Rahul Dravid Car Accident: ಬೆಂಗಳೂರಿನಲ್ಲಿ ದ್ರಾವಿಡ್ ಕಾರು ಅಪಘಾತ: ವಿಡಿಯೋ ನೋಡಿ

Updated on: Feb 04, 2025 | 10:08 PM

Rahul Dravid Car Accident: ಟೀಮ್ ಇಂಡಿಯಾದ ಮಾಜಿ ಆಟಗಾರ, 2024ರ ಟಿ-20 ವಿಶ್ವಕಪ್ ಜಯಿಸಿದ ತಂಡದ ಹೆಡ್ ಕೋಚ್ ಕನ್ನಡಿಗ ರಾಹುಲ್ ದ್ರಾವಿಡ್ (Rahul Dravid) ಅವರ ಕಾರು ಅಪಘಾತವಾಗಿದೆ. ಬೆಂಗಳೂರಿನ ಕನ್ನಿಂಗ್​ಹ್ಯಾಮ್ ರಸ್ತೆಯಲ್ಲಿಂದು ದ್ರಾವಿಡ್ ಕಾರು ಹಾಗೂ ಗೂಡ್ಸ್ ಆಟೋ ನಡುವೆ ಚಿಕ್ಕ ಪ್ರಮಾಣದಲ್ಲಿ ಅಪಘಾತವಾದೆ. ಆದ್ರೆ ಈ ಅಪಘಾತದಲ್ಲಿ ಯಾವುದೇ ಗಾಯವಾಗಲಿ, ಪ್ರಾಣಾಪಾಯದಂತಹ ಘಟನೆಗಳು ಸಂಭವಿಸಿಲ್ಲ.

ಬೆಂಗಳೂರು ಟ್ರಾಫಿಕ್‌ನಲ್ಲಿ ಟೀಂ ಇಂಡಿಯಾ ಮಾಜಿ ಕೋಚ್ ರಾಹುಲ್ ದ್ರಾವಿಡ್ ಕಾರಿಗೆ ಗೂಡ್ಸ್ ಆಟೋ ಬಂದು ಗುದ್ದಿದೆ. ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಇಂದು (ಫೆಬ್ರವರಿ 04) ಈ ಘಟನೆ ನಡೆದಿದೆ. ಕಾರಿಗೆ ಗೂಡ್ಸ್ ಆಟೋ ಟಚ್ ಆದ ಬಳಿಕ ರಾಹುಲ್ ದ್ರಾವಿಡ್ ಕಾರಿನಿಂದ ಕೆಳಗಿಳಿದು ಪರಿಶೀಲನೆ ನಡೆಸಿದರು. ಈ ವೇಳೆ ದ್ರಾವಿಡ್ ಹಾಗೂ ಗೂಡ್ಸ್ ಆಟೋ ಚಾಲಕನ‌ ಮಧ್ಯೆ ಸಣ್ಣ ವಾಗ್ವಾದ ನಡೆದಿದೆ. ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಆದ್ರೆ, ಘಟನೆ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.

ಟ್ರಾಫಿಕ್ ಜಾಮ್ ವೇಳೆ ನಿಂತಿದ್ದ ಕಾರಿಗೆ ಹಿಂದೆ ಗೂಡ್ಸ್ ಆಟೋ ಡಿಕ್ಕಿ ಹೊಡೆದಿದೆ. ಘಟನೆ ನಂತರ ದ್ರಾವಿಡ್ ಕಾರಿನಿಂದ ಇಳಿದು ಬಂದು ಪರಿಶೀಲಿಸಿದರು. ಇನ್ನು ಟ್ರಾಫಿಕ್​ ಇದ್ದ ಕಾರಣ ದ್ರಾವಿಡ್ ಕಾರು ಮುಂದಿನ ವಾಹನಕ್ಕೆ ಟಚ್​ ಆಗಿದೆ ಎನ್ನಲಾಗಿದೆ. ಹೀಗಾಗಿ ದ್ರಾವಿಡ್ ತಮ್ಮ ಕಾರಿನ ಮುಂಭಾಗವನ್ನು ಪರಿಶೀಲಿಸುವುದನ್ನು ವಿಡಿಯೋನಲ್ಲಿ ಕಾಣಬಹುದು. ಇನ್ನು ಇದರಲ್ಲಿ ಆಟೋ ಚಾಲಕನದ್ದು ತಪ್ಪಾ ಅಥವಾ ದ್ರಾವಿಡ್ ಅವರದ್ದು ತಪ್ಪಾ ಎನ್ನುವುದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಸದ್ಯ ರಾಹುಲ್ ದ್ರಾವಿಡ್, ಗೂಡ್ಸ್ ಆಟೋ ಚಾಲಕನ ನಂಬರ್ ಪಡೆದು ಅಲ್ಲಿಂದ ತೆರಳಿದ್ದಾರೆ.

ಇದನ್ನೂ ಓದಿ: ರಾಹುಲ್ ದ್ರಾವಿಡ್ ಕಾರು ಅಪಘಾತಕ್ಕೆ ಕಾರಣವೇನು? ಯಾರದ್ದು ತಪ್ಪು? ಇಲ್ಲಿದೆ ವಿವರ

Published on: Feb 04, 2025 09:42 PM
Loading...
Unable to load recommendations.
Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More