ಗಂಟೆಗಟ್ಟಲೆ ಕಾದರೂ ಚಿಕಿತ್ಸೆ ಸಿಗದೆ ವ್ಯಕ್ತಿ ಸಾವು, ಜಯದೇವ ಆಸ್ಪತ್ರೆಯಲ್ಲಿ ದಾಂಧಲೆ!

| Updated By: ಸಾಧು ಶ್ರೀನಾಥ್​

Updated on: Aug 03, 2020 | 12:14 PM

[lazy-load-videos-and-sticky-control id=”OAqKmKoS1Co”] ಬೆಂಗಳೂರು: ಕೊರೊನಾ ಕಾಲದಲ್ಲಿ ಸಂಕಷ್ಟಗಳ ಸರಮಾಲೆಯೇ ಎದುರಾಗ್ತಿದೆ. ಅದ್ರಲ್ಲೂ ಬೆಂಗಳೂರಿನ ಖಾಸಗಿ ಆಸ್ಪತ್ರೆಗಳು ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡ್ತಿಲ್ಲ. ಇದ್ರಿಂದ ರೊಚ್ಚಿಗೆದ್ದ ರೋಗಿಗಳ ಸಂಬಂಧಿಕರು ಕೊರೊನಾ ವಾರಿಯರ್ ಮೇಲೆ ಮುಗಿಬಿದ್ದಿದ್ರು. ಆಸ್ಪತ್ರೆಯಲ್ಲಿ ದಾಂದಲೆ ಮಾಡಿ ಆಕ್ರೋಶ ಹೊರಹಾಕಿದ್ರು. ಆಸ್ಪತ್ರೆಯ ಗಾಜುಗಳು ಪೀಸ್.. ಪೀಸ್.. ಚೇರ್​ಗಳೆಲ್ಲ ಜಖಂ.. ಬ್ಯಾರಿಕೇಡ್ ಹಾಕಿದ್ರೂ ಜಗ್ಗುತ್ತಿಲ್ಲ.. ಪೊಲೀಸರ ಮನವೊಲಿಕೆಗೂ ಕ್ಯಾರೇ ಅಂತಿಲ್ಲ.. ಏನೇ ಮಾಡಿದ್ರೂ ಆಸ್ಪತ್ರೆ ಸಿಬ್ಬಂದಿ ಮೇಲೆ ಕೋಪ ಮಾತ್ರ ಕಮ್ಮಿ ಆಗ್ತಿಲ್ಲ. ಚಿಕಿತ್ಸೆ ಕೊಡದೆ ರೋಗಿ ಮೃತಪಟ್ಟಿದ್ದಕ್ಕೆ […]

ಗಂಟೆಗಟ್ಟಲೆ ಕಾದರೂ ಚಿಕಿತ್ಸೆ ಸಿಗದೆ ವ್ಯಕ್ತಿ ಸಾವು, ಜಯದೇವ ಆಸ್ಪತ್ರೆಯಲ್ಲಿ ದಾಂಧಲೆ!
Follow us on

[lazy-load-videos-and-sticky-control id=”OAqKmKoS1Co”]

ಬೆಂಗಳೂರು: ಕೊರೊನಾ ಕಾಲದಲ್ಲಿ ಸಂಕಷ್ಟಗಳ ಸರಮಾಲೆಯೇ ಎದುರಾಗ್ತಿದೆ. ಅದ್ರಲ್ಲೂ ಬೆಂಗಳೂರಿನ ಖಾಸಗಿ ಆಸ್ಪತ್ರೆಗಳು ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡ್ತಿಲ್ಲ. ಇದ್ರಿಂದ ರೊಚ್ಚಿಗೆದ್ದ ರೋಗಿಗಳ ಸಂಬಂಧಿಕರು ಕೊರೊನಾ ವಾರಿಯರ್ ಮೇಲೆ ಮುಗಿಬಿದ್ದಿದ್ರು. ಆಸ್ಪತ್ರೆಯಲ್ಲಿ ದಾಂದಲೆ ಮಾಡಿ ಆಕ್ರೋಶ ಹೊರಹಾಕಿದ್ರು.

ಆಸ್ಪತ್ರೆಯ ಗಾಜುಗಳು ಪೀಸ್.. ಪೀಸ್.. ಚೇರ್​ಗಳೆಲ್ಲ ಜಖಂ.. ಬ್ಯಾರಿಕೇಡ್ ಹಾಕಿದ್ರೂ ಜಗ್ಗುತ್ತಿಲ್ಲ.. ಪೊಲೀಸರ ಮನವೊಲಿಕೆಗೂ ಕ್ಯಾರೇ ಅಂತಿಲ್ಲ.. ಏನೇ ಮಾಡಿದ್ರೂ ಆಸ್ಪತ್ರೆ ಸಿಬ್ಬಂದಿ ಮೇಲೆ ಕೋಪ ಮಾತ್ರ ಕಮ್ಮಿ ಆಗ್ತಿಲ್ಲ.

ಚಿಕಿತ್ಸೆ ಕೊಡದೆ ರೋಗಿ ಮೃತಪಟ್ಟಿದ್ದಕ್ಕೆ ಆಕ್ರೋಶ!
ಕೊರೊನಾ ಅಬ್ಬರ ಹೆಚ್ಚಾದಾಗಿನಿಂದ ನಾನ್ ಕೊವಿಡ್ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ಸಿಕ್ತಿಲ್ಲ. ಇದ್ರಿಂದ ರೋಗಿಗಳು ನಿತ್ಯ ಪರದಾಡೋ ಪರಿಸ್ಥಿತಿ ಬಂದೊದಗಿದೆ. ಇದೇ ರೀತಿ ನಿನ್ನೆ ಸಂಜೆ ಅನ್ಸರ್ ಪಾಷಾ ಎಂಬಾತ ಜಯದೇವ ಆಸ್ಪತ್ರೆಗೆ ಬಂದಿದ್ದಾನೆ. ಇದಕ್ಕೂ ಮುನ್ನ ಇಲ್ಲಿ ಆತ ಹಲವು ಬಾರಿ ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆದಿದ್ರೂ ಚೇತರಿಕೆಯಾಗಿರಲಿಲ್ವಂತೆ. ನಿನ್ನೆ ಸಹ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಆಸ್ಪತ್ರೆಗೆ ಬಂದಿದ್ದಾರೆ. ಆದ್ರೆ ಗಂಟೆಗಟ್ಟಲೆ ಕಾದರೂ ಚಿಕಿತ್ಸೆ ನೀಡದೆ ಆಸ್ಪತ್ರೆ ಸಿಬ್ಬಂದಿ ಹೊರಗಡೆ ನಿಲ್ಲಿಸಿದ್ರಂತೆ. ಇದ್ರಿಂದ ಅನ್ಸರ್ ಪಾಷಾ ಮೃತಪಟ್ಟಿದ್ದಾನೆ. ವೈದ್ಯರು ಸರಿಯಾಗಿ ಚಿಕಿತ್ಸೆ ನೀಡದಿರೋದೇ ಸಾವಿಗೆ ಕಾರಣ ಅಂತಾ ಅನ್ಸರ್ ಪಾಷಾ ಕುಟುಂಬಸ್ಥರು ರೊಚ್ಚಿಗೆದ್ರು. ಆಸ್ಪತ್ರೆಯಲ್ಲಿದ್ದ ಬ್ಯಾರಿಕೇಡ್ ತಳ್ಳಿ, ಗಾಜು, ಚೇರ್ ಹೊಡೆದು ಹಾಕಿ ಆಕ್ರೋಶ ಹೊರಹಾಕಿದ್ರು.

ಘಟನೆ ನಡೆದ ಕೂಡಲೇ ಆಸ್ಪತ್ರೆ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದ್ದಾರೆ. ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಆಸ್ಪತ್ರೆಗೆ ನುಗ್ಗಿ ದಾಂದಲೆ ಮಾಡಿರೋರ ವಿರುದ್ಧ ದೂರು ನೀಡಲಾಗಿದೆ. ಸದ್ಯ ಎಫ್​ಐಆರ್ ದಾಖಲಿಸಿಕೊಂಡಿರೋ ಪೊಲೀಸ್ರು ತನಿಖೆ ಶುರು ಮಾಡಿದ್ದಾರೆ.

ಕೊರೊನಾ ಆರ್ಭಟದಲ್ಲಿ ನಾನ್ ಕೊವಿಡ್ ರೋಗಿಗಳಿಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದಿರೋದು ವಿಪರ್ಯಾಸ. ಇದಕ್ಕಾಗಿ ಆಸ್ಪತ್ರೆಯಲ್ಲಿ ದಾಂದಲೆ ಮಾಡಿರೋದು ಮಾತ್ರ ತಪ್ಪು. ಕೊರೊನಾದಂತಾ ಸಂಕಷ್ಟ ಸಮಯದಲ್ಲಿ ತಮ್ಮ ಜೀವವನ್ನೇ ಪಣಕ್ಕಿಟ್ಟು ವೈದ್ಯ ಸಿಬ್ಬಂದಿ ಕಾರ್ಯ ನಿರ್ವಹಿಸ್ತಿದ್ದಾರೆ. ಇಂತಾ ಸಮಯದಲ್ಲಿ ಹೀಗೆ ಮಾಡಿದ್ರೆ, ಅವರ ಆತ್ಮಸ್ಥೈರ್ಯ ಖಂಡಿತವಾಗಿ ಕುಗ್ಗಲಿದೆ ಅನ್ನೋದನ್ನ ಎಲ್ಲರೂ ಅರಿಯಬೇಕಿದೆ.

Published On - 7:06 am, Mon, 3 August 20