT Ravi: ನಿನ್ನ ಹೆಣ ಚಿಕ್ಕಮಗಳೂರಿಗೆ ಹೋಗುತ್ತೆ ಎಂದು ಧಮಕಿ ಹಾಕಿದ್ದರು: ಕೋರ್ಟ್ನಲ್ಲಿ ಸಿಟಿ ರವಿ ಆರೋಪ
Latest Videos