Organ Donate: ಮನೆಗೆ ಆಧಾರವಾಗಿದ್ದ ಮಗನ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ಪೋಷಕರು

| Updated By: ಆಯೇಷಾ ಬಾನು

Updated on: Nov 30, 2022 | 12:47 PM

ಅನಿಲ್ ನಿನ್ನೆ‌‌ ಕೆಲಸಕ್ಕೆ‌‌ ತೆರಳುವ ವೇಳೆ ಬೈಕ್ ಮತ್ತು ಕಾರಿನ ನಡುವೆ ದೊಡ್ಡಬಳ್ಳಾಪುರ ತಾಲೂಕಿನ ರಾಜಘಟ್ಟ ಬಳಿ ಅಪಘಾತ ನಡೆದಿದೆ. ಅಪಘಾತದಲ್ಲಿ ತಲೆಗೆ ತೀವ್ರ ಗಾಯವಾದ ಕಾರಣ ಮೆದುಳು ನಿಷ್ಕ್ರಿಯಗೊಂಡಿದೆ.

ದೊಡ್ಡಬಳ್ಳಾಪುರ: ಮಗನ ಸಾವಿನ ನೋವಲ್ಲೂ ಪೋಷಕರು ಸಾರ್ಥಕತೆ ಮೆರೆದಿದ್ದಾರೆ. ಅಪಘಾತದಲ್ಲಿ ಬ್ರೈನ್ ಡೆಡ್ ಆದ ಮಗನ ಅಂಗಾಂಗ ದಾನ ಮಾಡಲು ಕುಟುಂಬಸ್ಥರು ನಿರ್ಧಾರ ಮಾಡಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ಕಂಚಿಗನಾಳ ನಿವಾಸಿ ಅನಿಲ್ ಕುಮಾರ್ (28) ಮೃತ ಯುವಕ.

ಅನಿಲ್ ನಿನ್ನೆ‌‌ ಕೆಲಸಕ್ಕೆ‌‌ ತೆರಳುವ ವೇಳೆ ಬೈಕ್ ಮತ್ತು ಕಾರಿನ ನಡುವೆ ದೊಡ್ಡಬಳ್ಳಾಪುರ ತಾಲೂಕಿನ ರಾಜಘಟ್ಟ ಬಳಿ ಅಪಘಾತ ನಡೆದಿದೆ. ಅಪಘಾತದಲ್ಲಿ ತಲೆಗೆ ತೀವ್ರ ಗಾಯವಾದ ಕಾರಣ ಮೆದುಳು ನಿಷ್ಕ್ರಿಯಗೊಂಡಿದೆ. ಹೀಗಾಗಿ ನಿನ್ನೆಯಿಂದ ಹೆಬ್ಬಾಳ ಬಳಿಯ ಮಣಿಪಾಲ್ ಆಸ್ವತ್ರೆಯಲ್ಲಿ ಅನಿಲ್​ಗೆ ಚಿಕಿತ್ಸೆ ನೀಡಲಾಗಿದೆ. ಆದ್ರೆ ಬ್ರೈನ್ ಡೆತ್ ಆದ ಹಿನ್ನೆಲೆ ಇಂದು ಅಂಗಾಂಗ ಧಾನ ಮಾಡಲು ಕುಟುಂಬ್ಥರು ನಿರ್ಧಾರ ಮಾಡಿದ್ದಾರೆ. ಮೃತನ ಕಣ್ಣು, ಹೃದಯ, ಕಿಡ್ನಿ ಸೇರಿದಂತೆ ಹಲವು ಅಂಗಾಂಗಗಳನ್ನು ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಮೃತ ಅನಿಲ್ ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶದಲ್ಲಿ ಕೆಲಸಕ್ಕೆ ಹೋಗ್ತಿದ್ದ. ನಿನ್ನೆ ‌ಕೆಲಸಕ್ಕೆ‌ ಬೈಕ್ ನಲ್ಲಿ ತೆರಳುವಾಗ‌‌ ಅಪಘಾತ ಸಂಭವಿಸಿತ್ತು. ಮನೆಗೆ ಆಧಾರವಾಗಿದ್ದ ಅನಿಲ್ ಕಳೆದುಕೊಂಡು ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ.

Published on: Nov 30, 2022 12:47 PM