ಬಡ್ಡಿ ವ್ಯವಹಾರ ಬಿಂದಾಸಾಗಿ ನಡೆಯುವ ಜೈಲಲ್ಲಿ ಹೊರಗಿನಿಂದ ಏನು ಬೇಕಾದರೂ ತರಿಸಿಕೊಳ್ಳಬಹುದು: ಮಾಜಿ ಕೈದಿ
ಜೈಲಿನ ಹೊರಗಿನ ಪೊಲೀಸ್ ಅಧಿಕಾರಿಗಳಷ್ಟೇ ಒಳಗಿನ ಅಧಿಕಾರಿಗಳು ಸಹ ಪ್ರಾಮಾಣಿಕರಾಗಿದ್ದರೆ ಸೆರೆಮನೆ ನಿಜಕ್ಕೂ ಅಪರಾಧಿಗಳ ಮನಪರಿವರ್ತನೆ ಕೇಂದ್ರವಾಗಿ ಮಾರ್ಪಡಬಹುದು. ಅದರೆ, ಜೈಲಿಗೆ ಹೋಗುವ ಅಪರಾಧಿಗಳಿಗೆ ಒಳ್ಳೆಯವರಾಗುವುದು ಬೇಕಿರಲ್ಲ ಮತ್ತು ಅವರನ್ನು ತಿದ್ದುವ ಕೆಲಸವೂ ಪೊಲೀಸರಿಂದ ನಡೆಯುವುದಿಲ್ಲ ಎಂದು ಮಾಜಿ ಕೈದಿ ವಿಷಾದದಿಂದ ಹೇಳುತ್ತಾರೆ.
ಬೆಂಗಳೂರು: ಆನೇಕಲ್ ನ ಪರಪ್ಪನ ಅಗ್ರಹಾರದಲ್ಲಿರುವ ಬೆಂಗಳೂರು ಸೆಂಟ್ರಲ್ ಜೈಲು ಚಿತ್ರಣವನ್ನು ಮಾಜಿ ಖೈದಿಯೊಬ್ಬರು ಬಿಚ್ಚಿಟ್ಟಿಟ್ಟಿದ್ದಾರೆ. ಹೆಸರು ಮತ್ತು ತಮ್ಮ ಐಡೆಂಟಿಟಿಯನ್ನು ಹೇಳಿಕೊಳ್ಳಲಿಚ್ಛಿಸದ ಅವರು ಅಪರಾಧ ಸಾಬೀತಾಗಿ ಜೈಲಲ್ಲಿರುವ ಕೆಲ ಖೈದಿಗಳಿಗೆ ಸೆರೆಮನೆ ವಾಸ ಮತ್ತ ಅದರ ಹೊರಗಿನ ವಾಸದಲ್ಲಿ ಜಾಸ್ತಿ ಅಂತವೇನೂ ಇರಲ್ಲ. ದುಡ್ಡು ಚೆಲ್ಲಿದರೆ ಸೆಂಟ್ರಲ್ ಜೈಲಿನಲ್ಲಿ ಎಲ್ಲವೂ ಸಿಗುತ್ತಂತೆ! ಅದನ್ನು ವ್ಯವಸ್ಥೆ ಮಾಡಿಕೊಡಲೆಂದೇ ಕೆಲ ಪೊಲೀಸರಿರುತ್ತಾರೆ ಎಂದು ಅವರ ಹೇಳುತ್ತಾರೆ. ಆದರೆ ಜೈಲು ಅಧಿಕಾರಿಗಳೆಲ್ಲ ಅಂಥ ಕೆಲಸಕ್ಕಿಳಿಯಲ್ಲ, ಪ್ರಾಮಾಣಿಕ ಅಧಿಕಾರಿಗಳೂ ಇರುತ್ತಾರೆ ಎಂದು ಹೇಳುವ ಅವರು ಜೈಲಲ್ಲಿ ಬಡ್ಡಿ ದಂಧೆ ಕೂಡ ನಡೆಯುತ್ತದೆ ಎನ್ನುತ್ತಾರೆ. ಸಿಗರೇಟು, ಲಿಕ್ಕರು, ಗುಟ್ಕಾ ಎಲ್ಲವನ್ನೂ ಒಳಗಡೆ ತರಿಸಿಕೊಳ್ಳಬಹುದು. ಹೊರಗಡೆಯಿಂದ ರೇಷನ್ ತರಿಸಿ ಸೆರೆಮನೆಯಲ್ಲಿ ಅಡುಗೆ ಸಹ ತಯಾರಿಸಿಕೊಂಡು ತಿನ್ನಬಹುದಂತೆ. ಇವರು 8-10 ವರ್ಷಗಳ ಹಿಂದೆ ಜೈಲಲ್ಲಿದ್ದಾಗ ಒಂದು ಫುಲ್ ಬಾಟಲ್ ಮದ್ಯಕ್ಕೆ ₹ 5,000 ಕೊಡಬೇಕಾಗುತ್ತಿತ್ತಂತೆ! ಚಿಕ್ಕನ್ ಮತ್ತು ಮಟನ್ ಸಹ ಒಳಗಡೆ ತರಿಸಿ ಕುದಿಸಿಕೊಂಡು ತಿನ್ನಬಹುದು ಎಂದು ಅವರು ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Darshan Thoogudeepa: ಪಶ್ಚಾತ್ತಾಪದ ಬಳಿಕವೂ ಬದಲಾಗಿಲ್ಲ ದರ್ಶನ್: ಜೈಲಧಿಕಾರಿ