ದೇಶಕ್ಕೆ ಮೋದಿ ಕರ್ನಾಟಕಕ್ಕೆ ಜೆಸಿಬಿ: ಹೊಸ ಪಕ್ಷದ ಸುಳಿವು ಕೊಟ್ಟ ವಿಜಯಪುರ ಶಾಸಕ ಯತ್ನಾಳ್
ದೇಶಕ್ಕೆ ಮೋದಿ, ಕರ್ನಾಟಕಕ್ಕೆ ಜೆಸಿಬಿ ಎಂದು ಹೇಳುವ ಮೂಲಕ ಬಿಜೆಪಿ ಉಚ್ಛಾಟಿತ ಶಾಸಕ ಯತ್ನಾಳ್ ಹೊಸ ಪಕ್ಷ ಘೋಷಣೆಯ ಸುಳಿವು ನೀಡಿದ್ದಾರೆ. ತಮಿಳುನಾಡಲ್ಲಿ ಅಧಿಕಾರದ ಗದ್ದುಗೆ ಏರಿರುವ ವಿಜಯ್ ನೇತೃತ್ವದ ನೂತನ ಪಕ್ಷ ಟಿವಿಕೆ ಉದಾಹರಣೆಯನ್ನು ನೀಡಿದ ಅವರು, ರಾಜ್ಯ ಪ್ರವಾಸ ಮಾಡೋದಾಗಿ ತಿಳಿಸಿದ್ದಾರೆ. ಜೊತೆಗೆ ನಿನ್ನೆ ನಡೆದಿದ್ದು ಬಿಎಸ್ವೈ ಅಭಿಮಾನೋತ್ಸವ ಅಲ್ಲ. ಬದಲಾಗಿ ಬೀಳ್ಕೊಡುಗೆ ಸಮಾರಂಭ ಎಂದು ಟೀಕಿಸಿದ್ದಾರೆ.
ವಿಜಯಪುರ, ಮೇ 10: ಎರಡು ವರ್ಷಗಳ ಹಿಂದೆ ಆರಂಭವಾದ ರಾಜಕೀಯ ಪಕ್ಷ ತಮಿಳುನಾಡಲ್ಲಿ ಅಧಿಕಾರಕ್ಕೆ ಬಂದಿದೆ. ಹೀಗಾಗಿ ರಾಜ್ಯದಲ್ಲಿ ಪ್ರವಾಸ ಆರಂಭಿಸಲಿದ್ದು, ಜನರು ಒಪ್ಪಿದ್ದರೆ ಕರ್ನಾಟಕದಲ್ಲಿ ಜೆಸಿಬಿ ಪಾರ್ಟಿ ರೆಡಿ ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ. ಹೊಸ ಪಕ್ಷ ಘೋಷಣೆ ಯಾವಾಗ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಮೊದಲ ಹಂತದಲ್ಲಿ ಪ್ರವಾಸ ನಡೆಯಲಿದೆ. ದೇಶಕ್ಕೆ ಮೋದಿ ಕರ್ನಾಟಕಕ್ಕೆ ಜೆಸಿಬಿ ಎಂದವರು ತಿಳಿಸಿದ್ದಾರೆ. ಇದೇ ವೇಳೆ ಮಾಜಿ ಸಿಎಂ ಯಡಿಯೂರಪ್ಪ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ನಿನ್ನೆ ನಡೆದಿದ್ದು ಬಿಎಸ್ವೈ ಅಭಿಮಾನೋತ್ಸವ ಅಲ್ಲ. ಬದಲಾಗಿ ಬೀಳ್ಕೊಡುಗೆ ಸಮಾರಂಭ ಎಂದಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos
