[lazy-load-videos-and-sticky-control id=”7wx50cv-VOA”]
ಬೆಂಗಳೂರು: ನೆಗೆಟಿವ್ ವರದಿ ಬಂದಿರೋ ರೋಗಿಯನ್ನ ಕೋವಿಡ್ ಐಸಿಯುನಲ್ಲಿ ಇಟ್ಟು ಟ್ರಿಟ್ಮೆಂಟ್ ಮಾಡಿರುವ ಆರೋಪ ಕುಮಾರಸ್ವಾಮಿ ಲೇಔಟ್ ನಲ್ಲಿರುವ ಸಾಗರ್ ಆಸ್ಪತ್ರೆಯ ಮೇಲೆ ಕೇಳಿ ಬರುತ್ತಿದೆ.
ಮಂಗಳವಾರ 54 ವರ್ಷದ ಜಗದೀಶ್ ಎಂಬುವವರನ್ನ ತೀವ್ರ ಉಸಿರಾಟದ ತೊಂದರೆಯಿಂದಾಗಿ ಸಾಗರ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸ್ವಾಬ್ ಟೆಸ್ಟ್ ಮಾಡಿದಾಗ ಕೊರೊನಾ ನೆಗೆಟಿವ್ ಅಂತ ರಿಪೋರ್ಟ್ ಬಂದಿದೆ. ಆದರೆ ಈಗ ವ್ಯಕ್ತಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಹೀಗಾಗಿ ವ್ಯಕ್ತಿ ಮೃತಪಟ್ಟ ಬಳಿಕ ಆಸ್ಪತ್ರೆ ವತಿಯಿಂದ ಪುನಃ ಕೊರೊನಾ ಪಾಸಿಟಿವ್ ಅಂತ ರಿಪೋರ್ಟ್ ರೆಡಿ ಮಾಡಲಾಗಿದೆ ಅನ್ನೋ ಆರೋಪ ಕೇಳಿ ಬಂದಿದೆ.
ಮೊದಲು 2 ಲಕ್ಷ ಬಿಲ್ಲ್ ಕಟ್ಟಿ ಮೃತ ದೇಹ ತಗೊಂಡೋಗಿ ಎಂದಿದ್ದ ಆಸ್ಪತ್ರೆ ಸಿಬ್ಬಂದಿ ಇದೀಗ 80 ಸಾವಿರ ಕಟ್ಟಿ ಅಂತ ಕ್ಯಾತೆ ತೆಗೆದಿದ್ದಾರೆ. ಆಸ್ಪತ್ರೆ ಸಿಬ್ಬಂದಿಯ ಈ ನಡವಳಿಕೆಯಿಂದ ಬೇಸತ್ತಿರುವ ಕುಟುಂಬಸ್ಥರು ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಕಿಡಿಕಾರುತ್ತಿದ್ದಾರೆ.
ಮೃತ ಪಟ್ಟ ವ್ಯಕ್ತಿಗೆ ಕೊರೊನಾ ಇದ್ಯಾ ಇಲ್ವಾ ಅನ್ನೋ ಬಗ್ಗೆ ವೈದ್ಯರು ಸರಿಯಾದ ಮಾಹಿತಿ ಕೊಡ್ತಿಲ್ಲ ಇದರಿಂದ ಕುಟುಂಬಸ್ಥರಿಗೆ ಮೃತ ದೇಹ ತಗೊಂಡು ಹೋಗೋದೇ ದೊಡ್ಡ ಸವಾಲಾಗಿದ್ದು, ಬಿಬಿಎಂಪಿಗೆ ಹೇಳಿದ್ರೆ ನಮ್ಮ ಬಳಿ ಐಸಿಎಂಆರ್ ನಂಬರ್ ಇಲ್ಲದ ಕಾರಣ ಈ ರೋಗಿ ಬಗ್ಗೆ ನಮ್ಮಲ್ಲಿ ಯಾವುದೇ ಮಾಹಿತಿ ದಾಖಲಾಗಿಲ್ಲ ಆದ್ದರಿಂದ ನಾವು ಬಾಡಿ ತಗೊಂಡ್ ಹೋಗೋಲ್ಲ ಅಂತ ಬಿಬಿಎಂಪಿ ಸಿಬ್ಬಂದಿ ವಾಪಸ್ ತೆರಳಿದ್ದಾರೆ.
Published On - 3:35 pm, Sun, 19 July 20