ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ನಟಿ ಕಾವ್ಯಾ ಶೈವ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಲ್ಲಿ 3ನೇ ರನ್ನರ್ ಅಪ್ ಆದರು. ಹಾಗಾಗಿ ಅವರಿಗೆ ಫ್ಯಾನ್ ಫಾಲೋಯಿಂಗ್ ಜಾಸ್ತಿ ಆಗಿದೆ. ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಶರವಣ ಅವರ ಬಂಗಾರದ ಮಳಿಗೆ ಉದ್ಘಾಟನೆಗೆ ಕಾವ್ಯಾ ಶೈವ ಅವರು ಅತಿಥಿಯಾಗಿ ಬಂದಿದ್ದಾರೆ.
ನಟಿ ಕಾವ್ಯಾ ಶೈವ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada 12) ಶೋನಲ್ಲಿ 3ನೇ ರನ್ನರ್ ಅಪ್ ಆದರು. ಹಾಗಾಗಿ ಅವರಿಗೆ ಫ್ಯಾನ್ ಫಾಲೋಯಿಂಗ್ ಜಾಸ್ತಿ ಆಗಿದೆ. ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಶರವಣ ಅವರ ಬಂಗಾರದ ಮಳಿಗೆ ಉದ್ಘಾಟನೆಗೆ ಕಾವ್ಯಾ ಶೈವ (Kavya Shaiva) ಅವರು ಅತಿಥಿಯಾಗಿ ಬಂದಿದ್ದಾರೆ. ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು. ಕಾವ್ಯಾ ಜೊತೆ ಫ್ಯಾನ್ಸ್ ಸೆಲ್ಫಿ ತೆಗೆದುಕೊಂಡರು. ಇದೇ ಕಾರ್ಯಕ್ರಮಕ್ಕೆ ಗಿಲ್ಲಿ ನಟ (Gilli Nata), ಶೋಭಾ ಕರಂದ್ಲಾಜೆ, ಅನುಷಾ ರೈ ಮುಂತಾದ ಸೆಲೆಬ್ರಿಟಿಗಳು ಆಗಮಿಸಿದ್ದರು. ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಸಿದ ಎಲ್ಲರಿಗೂ ಡಿಮ್ಯಾಂಡ್ ಹೆಚ್ಚಿದೆ. ಕಾವ್ಯಾ ಅವರು ಕಿರುತೆರೆ ಮತ್ತು ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
